ISRO: 2026ರಲ್ಲಿ ಇಸ್ರೋ ಹೊಸ ಸಾಧನೆ: 16 ಉಪಗ್ರಹ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2026ರಲ್ಲಿ ಮತ್ತೊಂದು ಹೊಸ ಸಾಧನೆ ಮಾಡಿದೆ. ಜನವರಿ 12 ರಂದು ಪಿಎಸ್‌ಎಲ್‌ವಿ ಸಿ 62 (PSLV-C62) ಕಾರ್ಯಾಚರಣೆ ಪ್ರಾರಂಭಿಸಿದೆ. ಇದು ಇಒಎಸ್-ಎನ್ 1 ಭೂ ವೀಕ್ಷಣಾ ಉಪಗ್ರಹ ಸೇರಿದಂತೆ ಒಟ್ಟು 14 ಪೇಲೋಡ್‌ಗಳನ್ನು ಒಳಗೊಂಡಿದ್ದು ಯಶಸ್ವಿ ಬಾಹ್ಯಾಕಾಶ ಉಡಾವಣೆ ಕಂಡಿದೆ. ಇದು ಈ ವರ್ಷ ಉಡಾವಣೆ ಆಗಿರುವ ಮೊದಲ ಉಪಗ್ರಹವಾಗಿದೆ.
ಅನ್ವೇಷಣಾ ಎನ್ನುವ ಉಪಗ್ರಹ ಸೇರಿದಂತೆ ಒಟ್ಟು 16 ಉಪಗ್ರಹಗಳ ಉಡಾವಣೆ ಆಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಆಗಿದೆ. ವಿವಿಧ ದೇಶಗಳಿಗೆ ಸೇರಿದ ಒಟ್ಟು 15 ಉಪಗ್ರಹ ಉಡಾವಣೆ ಜನವರಿ 12ರಂದು ಆಗಿದೆ.
ಇಸ್ರೋ ವರ್ಷದಿಂದ ವರ್ಷಕ್ಕೆ ಹೊಸ ಸಾಧನೆಗಳನ್ನು ಮಾಡುತ್ತಿದ್ದು, 2026ನೇ ಸಾಲಿನಲ್ಲಿ ಹೊಸದೊಂದು ದಾಖಲೆಯನ್ನು ಬರೆದಿದೆ. ಈ ಮೂಲಕ ಭೂವೀಕ್ಷಣಾ ಉಪಗ್ರಹಗಳ ಉಡಾವಣೆ ಆಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಈ ಉಪಗ್ರಹ ಯೋಜನೆಯ ಬಗ್ಗೆ ಅಪ್ಡೇಟ್ಸ್ ನೀಡಿದ್ದಾರೆ. ಪಿಎಸ್‌ಎಲ್‌ವಿ-ಸಿ 62 ಮಿಷನ್ ಜನವರಿ 12ರ ಬೆಳಿಗ್ಗೆ 10.17 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆ ಆಗಿದೆ.

ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಗಳ ವಿಶೇಷತೆ
1. ಜನವರಿ 11ರಂದು 25 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಿತ್ತು.
2. ಇನ್ನು ಇದು ಪಿಎಸ್‌ಎಲ್‌ವಿಯ 64 ನೇ ಹಾರಾಟವಾಗಿದೆ.
3. ಭೂ ವೀಕ್ಷಣಾ ಉಪಗ್ರಹವನ್ನು ಥೈಲ್ಯಾಂಡ್ ಹಾಗೂ ಯುನೈಟೆಡ್ ಕಿಂಗ್‌ಡಮ್ ಜಂಟಿಯಾಗಿ ನಿರ್ಮಿಸಿವೆ.
4. ಜನವರಿ 12 ರಂದು ಉಡಾವಣೆ ಪ್ರಕ್ರಿಯೆಯ ನಂತರ ಇಡೀ ಕಾರ್ಯಾಚರಣೆಯು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
5. ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ನಿರ್ಮಿಸಿದ ಪ್ರಾಥಮಿಕ ಪೇಲೋಡ್ - 'ಭೂಮಿಯ ವೀಕ್ಷಣಾ ಉಪಗ್ರಹ' ಹಾಗೂ 13 ಉಪಗ್ರಹಗಳೊಂದಿಗೆ ಪಿಗ್ಗಿಬ್ಯಾಕ್ ಹಾರಾಟ. 17 ನಿಮಿಷಗಳ ನಂತರ ಉದ್ದೇಶಿತ ಸೂರ್ಯ- ಸಿಂಕ್ರೊನಸ್ ಕಕ್ಷೆಗೆ ನಿಯೋಜಿನೆ.
ಇಸ್ರೋ ಟ್ವೀಟ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2026ರಲ್ಲಿ ಸೋಮವಾರ ಪಿಎಸ್‌ಎಲ್‌ವಿ ಸಿ 62 (PSLV-C62) ಕಾರ್ಯಾಚರಣೆ ಪ್ರಾರಂಭಿಸಿತ್ತು. 16 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಆದರೆ ಮೂರನೇ ಹಂತದಲ್ಲಿ ಈ ಉಪಹಗ್ರಹಗಳು ನಾಪತ್ತೆ ಆಗಿವೆ. ಈ ಸಂಬಂಧ ಇಸ್ರೋ ಟ್ವೀಟ್ ಮಾಡಿದ್ದು, ಪಿಎಸ್‌ಎಲ್‌ವಿ-ಸಿ62 ಮಿಷನ್ ಪಿಎಸ್3 ಹಂತದ ಅಂತ್ಯದಲ್ಲಿ ಅಂತ್ಯಗೊಂಡಿದೆ. ವಿವರವಾದ ವಿಶ್ಲೇಷಣೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ. ಇದು ಭಾರತೀಯರಲ್ಲಿ ಭಾರೀ ನಿರಾಸೆಯನ್ನು ಮೂಡಿಸಿದೆ. ವರ್ಷದ ಮೊದಲ ಉಡಾವಣೆಯೇ ವಿಫಲವಾಗಿದೆ.












Click it and Unblock the Notifications