ಮಾರ್ಚ್‌ನಿಂದ ₹500 ನೋಟು ರದ್ದಾಗಲಿದೆಯೇ? ವೈರಲ್ ಸುದ್ದಿ ಬಗ್ಗೆ ಇಲ್ಲಿದೆ ಸ್ಪಷ್ಟನೆ
ಈ ಹಿಂದೆ ನೋಟ್ ಬ್ಯಾನ್ ಆಗಿದ್ದನ್ನು ಜನ ಇಂದಿಗೂ ಮರೆತಿಲ್ಲ. ಏಕಾಏಕಿ ತಾವು ಬಳಕೆ ಮಾಡುತ್ತಿದ್ದ ನೋಟುಗಳು ತಕ್ಷಣದಿಂದಲೇ ರದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಬಳಿಕ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು. ಆದರೆ, ಇದೇ ಮಾರ್ಚ್‌ನಿಂದ 2026ರಿಂದ ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳ ವಿತರಣೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಲ್ಲಿಸುತ್ತದೆ ಎಂದು ಹೇಳುವ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸರ್ಕಾರ 500 ರೂ. ನೋಟುಗಳ ಚಲಾವಣೆ ನಿಲ್ಲಿಸಲು ಯೋಜಿಸಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಇದರ ಅಸಲಿಯತ್ತು ಇಲ್ಲಿದೆ.
ಇತ್ತೀಚೆಗೆ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ತನ್ನ ಎಕ್ಸ್ ಖಾತೆಯಲ್ಲಿ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಈ ಗೊಂದಲವನ್ನು ನಿವಾರಿಸುವ ಕೆಲಸ ಮಾಡಿದೆ. ಮಾರ್ಚ್ 2026ರ ವೇಳೆಗೆ ಆರ್‌ಬಿಐ 500 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಲಿದೆ ಎಂದು ಸೂಚಿಸುವ ಸಾಮಾಜಿಕ ಮಾಧ್ಯಮದ ಹೇಳಿಕೆಗಳನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡವು ತಳ್ಳಿಹಾಕಿದೆ.

ಅಲ್ಲದೆ ಈ ವಿಷಯವನ್ನು ಸ್ಪಷ್ಟಪಡಿಸಿರುವ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಅಂತಹ ಎಲ್ಲ ಹೇಳಿಕೆಗಳು ನಕಲಿ ಮತ್ತು ಆರ್‌ಬಿಐ ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ ಎಂದು ಹೇಳಿದೆ. 500 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ ಮತ್ತು ಜನರು ನಗದು ವಹಿವಾಟಿಗೆ ಅದನ್ನು ಬಳಸಬಹುದು ಎಂದು ಜನರಿಗೆ ಭರವಸೆ ನೀಡಿದೆ. ಜನರು ಜಾಗರೂಕರಾಗಿರಿ ಮತ್ತು ಅಂತಹ ವದಂತಿಗಳನ್ನು ನಂಬಬೇಡಿ ಎಂದು ವಿನಂತಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್
ಇಂತಹ ತಪ್ಪು ಮಾಹಿತಿಗೆ ಬಲಿಯಾಗಬೇಡಿ. ಸುದ್ದಿಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಯಾವಾಗಲೂ ಅಧಿಕೃತ ಮೂಲಗಳಿಂದಲೇ ಪರಿಶೀಲಿಸಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಂಡವು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ. ಸರ್ಕಾರಿ ಸ್ವಾಮ್ಯದ ಪಿಐಬಿ ಈ ಸುದ್ದಿಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಈ ಬಗ್ಗೆ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
RBI to stop ₹500 notes from ATMs by March 2026❓🤔
— PIB Fact Check (@PIBFactCheck) January 2, 2026
Some social media posts claim that the Reserve Bank of India will discontinue the circulation of ₹500 notes by March 2026.#PIBFactCheck:
❌This claim is #fake!
✅ @RBI has made NO such announcement.
✅ ₹500 notes have… pic.twitter.com/F0Y3t0wHSf
500 ರೂ. ನೋಟುಗಳನ್ನು ಅಮಾನ್ಯವೆಂದು ಘೋಷಿಸಲಾಗಿಲ್ಲ ಮತ್ತು ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಜನರು ಈಗ ಬಳಸುತ್ತಿರುವ ಎಲ್ಲ 500 ರೂಪಾಯಿ ನೋಟುಗಳು ಸಂಪೂರ್ಣವಾಗಿ ಮಾನ್ಯವಾಗಿವೆ. ಅಂಗಡಿಗಳು, ಬ್ಯಾಂಕುಗಳು ಮತ್ತು ದೈನಂದಿನ ಖರ್ಚುಗಳಿಗೆ ಅವುಗಳನ್ನು ಎಂದಿನಂತೆ ಬಳಸಬಹುದು. ಎಟಿಎಂಗಳಿಂದ ನೋಟುಗಳ ವಿತರಣೆಯನ್ನು ನಿಲ್ಲಿಸಲಾಗುವುದು ಎಂಬ ಮಾಹಿತಿಯೂ ತಪ್ಪಾಗಿದೆ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಮತ್ತು ಎಲ್ಲಾ 100, 200 ಮತ್ತು 500 ರೂಪಾಯಿ ನೋಟುಗಳು ಲಭ್ಯವಿರುತ್ತವೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಸ್ಪಷ್ಟವಾಗಿ ಹೇಳಿದ್ದಾರೆ.
500 ರೂಪಾಯಿ ನೋಟುಗಳ ಬಗ್ಗೆ ಇದೇ ರೀತಿಯ ವದಂತಿ ಈ ಹಿಂದೆಯೂ ಹಲವು ಬಾರಿ ಹರಡಿದ್ದವು. ಕಳೆದ ವರ್ಷವೂ ನೋಟುಗಳನ್ನು ಅಮಾನ್ಯಗೊಳಿಸಲಾಗುವುದು ಎಂಬ ವೀಡಿಯೊ ವೈರಲ್ ಆದಾಗ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ವದಂತಿಯನ್ನು ತಳ್ಳಿಹಾಕಿತು. ಜನರಲ್ಲಿ ಅನಗತ್ಯ ಭಯ ಸೃಷ್ಟಿಸುವುದು ಇಂತಹ ವದಂತಿಗಳ ಉದ್ದೇಶವಾಗಿದೆ. ಸರ್ಕಾರವು ನೋಟು ಅಮಾನ್ಯೀಕರಣದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಾಗ, ಅದನ್ನು ಅಧಿಕೃತವಾಗಿ ಮತ್ತು ಮುಂಚಿತವಾಗಿ ಘೋಷಿಸುತ್ತದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ಭಾರತೀಯ ರಿಸರ್ವ್ ಬ್ಯಾಂಕ್ ವೆಬ್‌ಸೈಟ್ ಮತ್ತು ಸರ್ಕಾರಿ ಪ್ರಕಟಣೆಗಳ ಮೂಲಕ ಮಾತ್ರವೇ ಸಿಗುತ್ತದೆ. ಹಾಗಾಗಿ ಇಂತಹ ಸುಳ್ಳು ಸುದ್ದಿ ನಂಬದಿರಿ ಎಂದು ಸಲಹೆ ನೀಡಿದೆ.
-
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಜೆಎಎಲ್ ದಿವಾಳಿ ಪ್ರಕ್ರಿಯೆ ಬಗ್ಗೆ ವೇದಾಂತ ಆಕ್ಷೇಪ; ಅದಾನಿ ಬಿಡ್ಗೆ ಸಾಲದಾತರ ಸಮಿತಿ, ನ್ಯಾಯಮಂಡಳಿಗಳ ಬೆಂಬಲ ದಾಖಲೆಗಳಿಂದ ದೃಢ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications