ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು
ನವದೆಹಲಿ, ಸೆಪ್ಟೆಂಬರ್ 20: ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆ ಸೇರಿಕೊಂಡಿದ್ದ ಕೇರಳದ ನಿವಾಸಿಯನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.
ಕೇರಳದ ವಯನಾಡಿನ ನಿವಾಸಿಯಾಗಿರುವ 26 ವರ್ಷದ ನಶೀದುಲ್ ಹಮ್ಜಾಫರ್‌ನನ್ನು ಅಫ್ಘಾನಿಸ್ತಾನದ ಭದ್ರತಾ ಸಂಸ್ಥೆಗಳು ಐಸಿಸ್ ಸೇರುವ ಸಲುವಾಗಿ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಕಳೆದ ವರ್ಷ ಬಂಧಿಸಿದ್ದವು.
ಕಾಸರಗೋಡು ಜಿಲ್ಲೆಯ 14 ಆರೋಪಿಗಳು ಭಾರತ ಮತ್ತು ತಾವು ಕೆಲಸ ಮಾಡುತ್ತಿದ್ದ ಮಧ್ಯಪ್ರಾಚ್ಯದಿಂದ 2016ರ ಮೇ ತಿಂಗಳಿನಿಂದ ಜುಲೈ ಆರಂಭದ ವಾರದಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿಕೊಂಡಿದ್ದರು.

ಇತರೆ ಆರೋಪಿಗಳ ಸಹಾಯದೊಂದಿಗೆ ನಶೀದುಲ್, ಸಾಮಾಜಿಕ ಮಾಧ್ಯಮಗಳ ಮೂಲಕ ಈ ಸಂಚಿನ ಭಾಗವಾಗಿ ತೊಡಗಿಕೊಂಡಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.
ಇತರೆ ಆರೋಪಿಗಳಾದ ಅಬ್ದುಲ್ ರಶೀದ್ ಅಬ್ದುಲ್ಲಾ ಮತ್ತು ಅಷ್ಫಕ್ ಮಜೀದ್ ಅವರನ್ನು ತನ್ನ ಕಾಲೇಜು ಸಹಪಾಠಿಗಳಾದ ಶಿಹಾಸ್, ಫೀರೋಜ್ ಖಾನ್ ಮತ್ತು ಬೆಸ್ಟಿನ್ ವಿನ್ಸೆಂಟ್ ಮೂಲಕ ಸಂಪರ್ಕಿಸಿದ್ದ ಎಂಬುದನ್ನು ಎನ್‌ಐಎ ತಿಳಿಸಿದೆ.












Click it and Unblock the Notifications