Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಐಟಿ ಇಲಾಖೆ ನೋಟಿಸ್
ಬೆಂಗಳೂರು, ಸೆಪ್ಟಂಬರ್ 01: ಕೆಲವು ಮೂಲಸೌಕರ್ಯ ಕಂಪನಿಗಳಿಂದ 118 ಕೋಟಿ ರೂಪಾಯಿ ಲಂಚ (ಕಿಕ್‌ಬ್ಯಾಕ್) ಪಡೆದ ಆರೋಪದ ಮೇರೆಗೆ ಆದಾಯ ತೆರಿಗೆ ಇಲಾಖೆ (IT)ಯು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಕಾನೂನು ಪ್ರಕಾರ ಕ್ರಮ ಕೈಕೊಳ್ಳುವ ಬಗ್ಗೆ ಉಲ್ಲೇಖಿಸಿದೆ.
ಚಂದ್ರಬಾಬು ನಾಯ್ಡು ಅವರ ಬಹಿರಂಗಪಡಿಸಿದ ಆದಾಯ ಕುರಿತು ಹೈದರಾಬಾದ್‌ನ ಸೆಂಟ್ರಲ್ ಸರ್ಕಲ್ ಆಗಸ್ಟ್ 4 ರಂದು ಮಾಡಿದ್ದ ಪ್ರಾಥಮಿಕ ಆಕ್ಷೇಪಣೆಗಳನ್ನು ಅವರು ತಿರಸ್ಕರಿಸಿದ್ದರು. ನಂತರ ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಯು ಮರುಮೌಲ್ಯಮಾಪ ಪ್ರಕ್ರಿಯೆ ಕೈಗೊಂಡರು. ಇದಾದ ಬಳಿಕ ಐಟಿ ಕಚೇರಿಗೆ ಮಾಹಿತಿ ನೀಡಿದ ಬಳಿಕ ಮುಂದಿನ ಪ್ರಕ್ರಿಯೆಗಳ ಆರಂಭಕ್ಕೆ ಸೆಕ್ಷನ್ 153 ಸಿ ಅಡಿಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಯಿತು. ಬೋಗಸ್, ಉಪ ಗುತ್ತಿಗೆಗಳ ಮೂಲಕ ಲೆಕ್ಕಕ್ಕೆ ಸಿಗದಷ್ಟು ಆದಾಯ ಗಳಿಸಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ.

ಆದಾಯ ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 153ಸಿ ಅಡಿ ಕಂದಾಯ ಇಲಾಖೆಯಿಂದ ಮಾಜಿ ಸಿಎಂ ಅವರ ಒಂದಷ್ಟು ಮಾಹಿತಿ ಶೋಧಿಸಲಾಗಿದೆ. ಅದನ್ನು ಹೊರತುಪಡಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಪಕ್ಷದ ಸುತ್ತಲೂ ಅಧಿಕಾರಿಗಳು ಒಂದಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬಿಜೆಪಿ-ಟಿಡಿಪಿ ಮೈತ್ರಿ ಸಾಧ್ಯತೆ
ಟಿಡಿಪಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಮೈತ್ರಿ ಆಗುವ ಸಾಧ್ಯತೆಗಳು ಇವೆ ಎಂಬ ಸುದ್ದಿ ಹರಿದಾಡುವಾಗಲೇ ಐಟಿ ಇಲಾಖೆ ಟಿಡಿಪಿಗೆ ಶಾಕ್ ನೀಡಿದೆ. ಕಳೆದ ಜೂನ್ ತಿಂಗಳಲ್ಲಿ ನಾಯ್ಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಭೆ ನಡೆಸಿದ್ದರು. 2014ರ ಕೆಲವು ರಾಜಕೀಯ ಬೆಳವಣಿಗೆ, ಮೈತ್ರಿ ಕುರಿತು ಮಾತುಕತೆಗಳು ಆಗಿದ್ದರಿಂದಲೇ ಮೈತ್ರಿ ವಿಚಾರಕ್ಕೆ ರೆಕ್ಕೆ ಪುಕ್ಕ ಬೆಳೆಯಿತು.
ಇನ್ನೂ ಈ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರಿಗೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಮತ್ತು ಹಣಕಾಸು ಸಚಿವಾಲಯದಿಂದ ಮೇಲ್ ಮಾಡಲಾಗಿದೆ. ಆದರೆ ನಾಯ್ಡು ಅವರು ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಪ್ರಕರಣದ ಮೂಲ ಪತ್ತೆ ಹೇಗೆ?
2017ರ ಡಿಸೆಂಬರ್‌ನಿಂದ ಆಂಧ್ರಪ್ರದೇಶದಲ್ಲಿ ಪೂರ್ಜಿ ಪಲ್ಲೊಂಜಿ & ಕಂ. ಪ್ರೈವೇಟ್ ಲಿಮಿಟೆಡ್ (SPCL) ಕಂಪನಿ ಟೆಂಡರ್ ಪಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ಮನೋಜ್ ವಾಸುದೇವ್ ಪರ್ದಸಾನಿ (ಶೋಕಾಸ್ ನೋಟಿಸ್‌ನಲ್ಲಿ ಎಂವಿಪಿ ಎಂದು ಉಲ್ಲೇಖ)ಅಕ್ರಮ ವಿಚಾರವಾಗಿ ಹುಡುಕಾಟ ನಡೆಸಲಾಗಿತ್ತು.
ಪರ್ದಸಾನಿ ಸಿಕ್ಕ ಬಳಿಕ SPCL ಉಪ-ಗುತ್ತಿಗೆದಾರ ಕಂಪನಿಗಳ ಮೂಲಕ ಹಣವನ್ನು ಗಳಿಸಲು ಬೋಗಸ್ ಸಂಪರ್ಕ ಸಾಧಿಸಲಾಗಿತ್ತು. ಬೋಗಸ್ ಕೆಲಸದ ಆದೇಶ ಹೊರಡಿಸಿದ್ದರ ಬಗ್ಗೆಅವರು ಒಪ್ಪಿಕೊಂಡಿದ್ದಾರೆ. ಇದೇ ರೀತಿ ಅನೇಕ ಮೂಲ ಸೌಕರ್ಯ ಕಂಪನಿಗಳಿಂದ ಹಣ ಮತ್ತು ನಗದು ಉತ್ಪಾದನೆ ಸೋರಿಕೆ ಆಗಿದ್ದರ ಬಗ್ಗೆ ಅಧಿಕಾರಿಗಳು ಶೋಧಕ್ಕೆ ಮುಂದಾಗಿದ್ದರು. ಈ ವೇಳೆ ಪರ್ದಸಾನಿ ಹೇಳಿಕೆ ಮೂಲಕ ಆತನ ಸಹಚರ ವಶಕ್ಕೆ ಪಡೆದಾಗ ಸೋರಿಕೆಯಾದ ಹಣ ಚಂದ್ರಬಾಬು ನಾಯ್ಡು ಅವರಿಗೆ ತಲುಪಿಸಲಾಗಿದೆ ಎಂಬ ಆರೋಪದ ಮೇಲೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ವಿವಿಧ ಕಂಪನಿಗಳಿಂದ ಹಣ ಸುಲಿಗೆ: ಸಾಕ್ಷ್ಯ ಪತ್ತೆ
ಪರ್ದಸಾನಿ ಅವರು 2016ರ ಆಗಸ್ಟ್ ತಿಂಗಳಲ್ಲಿ ನಾಯ್ಡು ಅವರ ಆಪ್ತ ಕಾರ್ಯದರ್ಶಿ ಪಿ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದ್ದರ ಕುರಿತು ಮಾಹಿತಿ ಲಭ್ಯವಾಗಿತ್ತು. ಇನ್ನೂ ಆಂಧ್ರ ಪ್ರದೇಶ ಸರ್ಕಾರದಿಂದ ಕೆಲ ಕಂಪನಿಗಳಿಗೆ ಮಂಜೂರು ಮಾಡಿದ ಯೋಜನೆಗಳಿಂದ ಯಾವುದೇ ಕೆಲಸ ಆಗದಿದ್ದರೂ ಅವರಿಂದ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ.
ಶಾಪೂರ್ಜಿ ಪಲ್ಲೋಂಜಿ (ಎಸ್‌ಪಿ) ಕಂಪನಿ ಬಿಟ್ಟರೆ L&T ಕಂಪನಿಯಿಂದಲೂ ಹಣ ಪಡೆಯಲಾಗಿದೆ.
ಶ್ರೀನಿವಾಸ್‌ಗೆ ನಾಯ್ಡು ಅವರಿಗೆ ಹಣ ತಲುಪಿಸಿದ್ದರ ಬಗ್ಗೆ ಅಧಿಕಾರಿಗಳಿಗೆ ದೋಷಾರೋಪಣೆ ಹೇಳಿಕೆ, ಸಂದೇಶಗಳು, ಎಕ್ಸೆಲ್ ಶೀಟ್‌ಗಳು ಪತ್ತೆ ಆಗಗಿವೆ ಎಂದು ಐಟಿ ಇಲಾಖೆ ಹೇಳಿಕೊಂಡಿದೆ. ಬೋಗಸ್ ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ ಎಂದು ಹೇಳಲಾದ ಉಪ-ಗುತ್ತಿಗೆದಾರರ ವಿವರಗಳನ್ನು ಪಟ್ಟಿ ಮಾಡಿದ ಐಟಿ ಇಲಾಖೆ, ಈ ಘಟಕಗಳು ಸ್ವೀಕರಿಸಿದ ಪಾವತಿಗಳ ಅಂತಿಮ ಫಲಾನುಭವಿ ನಾಯ್ಡು ಎಂದು ಆರೋಪಿಸಿದೆ. ಈ ಎಲ್ ಮಾಹಿತಿ ಸಂಗ್ರಹಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.












Click it and Unblock the Notifications