ಕಾಶ್ಮೀರ: ಭಯೋತ್ಪಾದಕರಿಂದ ಐಇಡಿ ಸ್ಫೋಟ, ಮೂವರು ಪೊಲೀಸರು ಸಾವು

Posted By:
Subscribe to Oneindia Kannada

ಸೋಪೋರೆ (ಜಮ್ಮು-ಕಾಶ್ಮೀರ), ಜನವರಿ 06: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರೆಯಲ್ಲಿ ಶನಿವಾರ ಭಯೋತ್ಪಾದಕರು ಐಇಡಿ ದಾಳಿ ನಡೆಸಿದ್ದಾರೆ.

ಐಇಡಿ ಸ್ಫೋಟದಲ್ಲಿ ಕನಿಷ್ಠ ಮೂವರು ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಭಯೋತ್ದಾದಕರು ಸ್ಫೋಟಸಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

J&K: 3 Policemen have lost their lives due to IED blast in Baramulla District's Sopore

ಡಿಸೆಂಬರ್ 31 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿರುವ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಕನಿಷ್ಠ ಐದು ಸೈನಿಕರು ಸಾವನ್ನಪ್ಪಿ, ಮೂವರು ಯೋಧರು ಗಾಯಗೊಂಡಿದ್ದರು.

ಡಿಸೆಂಬರ್ 22 ರಂದು ಭಯೋತ್ಪಾದಕರು ಶ್ರೀನಗರದಲ್ಲಿನ ನವಕಾಡಲ್ ನ ಬರಿಪೋರಾದಲ್ಲಿ ಎರಡು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದರು. ಅದೃಷ್ವಶಾತ್ ದಾಳಿಯಲ್ಲಿ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ನವೆಂಬರ್ 2 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಐದು ಯೋಧರು ಗಾಯಗೊಂಡಿದ್ದರು.

ಉಗ್ರರು ಭಾರತದ ಗಡಿ ರೇಖೆಯಲ್ಲಿ ಪದೇ-ಪದೇ ದಾಳಿಗಳನ್ನು ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
J&K: 3 Policemen have lost their lives due to IED blast in Baramulla District's Sopore

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ