ಶಿರಡಿ ದರ್ಶನಕ್ಕೆ IRCTC ಘೋಷಿಸಿದೆ ವಿಶೇಷ ಪ್ಯಾಕೇಜ್ ಟೂರ್
ನವದೆಹಲಿ, ಜುಲೈ 03: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದಮ ನಿಗಮ(IRCTC) ವಿಶೇಷ ತೀರ್ಥಯಾತ್ರೆ ಪ್ಯಾಕೇಜ್ ಘೋಷಿಸಿದೆ. 'ಭಾರತ್ ದರ್ಶನ್ ಸ್ಪೆಷನ್ ಟ್ರೈನ್' ಹೆಸರಿನ ಈ ಆಫರ್ ನಲ್ಲಿ ಪ್ರಮುಖ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಳ್ಳಬಹುದಾಗಿದೆ. ಶಿರಡಿ ಹಾಗೂ ಸುತ್ತಮುತ್ತಲಿನ ಪುಣ್ಯಕ್ಷೇತ್ರಗಳ ದರ್ಶನಕ್ಕೆ 6 ದಿನಗಳ ಪ್ಯಾಕೇಜ್ ಟೂರ್ ಘೋಷಿಸಲಾಗಿದೆ.
ಹರಿದ್ವಾರ ಹಾಗೂ ಋಷಿಕೇಶ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದರ್ಶನ ಪಡೆಯುವ ಟೂರ್ ಈಗಾಗಲೇ ಚಾಲನೆ ಪಡೆದುಕೊಂಡಿದೆ. ಶಿರಡಿ ಪ್ಯಾಕೇಜ್ ಟೂರ್ ನಲ್ಲಿ ಶಿರಡಿ, ಶನಿ ಶಿಂಗ್ನಾಪುರ್, ಮುಕ್ತಿಧಾಮ್, ಪಂಚವಟಿ ಹಾಗೂ ತ್ರಯಂಬಕೇಶ್ವರ್ ದರ್ಶನ ಪಡೆಯಬಹುದು.
ಐಅರ್ ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು. ಅಥವಾ ವಲಯ ಕಚೇರಿಯಲ್ಲಿ ಟಿಕೆಟ್ ಪಡೆಯಬಹುದು.
ಈ ಪ್ಯಾಕೇಜ್ ಟೂರಿನ ದರ 7,955 ರು. 5 ರಾತ್ರಿ ಹಾಗೂ 6 ದಿನಗಳ ಅವಧಿಯನ್ನು ಹೊಂದಿದೆ. ಈ ಪ್ಯಾಕೇಜ್ ಮುಂಬರುವ ವಾರಗಳಿಗೂ ಲಭ್ಯವಾಗಲಿದ್ದು, ಐಆರ್ ಸಿಟಿಸಿ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಪ್ಯಾಕೇಜ್ ಟೂರ್ ವಿವರ
ಪ್ಯಾಕೇಜ್ ಕೋಡ್ : ಎಸ್ ಸಿ ಬಿಆರ್ 01
ಪ್ಯಾಕೇಜ್ ಹೆಸರು: ಶಿರಡಿ ಸಾಯಿ ಬಾಬಾ ದರ್ಶನ್
ಅವಧಿ : 05 ರಾತ್ರಿ/ 6 ದಿನ
ಯಾತ್ರಾ ಸ್ಥಳ : ಶಿರಡಿ(ಸಾಯಿ ಬಾಬಾ), ಶನಿ ಶಿಂಗನಾಪುರ್ ಹಾಗೂ ನಾಸಿಕ್ (ಮುಕ್ತಿಧಾಮ್-ಪಂಚವಟಿ-ತ್ರಯಂಬಕೇಶ್ವರ್)
ದಿನ: ಮಂಗಳವಾರ
ಐಅರ್ ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು. ಅಥವಾ ವಲಯ ಕಚೇರಿಯಲ್ಲಿ ಟಿಕೆಟ್ ಪಡೆಯಬಹುದು. ಈ ಪ್ಯಾಕೇಜ್ ಟೂರಿನ ದರ 7,955 ರು. 5 ರಾತ್ರಿ ಹಾಗೂ 6 ದಿನಗಳ ಅವಧಿಯನ್ನು ಹೊಂದಿದೆ.

ಮೊದಲ 3ದಿನಗಳ ದಿನಚರಿ ಹೀಗಿದೆ
ಮೊದಲ ದಿನ : ಭುವನೇಶ್ವರ್ ರೈಲ್ವೆ ನಿಲ್ದಾಣದಿಂದ ಟ್ರೈನ್ ನಂಬರ್ 22866 ಪುರಿ- ಎಲ್ ಟಿಟಿ ಎಫ್ ಎಫ್ ಎಕ್ಸ್ ಪ್ರೆಸ್ ನಿಂದ ಬೆಳಗ್ಗೆ 6.45ಕ್ಕೆ ಪ್ರಯಾಣ ಆರಂಭ, ಒಂದು ದಿನ ಹಾಗೂ ರಾತ್ರಿ ಪ್ರಯಾಣ.
ಎರಡನೇ ದಿನ: ಮನ್ಮದ್ ರೈಲ್ವೆ ನಿಲ್ದಾಣಕ್ಕೆ 08.17ಗಂಟೆಗೆ ಆಗಮನ, ಶಿರಡಿ ತಲುಪಿದ ಬಳಿಕ ಹೋಟೆಲ್ ನಲ್ಲಿ ಚೆನ್ ಇನ್, ನಂತರ ಶನಿ ಶಿಂಗನಾಪುರಕ್ಕೆ ಪ್ರಯಾಣ, ದರ್ಶನ, ಹೋಟೆಲ್ ನಲ್ಲಿ ರಾತ್ರಿ ನೆಲೆ.
ಮೂರನೇ ದಿನ : ದಿನಪೂರ್ತಿ ಶಿರಡಿಯಲ್ಲಿ ಸಾಯಿಬಾಬಾ ದರ್ಶನಕ್ಕೆ ಮೀಸಲು.

4,5,6 ದಿನದಿಂದ ದಿನಚರಿ
ನಾಲ್ಕನೇ ದಿನ: ನಾಸಿಕ್ ಗೆ ಪ್ರಯಾಣ, ಮುಕ್ತಿಧಾಮ್, ಪಂಚವಟಿ ಹಾಗೂ ತ್ರಯಂಬಕೇಶ್ವರ್ ದರ್ಶನ ನಂತರ ಹೋಟೆಲ್ ಗೆ ವಾಪಸ್, ರಾತ್ರಿ ಊಟ (ನಿಮ್ಮ ಖರ್ಚಲ್ಲೆ)
5ನೇ ದಿನ: ಎಂಎಂಆರ್ ರೈಲ್ವೆ ನಿಲ್ದಾಣಕ್ಕೆ ಬಂದು ಟ್ರೈನ್ ಸಂಖ್ಯೆ 12879, ಎಲ್ ಟಿಟಿ ಬಿಬಿಎಸ್ ಎಸ್ ಎಫ್ ಎಕ್ಸ್ ಪ್ರೆಸ್ 04.30 ಗಂಟೆಗೆ ಏರಿ ಮತ್ತೆ ಒಂದು ದಿನ, ರಾತ್ರಿ ಪ್ರಯಾಣ.
6ನೇ ದಿನ : 07.15ಕ್ಕೆ ಭುವನೇಶ್ವರ್ ರೈಲ್ವೆ ನಿಲ್ದಾಣಕ್ಕೆ ಆಗಮನ

ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯ
* ಟ್ರೈನ್ ಪ್ರಯಾಣವು 3ಎ / ಎಸ್ ಎಲ್ ಕ್ಲಾಸ್ ನಲ್ಲಿರಲಿದೆ.
* ಎಸಿ ವ್ಯವಸ್ಥೆ, ಎಸಿ ಬಸ್ ವ್ಯವಸ್ಥೆ ಪ್ಯಾಕೇಜ್ ನಲ್ಲಿರುವಂತೆ ಸಿಗಲಿದೆ.
* ಸಾಮಾನ್ಯ ದರ್ಶನ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕೆ ನೆರವು ಸಿಗಲಿದೆ.
* ಪ್ರಯಾಣ ವಿಮೆ ಸೌಲಭ್ಯವಿದೆ.
* ಟೋಲ್ ಶುಲ್ಕ, ಪಾರ್ಕಿಂಗ್, ಜಿಎಸ್ಟಿ ಎಲ್ಲವೂ ಸೇರಿರುತ್ತದೆ.
* ಐ ಆರ್ ಸಿಟಿಸಿ ಟೂರಿಸಂ ವೆಬ್ ತಾಣದಲ್ಲಿ ಮಾತ್ರ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಬಹುದು.












Click it and Unblock the Notifications