ಟೈಗರ್ ಪ್ರಾಜೆಕ್ಟ್ 1973ರಲ್ಲೇ ಆರಂಭ: ಈಗ ಭೇಟಿ ಮಾಡಿ ಕ್ರೆಡಿಟ್ ಪಡೆಯುತ್ತಿರುವ ಪ್ರಧಾನಿ: ಜೈರಾಮ್ ರಮೇಶ್ ಟೀಕೆ
ಬೆಂಗಳೂರು, ಏಪ್ರಿಲ್ 09: ಭಾನುವಾರ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ 50 ವರ್ಷದ ಹಿಂದೆ ಕಾಂಗ್ರೆಸ್ ಮಾಡಿದ್ದ ಯೋಜನೆಯ ಸಂಪೂರ್ಣ ಲಾಭವನ್ನು ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 50 ವರ್ಷಗಳ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮ ಪ್ರಯುಕ್ತ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸಫಾರಿ ಪ್ರಾಣಿ, ಪಕ್ಷಗಳು, ರಾಷ್ಟ್ರೀಯ ಉದ್ಯಾನವನವನ್ನು ಕಂಣ್ತುಂಬಿಕೊಂಡಿದ್ದಾರೆ. ಪ್ರಧಾನಿಯವರ ಈ ಕರ್ನಾಟಕ ಭೇಟಿ ಕುರಿತು ಕಾಂಗ್ರೆಸ್ ಪಕ್ಷ ಮತ್ತದರ ನಾಯಕರುಗಳು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಭಾನುವಾರ ಟ್ವೀಟ್ ಮಾಡಿದ್ದು, ಅದರಲ್ಲಿ '50 ವರ್ಷಗಳ ಹಿಂದೆಯೇ (1973 ರಲ್ಲಿ) ಬಂಡೀಪುರದಲ್ಲಿ ಕಾಂಗ್ರೆಸ್ ಪಕ್ಷ ಪ್ರಾಜೆಕ್ಟ್ ಟೈಗರ್‌ನ ಯೋಜನೆಯನ್ನು ಆರಂಭಿಸಿತ್ತು. ಅದರಿಂದ ಹುಲಿ ಸಂತತಿಯ ರಕ್ಷಣೆಗೆ,ಹೆಚ್ಚಳ ಸಾಧ್ಯವಾಯಿತು. ಇದೀಗ ಇಲ್ಲಿಗೆ ಭೇಟಿ ನೀಡಿರುವ ಮೂಲಕ ಯೋಜನೆಯ ಎಲ್ಲ ಕ್ರೆಡಿಟ್ ಅನ್ನು ಪ್ರಧಾನಿ ಮೋದಿಯವರು ತೆಗೆದುಕೊಳ್ಳಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಬಂಡೀಪುರ: ವಾಸ್ತವ ಬೇರೆ ಇದೆ
ದೇಶದಲ್ಲಿನ ಪರಿಸರ, ಅರಣ್ಯ, ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರನ್ನು ರಕ್ಷಿಸಲು ಮಾಡಿದ ಎಲ್ಲಾ ಕಾನೂನುಗಳು ನಾಶವಾಗುತ್ತಿರುವೆ. ಹೀಗಿರುವಾಗ ಉದ್ಯಾನವನಕ್ಕೆ ಭೇಟಿ ನೀಡಿ ಪ್ರಧಾನಮಂತ್ರಿಗಳು ದೊಡ್ಡ ಚಮತ್ಕಾರವನ್ನೇ ಮಾಡಬಹುದು. ಆದರೆ ಅಲ್ಲಿನ ವಾಸ್ತವವೇ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಅರಣ್ಯ ಮತ್ತು ಅಲ್ಲಿನ ಜನರ ಸಮಸ್ಯೆಗಳ ಕುರಿತು ಹೇಳಿದರು.
ಪ್ರಧಾನಿಮಂದಿತ್ರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದು, ಖಾಕಿ ಪ್ಯಾಂಟ್, ಟೀ ಶರ್ಟ್ ಮತ್ತು ಸಾಹಸ ಗಿಲೆಟ್ ಸ್ಲೀವ್‌ಲೆಸ್ ಜಾಕೆಟ್ ಧರಿಸಿ ಸಫಾರಿ ಮಾಡಿದರು. ಈ ಮೂಲಕ ಭಾರತದ ಅಗ್ರ ಹುಲಿ ಅಭಯಾರಣ್ಯಗಳಲ್ಲಿ ಸ್ಥಾನ ಪಡೆದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಮಂತ್ರಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಧಕ್ಕಿ 75ವರ್ಷ ಆದ ಈ 'ಅಮೃತ್ ಕಾಲ'ದ ಸಂದರ್ಭದಲ್ಲಿ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಹಾಗೂ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಆರಂಭಕ್ಕೆ ಅವರು ಚಾಲನೆ ನೀಡಿಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನಿಂದ 1973 ರಲ್ಲಿ 'ಪ್ರಾಜೆಕ್ಟ್ ಟೈಗರ್' ಯೋಜನೆ
ರಾಜ್ಯ ಅರಣ್ಯ ಇಲಾಖೆ ನೀಡಿದ ಮಾಹಿತಿ ನೋಡುವುದಾದರೆ, 194ರ ಸರ್ಕಾರದ ಅಧಿಸೂಚನೆಯ ಅಡಿಯಲ್ಲಿ ಸ್ಥಾಪಿಸಲಾದ ಅಂದಿನ ವೇಣುಗೋಪಾಲ ವನ್ಯಜೀವಿ ಉದ್ಯಾನವನಕ್ಕೆ ಹೆಚ್ಚಿನ ಅರಣ್ಯ ಪ್ರದೇಶ ಸೇರ್ಪಡೆ ಮಾಡುವ ಮೂಲಕ ರಾಷ್ಟ್ರೀಯ ಉದ್ಯಾನವನ ರಚಿನೆಯಾಯಿತು. ಮೊದಲು 1985 ರಲ್ಲಿ 874.20 ಚದರ ವಿಸ್ತೀರ್ಣದ ಪ್ರದೇಶವನ್ನು ಇಲ್ಲಿ ವಿಸ್ತರಿಸಲಾಯಿತು. ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಂದು ಹೆಸರಿಸಲಾಯಿತು ಎಂದು ಪಿಟಿಐ ವರದಿ ಮಾಡಿದೆ.
ಕಾಂಗ್ರೆಸ್ ಸರ್ಕಾರ ಐದು ದಶಕಗಳ ಹಿಂದೆ 1973 ರಲ್ಲಿ 'ಪ್ರಾಜೆಕ್ಟ್ ಟೈಗರ್' ಯೋಜನೆಯಡಿ ಉದ್ಯಾನವನ ತಂದಿದೆ. ಬಳಿಕ ಕೆಲವು ಪಕ್ಕದ ಮೀಸಲು ಅರಣ್ಯ ಪ್ರದೇಶಗಳನ್ನು 880.02 ಚದರ ಮೀಟರ್ ವರೆಗೆ ವಿಸ್ತರಿಣೆ ಆಯಿತು. ಸದ್ಯ 912.04 ಚದರ ಕಿಲೋ ಮೀಟರ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ನಿಂತ್ರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಮತ್ತು ಸಸ್ಯವರ್ಗ ಇದೆ. ಇಲ್ಲಿ ಶ್ರೀಗಂಧದ ಮರಗಳು, ತೇಗ,ಇಂಡಿಯನ್-ಲಾರೆಲ್, ಇಂಡಿಯನ್ ಕಿನೋ ಮರ, ರೋಸ್‌ವುಡ್ ಹಾಗೂ ಬಿದಿರಿನ ತಳಿಗಳ ಮರಗಿಡಗಳು ಇವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications