104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಭಾರತ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) 104 ಉಪಗ್ರಹಗಳನ್ನು ಒಂದೇ ರಾಕೆಟ್ ನಲ್ಲಿ ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ವಿಶ್ವದಾಖಲೆ ಬರೆದಿದೆ.

ಈವರೆಗೆ ಬೇರಾವುದೇ ದೇಶದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಉಪಗ್ರಹಗಳನ್ನು ಉಡಾಯಿಸಿರಲಿಲ್ಲ. ಈಗ, ಇಂಥದ್ದೊಂದು ಮಹಾ ಸಾಧನೆಗೆ ಇಸ್ರೋ ಭಾಜನವಾಗಿದೆ.

ಬುಧವಾರ ಬೆಳಗ್ಗೆ ಸುಮಾರು 9:28ರ ಸುಮಾರಿಗೆ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತ ಇಸ್ರೋ ನಿರ್ಮಿತ ಪಿಎಲ್ಎಲ್ ವಿ ರಾಕೆಟ್ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತು.[ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ]

ಬಾನಂಗಳದಲ್ಲಿ ಸುಮಾರು 500 ಕಿ.ಮೀ. ಸಾಗಿ ಹೋದ ನಂತರ ಎಲ್ಲಾ ಉಪಗ್ರಹಗಳನ್ನೂ ಭೂ ಕಕ್ಷೆಗೆ ಸೇರಿಕೊಂಡವು. ಆ ಕ್ಷಣ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ವಿಶ್ವಮಟ್ಟದಲ್ಲಿ ಹೊಸ ಗರಿಮೆ ತಂದಿತು.

ಅಂದಹಾಗೆ, ಇಸ್ರೋ ನಿರ್ಮಿತ ಪಿಎಸ್ಎಲ್ ವಿ ರಾಕೆಟ್ ಉಡಾವಣಾ ಶ್ರೇಣಿಯಲ್ಲಿ ಇದು 39ನೇ ಉಡಾವಣೆಯಾಗಿದೆ.

ಯಾಕೆ ಇದು ದಾಖಲೆ

ಯಾಕೆ ಇದು ದಾಖಲೆ

ಈ ಹಿಂದೆ, ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನಿಟ್ಟು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉದಾಹರಣೆಯೇ ಇಲ್ಲ. 2014ರಲ್ಲಿ ರಷ್ಯಾ ದೇಶವು 57 ಉಪಗ್ರಹಗಳನ್ನು ಒಂದೇ ರಾಕೆಟ್ ನಲ್ಲಿ ಹಾರಿಸಿದ್ದು ಈವರೆಗಿನ ದಾಖಲೆಯಾಗಿದೆ. ಇನ್ನು, ಅಮೆರಿಕದ 'ನಾಸಾ' ಸಹ 2015ರ ಜೂನ್ ನಲ್ಲಿ ಒಟ್ಟಿಗೆ 29 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡಿತ್ತು. ಅದೇ ವರ್ಷ ಇಸ್ರೋ ಸಹ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.

ಪಿಎಸ್ ಎಲ್ ವಿ ರಾಕೆಟ್ ನ ಒಳಗೇನಿದೆ?

ಪಿಎಸ್ ಎಲ್ ವಿ ರಾಕೆಟ್ ನ ಒಳಗೇನಿದೆ?

ಈ ಬಾರಿ ಬಾಹ್ಯಾಕಾಶಕ್ಕೆ ತೆರಳಿದ್ದ ಇಸ್ರೋನ 'ಪಿಎಸ್ಎಲ್ ವಿ' ರಾಕೆಟ್ ನಲ್ಲಿ ಒಂದು ದೈತ್ಯ ಗಾತ್ರದ ಉಪಗ್ರಹವೊಂದಿದೆ. ಇದರ ಜತೆಯಲ್ಲಿ 103 ನ್ಯಾನೋ ಉಪಗ್ರಹಗಳಿವೆ. ಮುಖ್ಯ ಉಪಗ್ರಹದ ತೂಕ 714 ಕೆಜಿ ಆಗಿದ್ದು, ಉಳಿದ ನ್ಯಾನೋ ಉಪಗ್ರಹಗಳ ಒಟ್ಟಾರೆ ತೂಕ 664 ಕೆಜಿ. ಹಾಗಾಗಿ, ರಾಕೆಟ್ ನಲ್ಲಿರುವ ಒಟ್ಟು ಎಲ್ಲಾ ಉಪಗ್ರಹಗಳ ತೂಕ 1,378 ಕೆಜಿ.

ನಾನಾ ದೇಶಗಳ ಉಪಗ್ರಹಗಳು?

ನಾನಾ ದೇಶಗಳ ಉಪಗ್ರಹಗಳು?

ರಾಕೆಟ್ ನಲ್ಲಿ ಸಾಗಿದ ಮುಖ್ಯ ಉಪಗ್ರಹ ಹಾಗೂ 103 ನ್ಯಾನೋ ಉಪಗ್ರಹಗಳಲ್ಲಿನ ಎರಡು ಉಪಗ್ರಹಗಳು ಇಸ್ರೋಗೆ ಸೇರಿದವು. ಇನ್ನುಳಿದ, 101 ನ್ಯಾನೋ ಉಪಗ್ರಹಗಳಲ್ಲಿ 95 ಅಮೆರಿಕಕ್ಕೆ ಸೇರಿದವಾಗಿದ್ದು, ಇನ್ನುಳಿದವು ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಗಳಿಗೆ ಸೇರಿದವಾಗಿವೆ. ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಬಾಹ್ಯಾಕಾಶ ತಂತ್ರಜ್ಞಾನ ವಿಚಾರದಲ್ಲಿ ಇಸ್ರೋದ ಖಾಯಂ ಗ್ರಾಹಕ ದೇಶಗಳಾಗಿವೆ.

ರಿಮೋಟ್ ಸೆನ್ಸಿಂಗ್ ಉಪಗ್ರಹಗಳು

ರಿಮೋಟ್ ಸೆನ್ಸಿಂಗ್ ಉಪಗ್ರಹಗಳು

ಬುಧವಾರ ಕಳುಹಿಸಲಾದ 104 ಉಪಗ್ರಗಳ ಪೈಕಿ ಭಾರತದ್ದು 3 ಉಪಗ್ರಹಗಳು (ಮುಖ್ಯ ಉಪಗ್ರಹ ಸೇರಿ). ಇವೆಲ್ಲವೂ ಕಾರ್ಟೋಸ್ಯಾಟ್ ಉಪಗ್ರಹ ಮಾದರಿಗಳಾಗಿವೆ. ಕಾರ್ಟೋಸ್ಯಾಟ್ ಉಪಗ್ರಹಗಳು ಇಸ್ರೋದ ವಿಶೇಷ ಬ್ರಾಂಡ್ ಉಪಗ್ರಹಗಳಾಗಿದ್ದು ಇವನ್ನು ರಿಮೋಟ್ ಸೆನ್ಸಿಂಗ್ ಗಾಗಿ ಉಪಯೋಗಿಸಲಾಗುತ್ತದೆ. ಇನ್ನುಳಿದ 103 ಉಪಗ್ರಹಗಳಲ್ಲಿ 13 ಉಪಗ್ರಹಗಳು ಅವುಗಳಿಗೆ ಸಂಬಂಧಪಟ್ಟ ದೇಶಗಳ ಭೂ ಅಧ್ಯಯನಕ್ಕಾಗಿ ಬಳಸಲಾಗುತ್ತವೆ. ಆದರೆ,ಇವುಗಳಲ್ಲಿ 80 ಉಪಗ್ರಹಗಳು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲ್ಪಡುತ್ತವೆ ಎಂದು ಇಸ್ರೋ ಹೇಳಿದೆ. ಈ ಕಾರ್ಟೋಸ್ಯಾಟ್ ಉಪಗ್ರಹಗಳು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿವೆ.

ರಸ್ತೆ, ಜಲ ಸಂಪನ್ಮೂಲ ಅಧ್ಯಯನ ಉದ್ದೇಶ

ರಸ್ತೆ, ಜಲ ಸಂಪನ್ಮೂಲ ಅಧ್ಯಯನ ಉದ್ದೇಶ

ರಿಮೋಟ್ ಸೆನ್ಸಿಂಗ್ ಮೂಲಕ, ದೇಶದ ಕರಾವಳಿ ಪ್ರದೇಶದ ಹವಾಮಾನ, ಭೂಭಾಗಳು, ರಸ್ತೆ ಸಂಪರ್ಕ, ಕರಾವಳಿ ಹೊರತುಪಡಿಸಿದಂತೆ ಇನ್ನುಳಿದ ಪ್ರದೇಶಗಳ ರಸ್ತೆ ಸಂಪರ್ಕಗಳು, ನೀರಿನ ಸಂಪನ್ಮೂಲ, ಡಿಜಿಟಲ್ ಭೂಪಟ ರಚನೆ (ಜಿಪಿಎಸ್ ಸೇವೆಗಳಿಗೆ ನೆರವಾಗುವಂಥ ತಂತ್ರಜ್ಞಾನ) ಮುಂತಾದ ಕಾರ್ಯಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ. ಈ ಬಾರಿ ಭಾರತ ಕಳುಹಿಸಿರುವ ಮುಖ್ಯ ಉಪಗ್ರಹ ಹಾಗೂ ಎರಡು ನ್ಯಾನೋ ಉಪಗ್ರಹಗಳಾದ ಐಎನ್ಎಸ್ 1ಎ ಹಾಗೂ ಐಎನ್ಎಸ್ 1ಬಿ ಗಳೆಲ್ಲವೂ ರಿಮೋಟ್ ಸೆನ್ಸಿಂಗ್ ಗಾಗಿಯೇ ಕಾರ್ಯ ನಿರ್ವಹಿಸಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Space Research Organisation (ISRO) launched a record 104 satellites in one go on Wednesday morning on board a single rocket from the Satish Dhawan Space Centre in Sriharikota, Andhra Pradesh.
Please Wait while comments are loading...