Israel-Iran War: ಇಸ್ರೇಲ್ ದೇಶದಲ್ಲಿ ಇರುವ ಭಾರತೀಯರ ಜೀವಕ್ಕೆ ಕಂಟಕ?

ಭಾರತ ಮೂಲದ ಪ್ರಜೆಗಳು ಇದೀಗ ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಹೋಗಿ ಜೀವನ ಕಟ್ಟಿಕೊಂಡಿದ್ದಾರೆ. ಭಾರತೀಯರ ಬುದ್ಧಿವಂತಿಕೆ & ಸಾಮರ್ಥ್ಯಕ್ಕೆ ಹಾಗೂ ಸೇವೆಗೆ ಜಗತ್ತಿನ ಪ್ರತಿಯೊಂದು ದೇಶವೂ ಸಲ್ಯೂಟ್ ಹೊಡೆಯುತ್ತದೆ. ಅದೇ ರೀತಿ ಇಸ್ರೇಲ್ ದೇಶದಲ್ಲಿ ಕೂಡ ಭಾರಿ ಪ್ರಮಾಣದಲ್ಲಿ ಭಾರತೀಯರು ಹೋಗಿ ಸೆಟಲ್ ಆಗಿದ್ದಾರೆ. ಆದರೆ ಹೀಗೆ ಇಸ್ರೇಲ್‌ನಲ್ಲಿ ಇರುವ ಭಾರತೀಯರಿಗೆ ಭಯ ಶುರುವಾಗಿದ್ದು, ಇರಾನ್ ಕ್ಷಿಪಣಿ & ಬಾಂಬ್ ದಾಳಿ ನಡೆಸಿದ ನಂತರ ಇಸ್ರೇಲ್ ದೇಶದಲ್ಲಿ ಇರುವ ಭಾರತೀಯರ ಜೀವಕ್ಕೆ ಕಂಟಕ?

ಭಾರತ & ಇಸ್ರೇಲ್ ಸುಮಾರು 30 ರಿಂದ 40 ವರ್ಷಗಳಿಂದ ಉತ್ತಮವಾದ ಸಂಬಂಧವನ್ನು ಇಟ್ಟುಕೊಂಡಿವೆ. ಭಾರತ & ಇಸ್ರೇಲ್ ನಡುವೆ ವ್ಯಾಪಾರ & ವಹಿವಾಟು ಮೀರಿದ ಸಂಬಂಧ ಇದ್ದು, ಅಣ್ಣ-ತಮ್ಮನ ರೀತಿ ಬದುಕುತ್ತಿವೆ. ಹಾಗೇ ಭಾರತ ಇದೀಗ ಇರಾನ್ ಜೊತೆ ಹಾಗೂ ಲೆಬನಾನ್ ಜೊತೆ ಕೂಡ ಉತ್ತಮ ಸಂಬಂಧವನ್ನ ಇಟ್ಟುಕೊಂಡಿದೆ. ಇಂತಹ ಸಮಯದಲ್ಲೇ, ಇರಾನ್ ಇದೀಗ ದಿಢೀರ್ ಭೀಕರ ಯುದ್ಧಕ್ಕೆ ಮುನ್ನುಗ್ಗಿದೆ. ಇರಾನ್ ದಾಳಿ ಮಾಡುತ್ತಿರುವ ವೇಗಕ್ಕೆ ಮಧ್ಯಪ್ರಾಚ್ಯ ನಲುಗಿ ಹೋಗಿದೆ. ಇಂತಹ ಸಮಯದಲ್ಲೇ ಪ್ರಶ್ನೆಯೊಂದು ಮೂಡಿದೆ ಅದು ಏನು ಅಂದ್ರೆ, ಇಸ್ರೇಲ್ ಪರವಾಗಿ ಭಾರತ ಯುದ್ಧಕ್ಕೆ ಮುಂದೆ...

Israel-Iran Conflict Implications for Indian Citizens

ಇಸ್ರೇಲ್ ಪರವಾಗಿ ಭಾರತದ ಯುದ್ಧ?

ಭಾರತದ ಸೇನೆ ಬಲಿಷ್ಠವಾಗಿದ್ದು, ಜಗತ್ತಿನ ದೊಡ್ಡ ದೊಡ್ಡ ದೇಶಗಳನ್ನೂ ಮೀರಿಸಿ ಭಾರತ ಮಿಲಿಟರಿ ಪಡೆಯನ್ನ ಕಟ್ಟಿಕೊಂಡಿದೆ. ಇಂತಹ ಸಮಯದಲ್ಲಿ ಇಸ್ರೇಲ್ ಪರವಾಗಿ ಭಾರತವು ಕೂಡ ಯುದ್ಧದ ಅಖಾಡಕ್ಕೆ ಬರುತ್ತಾ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇಸ್ರೇಲ್ ಕೂಡ ಭಾರತದ ಸಹಾಯದ ನಿರೀಕ್ಷೆಯಲ್ಲಿ ಇದ್ದು, ಸಹಾಯ ಬಯಸುತ್ತಿದೆ. ಹೀಗಿದ್ದರೂ ಭಾರತ ಈಗಿನ ಪರಿಸ್ಥಿತಿಯಲ್ಲಿ ಇಸ್ರೇಲ್‌ಗೆ ಯುದ್ಧದ ವಿಚಾರದಲ್ಲಿ ಸಹಾಯ ಮಾಡುವುದು ಅನುಮಾನ ಎನ್ನಬಹುದು. ಯಾಕಂದ್ರೆ ಭಾರತ ಯುದ್ಧದ ವಿಚಾರದಲ್ಲಿ ಬೇರೆಯದ್ದೇ ನಿಲುವು ಹೊಂದಿದೆ.

ಇಸ್ರೇಲ್ ಸಹಾಯಕ್ಕೆ ಭಾರತ?

ಭಾರತಕ್ಕೆ ಯುದ್ಧ ಮಾಡಲು ಇಷ್ಟವಿಲ್ಲ ಹಾಗೂ ಯುದ್ಧಗಳು ನಡೆಯಬಾರದು ಎನ್ನುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಪ್ರತಿಪಾದನೆ ಮಾಡಿ ಶಾಂತಿ ಮಂತ್ರ ಕೂಡ ಜಪಿಸಿದ್ದಾರೆ. ಹೀಗಿದ್ದಾಗ, ಭಾರತ ಯಾವುದೇ ಕಾರಣಕ್ಕೂ ಯುದ್ಧಕ್ಕೆ ಸಹಾಯ ಮಾಡಲು ಸಾಧ್ಯವೇ ಇಲ್ಲ. ಹೀಗಿದ್ದರೂ ಭಾರತ ಇಸ್ರೇಲ್ ಸಹಾಯಕ್ಕೆ ಬರುತ್ತಾ? ಎಂಬ ಚರ್ಚೆಯನ್ನ ಈಗ ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಆದರೆ ಇದು ಅನಗತ್ಯ ಎಂಬ ಬಗ್ಗೆ ಕೂಡ ಮಾತುಗಳು ಕೇಳಿಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಅಶಾಂತ ವಾತಾವರಣ ನಿರ್ಮಾಣ ಆಗಿದ್ದು, ಭಾರತ ಇದೀಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+