ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!
ಶ್ರೀಹರಿಕೋಟ(ಆಂಧ್ರಪ್ರದೇಶ), ನವೆಂಬರ್ 29: ಇಂಡಿಯನ್ ಅರ್ಥ್ ಮ್ಯಾಪಿಂಗ್ ಉಪಗ್ರಹ ಹಿಸಿಸ್(HysIS) ಮತ್ತು 8 ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ ಎಲ್ ವಿ(ಪೊಲಾರ್ ಸಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಇಂದು ಇಸ್ರೋ ಉಡ್ಡಯನ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು ಬೆಳಿಗ್ಗೆ 9.58 ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪಿಎಸ್ ಎಲ್ ವಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತು.
ಹಿಸಿಸ್ ಉಪಗ್ರಹವನ್ನು ಇಸ್ರೋ ಸಂಸ್ಥೆಯು ಅಭಿವೃದ್ಧಿ ಪಡಿಸಿದ್ದು, ಐದು ವರ್ಷಗಳ ಆಯುಷ್ಯವನ್ನು ಇದು ಪಡೆದಿದೆ. ಇದು ಪಿಎಸ್ ಎಲ್ ವಿ ಮಿಶನ್ ಸಿ-43 ರ ಪ್ರಾಥಮಿಕ ಉಪಗ್ರಹವಾಗಿದ್ದು, 380 ಕೆಜಿ ತೂಕವಿದೆ.

ಭೂಮಿಯ ಹೊರಮೇಲ್ಮೈ ಅನ್ನು ಅಭ್ಯಸಿಸುವ ಉದ್ದೇಶವನ್ನು ಈ ಉಪಗ್ರಹ ಹೊಂದಿದೆ.
ಇದರೊಟ್ಟಿಗೆ ಒಟ್ಟು ಎಂಟು ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿದ್ದು, ಇದರಲ್ಲಿ ಒಂದು ಮೈಕ್ರೋ ಮತ್ತು 29 ನ್ಯಾನೋ ಉಪಗ್ರಹಗಳು ಸೇರಿವೆ. ಅಮೆರಿಕದ 23 ಉಪಗ್ರಹಗಳು ಮತ್ತು ಆಸ್ಟ್ರೇಲಿಯಾ, ಕೆನಡಾ, ಕೋಲಂಬಿಯಾ, ಫಿನ್ ಲ್ಯಾಂಡ್, ಮಲೇಶಿಯಾ, ನೆಥರ್ಲೆಂಡ್, ಸ್ಪೇನ್ ಗೆ ಸೇರಿದ ಒಟ್ಟು 30 ಉಪಗ್ರಹಗಳನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಅತೀ ದೊಡ್ಡ ಮೈಲಿಗಲ್ಲು ಎನ್ನಿಸಿದೆ.












Click it and Unblock the Notifications