ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ವತಿಯಿಂದ ಸುಷ್ಮಾ ಹೆಸರು ಅಂತಿಮ?

Posted By:
Subscribe to Oneindia Kannada

ನವದೆಹಲಿ, ಜೂನ್ 15: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಪರವಾಗಿ ಕಣಕ್ಕಿಳಿಸಲು ಬಿಜೆಪಿಯ ಥಿಂಕ್ ಟ್ಯಾಂಕ್ ನಿರ್ಧರಿಸಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ವಿದೇಶಾಂಗ ಇಲಾಖೆಯನ್ನು ಈಗಾಗಲೇ ಸಮರ್ಥವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ಸುಷ್ಮಾ ಜೀ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ, ಪ್ರಾಯಶಃ ಅದಕ್ಕೆ ವಿರೋಧ ಪಕ್ಷಗಳಿಂದಲೂ ಬೆಂಬಲ ಸಿಗಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ ಎಂದು ಹೇಳಲಾಗಿದೆ.

Is Sushma Swaraj is final choice of BJP as their candidate for Presidential election?

ಅಲ್ಲದೆ, ಇದಕ್ಕೆ ಆರೆಸ್ಸೆಸ್ ನ ಅನುಮೋದನೆಯೂ ಸಿಕ್ಕಿದೆ ಎಂದೂ ಹೇಳಲಾಗಿದೆ.

ಆದರೆ, ಬಿಜೆಪಿಯ ಕೆಲ ಆಂತರಿಕ ಮೂಲಗಳು ಈ ವಿಚಾರವನ್ನು ತಳ್ಳಿಹಾಕಿವೆ. ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಆರಿಸಲು ಈವರೆಗೆ ನಡೆದಿರುವ ಸಭೆಗಳಲ್ಲಿ ಸುಷ್ಮಾ ಸ್ವರಾಜ್ ಅವರ ಹೆಸರು ಪ್ರಸ್ತಾಪವಾಗಿರುವುದು ನಿಜ. ಆದರೆ, ಅವರ ಹೆಸರು ಅಂತಿಮಗೊಂಡಿಲ್ಲ. ಅದಿನ್ನೂ ಚರ್ಚೆಯಲ್ಲಿದೆ. ಸುಮಿತ್ರಾ ಮಹಾಜನ್ ಹಾಗೂ ದ್ರೌಪದಿ ಮರ್ಮು ಅವರ ಹೆಸರುಗಳೂ ಚಾಲ್ತಿಯಲ್ಲಿವೆ. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಷ್ಮಾ ಅವರ ಹೆಸರೇ ಮಂಚೂಣಿಯಲ್ಲಿದೆ ಎನ್ನುವುದು ಕೇವಲ ಗಾಳಿ ಸುದ್ದಿ ಎಂದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sushma Swaraj has become the lead contender for the next President of India. The name of the External Affairs Minister has emerged as the front runner after deliberations by the BJP's panel.
Please Wait while comments are loading...