ಐದು ವರ್ಷದಲ್ಲಿ 1,245 ಕೋಟಿ ರೂ. ಆದಾಯ ಸಂಗ್ರಹಿಸಿದ ಇಸ್ರೋ

ನವದೆಹಲಿ, ಡಿಸೆಂಬರ್ 13: ಕಳೆದ ಐದು ವರ್ಷಗಳಲ್ಲಿ ಭಾರತೀಯ ಸಂಶೋಧನಾ ಸಂಸ್ಥೆ (ಇಸ್ರೋ) 26 ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ 1,245 ಕೋಟಿ ರೂ. ಆದಾಯ ಸಂಗ್ರಹಿಸಿದೆ ಎಂದು ಕೇಂದ್ರ ಅಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ಸಂಸತ್‌ಗೆ ತಿಳಿಸಿದರು.

ಸಚಿವರು ಒದಗಿಸಿದ ದಾಖಲೆಗಳ ಪ್ರಕಾರ, 2018-2019ನೇ ಹಣಕಾಸು ವರ್ಷದಲ್ಲಿ ಇಸ್ರೋ 324.19 ಕೋಟಿ ರೂ ಆದಾಯ ಗಳಿಸಿದೆ. ಇದು ಕಳೆದ ಐದು ವರ್ಷಗಳಲ್ಲಿಯೇ ಅತ್ಯಧಿಕವಾಗಿದೆ. 2014-15ರಲ್ಲಿ 252.59 ಕೋಟಿ ರೂ., 2015-16ನೇ ಸಾಲಿನಲ್ಲಿ 227.45 ಕೋಟಿ ರೂ, 2016-17ರಲ್ಲಿ 208.37 ಕೋಟಿ ರೂ. ಮತ್ತು 2017-18ನೇ ಸಾಲಿನಲ್ಲಿ 232.56 ಕೋಟಿ ರೂ. ಆದಾಯ ಸಂಗ್ರಹಿಸಿದೆ.

ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸಿಂಗಪುರ, ಕೆನಡಾ, ದಿ ನೆದರ್‌ಲ್ಯಾಂಡ್ಸ್, ಜಪಾನ್, ಮಲೇಷ್ಯಾ, ಅಲ್ಜೀರಿಯಾ ಮತ್ತು ಫ್ರಾನ್ಸ್‌ ಒಳಗೊಂಡಂತೆ ಒಟ್ಟು ಹತ್ತು ದೇಶಗಳೊಂದಿಗೆ ಕಳೆದ ಐದು ವರ್ಷಗಳಲ್ಲಿ ವಾಣಿಜ್ಯ ಹೊಂದಾಣಿಕೆಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ISRO Earned Rs 1245 Crore In 5 Years

2014ರಿಂದ ಇದುವರೆಗೂ ಭಾರತ 284 ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇದುವರೆಗೂ ಇಸ್ರೋ 33 ದೇಶಗಳ 319 ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಅವುಗಳಲ್ಲಿ 233 ಉಪಗ್ರಹಗಳು ಅಮೆರಿಕ ಒಂದರದ್ದೇ ಆಗಿದೆ. ಭಾರತವು ಮೊದಲು ಉಡಾವಣೆ ಮಾಡಿದ ವಾಣಿಜ್ಯ ಉಪಗ್ರಹಗಳೆಂದರೆ 1999ರಲ್ಲಿ ಜರ್ಮನಿಯ ಡಿಎಲ್ಆರ್-ಟ್ಯೂಬ್‌ಸ್ಯಾಟ್ ಮತ್ತು ದಕ್ಷಿಣ ಕೊರಿಯಾದ ಕಿಟ್‌ಸ್ಯಾಟ್-3.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+