ಇಸ್ರೋದಿಂದ ಈ ಮಾಸಾಂತ್ಯಕ್ಕೆ ಮತ್ತೊಂದು ಮಹತ್ವದ ಉಪಗ್ರಹ ಉಡಾವಣೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವತಿಯಿಂದ ಇದೇ ಮಾಸಾಂತ್ಯಕ್ಕೆ ಹೊಸ ಉಪಗ್ರಹವೊಂದು ಮುಗಿಲ ಕಡೆಗೆ ಪ್ರಯಾಣಿಸಲಿದೆ.

ಇಸ್ರೋನಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ, ಆ. 28 ಕಡೆ ದಿನ

ಭಾರತೀಯ ಪ್ರಾದೇಶಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ (ಐಆರ್ ಎಸ್ಎಸ್ - 1ಎಚ್) ಯೋಜನೆ ಅಡಿಯಲ್ಲಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಐಆರ್ ಎಸ್ಎಸ್ ಮಾದರಿಯಲ್ಲಿ ಈಗಾಗಲೇ 7 ಉಪಗ್ರಹಗಳನ್ನು ಹಾರಿಬಿಡಲಾಗಿದ್ದು, ಇದು ಈ ಯೋಜನೆಯ 8ನೇ ಉಪಗ್ರಹ ಎಂದು ಇಸ್ರೋ ತಿಳಿಸಿದೆ.

ISRO to launch its eight satellite in navigation system series

ಇದೊಂದು ಬಹುಪಯೋಗಿ ಉಪಗ್ರಹವಾಗಿದ್ದು, ಇದರಿಂದ ಭಾರತಕ್ಕೆ ಮಾತ್ರವಲ್ಲ ಐರೋಪ್ಯ ರಾಷ್ಟ್ರಗಳು, ಚೀನಾ, ರಷ್ಯಾಗಳಿಗೆ ಅಗತ್ಯವಾಗಿ ಬೇಕಾದ ದಿಶಾ ದರ್ಶನದ ಕಾರ್ಯಕ್ಕೆ ಉಪಯೋಗವಾಗಲಿದೆ. ಭೂಮಿಯಿಂದ ಉಡಾವಣೆಗೊಂಡ ನಂತರ, ಸುಮಾರು 36 ಸಾವಿರ ಕಿ.ಮೀ. ಎತ್ತರದಿಂದ ಇದು ಕಾರ್ಯಾಚರಣೆ ಮಾಡಲಿದೆ ಎಂದು ಇಸ್ರೋ ವಿವರಿಸಿದೆ.

ISRO former chairman U R Rao demise | Senior leaders reacts on Twitter | Oneindia Kannada

ಸದ್ಯಕ್ಕೆ ಪರೀಕ್ಷೆಯ ಅಂತಿಮ ಹಂತದಲ್ಲಿರುವ ಈ ಉಪಗ್ರಹವನ್ನು ಶೀಘ್ರದಲ್ಲೇ ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಗುತ್ತದೆ ಎಂದಿರುವ ಇಸ್ರೋ, ಉಪಗ್ರಹದ ಉಡಾವಣೆಯ ದಿನಾಂಕ ಹಾಗೂ ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India will launch its eighth navigation satellite this month-end as a spare or back-up for its constellation in the geo-orbit.
Please Wait while comments are loading...