ಇಶ್ರತ್ ಜಹಾನ್ ಲಷ್ಕರ್ ನ ಮಾನವ ಬಾಂಬರ್
ಮುಂಬೈ, ಫೆ. 11: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಸಿಎಂ ಆಗಿದ್ದ ಕಾಲದಲ್ಲಿ ನಡೆದಿದ್ದ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣಕ್ಕೆ ಉಗ್ರ ಡೇವಿಡ್ ಹೆಡ್ಲಿ ಭಯಂಕರ ತಿರುವು ನೀಡಿದ್ದಾನೆ. 26/11 ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದಂತೆ ನಡೆದಿರುವ ವಿಚಾರಣೆಯ ನಾಲ್ಕನೇ ದಿನದಂದು ಇಶ್ರತ್ ಜಹಾನ್ ಒಬ್ಬ ಲಷ್ಕರ್ ಇ ತೋಯ್ಬಾದ ಮಾನವ ಬಾಂಬರ್ ಎಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾನೆ.
ಈ ಮೂಲಕ ಗುಜರಾತ್ ಪೊಲೀಸರು ನಕಲಿ ಎನ್ ಕೌಂಟರ್ ನಡೆಸಿ ಇಶ್ರತ್ ಜಹಾನ್ ಅವರನ್ನು ಹತ್ಯೆಗೈದರು ಎಂಬ ವಾದಕ್ಕೆ ಭಾರಿ ಪೆಟ್ಟು ಬಿದ್ದಿದೆ. ಇಶ್ರತ್ ಜಹಾನ್ ಉಗ್ರಳಲ್ಲ, ನಕಲಿ ಎನ್ ಕೌಂಟರ್ ನಲ್ಲಿ ಅಂದಿನ ಗುಜರಾತ್ ಸಿಎಂ ಮೋದಿ ಹಾಗೂ ಅಮಿತ್ ಶಾ ಅವರ ಕೈವಾಡವಿದೆ ಎಂಬ ಆರೋಪಗಳು ಈಗ ಬೆಲೆ ಕಳೆದುಕೊಳ್ಳಬಹುದು.[ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್]

ಮುಂಬೈನ ಸೆಷನ್ಸ್ ಕೋರ್ಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಸಂದರ್ಭದಲ್ಲಿ ಡೇವಿಡ್ ಹೆಡ್ಲಿ ಹೇಳಿರುವ ಮಾತುಗಳು ಈಗ ಸಂಚಲನ ಉಂಟು ಮಾಡುತ್ತಿವೆ. ಇಶ್ರತ್ ಜಹಾನ್ ಓರ್ವ ಲಷ್ಕರ್ ಇ ತೋಯ್ಬಾದ ಏಜೆಂಟ್, ಆಕೆ ಮಹಿಳಾ ವಿಂಗ್ ಮುನ್ನಡೆಸುತ್ತಿದ್ದಳು. ಮಾನವ ಬಾಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎಂದಿದ್ದಾನೆ.

2004ರ ಜೂನ್ 15ರಂದು ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳೈ ಹಾಗೂ ಇಬ್ಬರು ಪಾಕಿಸ್ತಾನಿಗಳಾದ ಅಮ್ಜದ್ ಅಲಿ ಹಾಗೂ ಜಿಶಾನ್ ಜೋಹಾರ್ ಅಬ್ದುಲ್ ಘನಿ ಅವರು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದರು.












Click it and Unblock the Notifications