ಪನ್ಸಾರೆ, ದಭೋಲ್ಕರ್, ಕಲ್ಬುರ್ಗಿರನ್ನು ಸನಾತನ ಸಂಸ್ಥೆ ಕೊಂದಿಲ್ಲ!
ನವದೆಹಲಿ, ಸೆ.22: ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಮುಖ್ಯ ಆರೋಪಿ ರುದ್ರಪಾಟೀಲ್ ಬೆನ್ನು ಹತ್ತಿದೆ. ಈ ನಡುವೆ ಗೋವಿಂದ ಪನ್ಸಾರೆ, ನರೇಂದ್ರ ದಭೋಲ್ಕರ್ ಹಾಗೂ ಪ್ರೊಫೆಸರ್ ಕಲ್ಬುರ್ಗಿ ಹತ್ಯೆ ಹಿಂದೆ ಸನಾತನಾ ಸಂಸ್ಥಾ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅದರೆ, ವಿಚಾರವಂತರರ ಹತ್ಯೆಯನ್ನು ಸಂಸ್ಥಾ ಮಾಡಿಲ್ಲ, ಉಗ್ರವಾದದಲ್ಲಿ ನಂಬಿಕೆ ಇಲ್ಲ ಎಂದು ಸಂಸ್ಥಾದ ವಕ್ತಾರರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.[ಕಲಬುರ್ಗಿ ಹತ್ಯೆ ಮಾಸ್ಟರ್ ಮೈಂಡ್ ಪಾಟೀಲ್]
ಸನಾತನಾ ಸಂಸ್ಥಾ ಹಿಂದೂ ಉಗ್ರವಾದದಲ್ಲಿ ನಂಬಿಕೆ ಇರಿಸಿಕೊಂಡಿದೆ. ವಿಚಾರವಂತರ ಹತ್ಯ್ಗೆ ಸಂಚು ರೂಪಿಸಿದೆ ಎಂಬ ಸುದ್ದಿಯನ್ನು ಸಂಸ್ಥಾದ ವಕ್ತಾರರಾದ ಅಭಯ್ ವಾರ್ತಕ್ ಅವರು ಅಲ್ಲಗೆಳೆದಿದ್ದಾರೆ. ಕಲಬುರಗಿ ಅವರ ಹತ್ಯೆಯ ಪ್ರಮುಖ ಆರೋಪಿಯಾದ ರುದ್ರ ಪಾಟೀಲ್ ಅವರು ಸನಾತನಾ ಸಂಸ್ಥೆಯ ಸದಸ್ಯರಾಗಿರುವುದು ನಿಜ, ಅದರೆ, ಸಾಹಿತಿಗಳ ಹತ್ಯೆಗೂ ಆತನಿಗೂ ಸಂಬಂಧವಿಲ್ಲ ಎಂದು ಅಭಯ್ ಹೇಳಿದ್ದಾರೆ.

ಹಿಂದೂ ಪರ ಸಂಘಟನೆಗಳ ಮೇಲೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ದೊಡ್ಡ ಷಡ್ಯಂತ್ರ ರಚಿಸಲಾಗಿದೆ. ಯಾವುದೇ ಹಿಂದೂ ಸಂಘಟನೆಗಳು ಕೊಲೆ ಮಾಡುವಂಥ ಕೃತ್ಯಕ್ಕೆ ಇಳಿಯುವುದಿಲ್ಲ ಎಂದು ಅಭಯ್ ಹೇಳಿದರು.[ಮೂರು ಹತ್ಯೆಗಳ ನಡುವೆ ಸಾಮ್ಯತೆ]
ಮತ್ತೆ ಮತ್ತೆ ಸಂಸ್ಥಾ ಹೆಸರು ಬಳಸಲಾಗುತ್ತಿದೆ ಏಕೆ?
ಈ ಹಿಂದೆ ಕೂಡಾ ಅನೇಕ ಸ್ಫೋಟ ಪ್ರಕರಣ, ಹತ್ಯೆ ಪ್ರಕರಣಗಳಲ್ಲಿ ಸನಾತನಾ ಸಂಸ್ಥಾ ಹೆಸರು ಕೇಳಿ ಬಂದಿತ್ತು. ಆದರೆ, ಇದುವರೆವಿಗೂ ಸಂಸ್ಥಾ ವಿರುದ್ಧ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಸಿಗುವುದೂ ಇಲ್ಲ. ಸುಳ್ಳು ಸುದ್ದಿ ಎಂದಿಗೂ ಸತ್ಯವಾಗುವುದಿಲ್ಲ. ಈ ರೀತಿ ಕುತಂತ್ರಕ್ಕೆ ನಾವು ಬಲಿಯಾಗುವುದಿಲ್ಲ.
ಸನಾತನಾ ಸಂಸ್ಥಾ ಮೇಲೇಕೆ ಎಲ್ಲರಿಗೂ ಕಣ್ಣು?
ಕಾಂಗ್ರೆಸ್ ಹಾಗೂ ಎನ್ ಸಿಪಿಯಲ್ಲಿರುವ ಅನೇಕ ನಾಯಕರು ತಮ್ಮನ್ನು ಜಾತ್ಯತೀತ ನಾಯಕರು ಎಂದು ಕರೆದುಕೊಳ್ಳುತ್ತಾರೆ. ಅದರೆ, ಪಕ್ಷದ ಒತ್ತಡಕ್ಕೆ ಮಣಿದು ಹಿಂದೂ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ಮಾಡಲು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಾರೆ. ಈಗಲೂ ಕೂಡಾ ಇದೇ ರೀತಿ ಆಗುತ್ತಿದೆ.[ಪ್ರೊ.ಕೆ.ಎಸ್.ಭಗವಾನ್‌ಗೆ ಬೆದರಿಕೆ ಪತ್ರ]
ಹಿಂದೂಗಳ ಪರ ದನಿ ಎತ್ತುವುದೇ ಮುಳುವಾಯಿತೇ?
ನಿಜ, ಹಿಂದೂಗಳ ಪರ ದನಿ ಎತ್ತುವುದನ್ನು ಕೆಲ ಪಕ್ಷಗಳು ಸಹಿಸುವುದಿಲ್ಲ. ವೋಟ್ ಬ್ಯಾಂಕ್ ರಾಜಕೀಯಕ್ಕೆ ಮಾತ್ರ ಎಲ್ಲಾ ವರ್ಗದವರು ಬೇಕಾಗುತ್ತಾರೆ. ಕೆಲವು ಜಾತ್ಯತೀತ ಶಕ್ತಿಗಳು ನಮ್ಮ ವಿರುದ್ಧ ಕಾರ್ಯಾಚರಣೆ ಮಾಡುತ್ತಲೇ ಬಂದಿವೆ. ಅದರೆ, ಇದುವರೆವಿಗೂ ಯಶಸ್ವಿಯಾಗಿಲ್ಲ.

ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರು ಯಾರು?
ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ. ಅತ ನಮ್ಮ ಸಂಸ್ಥಾದ ಸದಸ್ಯನಲ್ಲ. ನಮ್ಮ ಸಂಸ್ಥಾದ ಹಿಂಬಾಲಕ ಅಷ್ಟೇ. ತನಿಖೆ ಮುಂದುವರೆಯಲಿ, ಸತ್ಯ ಜಗತ್ತಿಗೆ ತಿಳಿಯುತ್ತದೆ. ಕಾನೂನಿನ ಪ್ರಕಾರ ಎಲ್ಲವೂ ನಡೆದರೆ ಸತ್ಯ ಬೇಗ ಹೊರಬೀಳಲಿದೆ. ಇಲ್ಲದಿದ್ದರೆ ಸಂಘಟನೆಗಳ ವಿರುದ್ಧ ನಿಷೇಧದ ಅಸ್ತ್ರ ಪ್ರಯೋಗಿಸಲಾಗುತ್ತದೆ.[ಕಲಬುರ್ಗಿ ಹತ್ಯೆ ಕೇಸ್: ಸಿಸಿಟಿವಿಯಿಂದ ಮಹತ್ವದ ಸುಳಿವು ಪತ್ತೆ]
ಪನ್ಸಾರೆ, ಕಲ್ಬುರ್ಗಿ, ದಭೋಲ್ಕರ್ ಹತ್ಯೆ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಮತ್ತೊಮ್ಮೆ ಹೇಳುತ್ತೇನೆ. ಪ್ರಚೋದನಕಾರಿ ಭಾಷಣ ಮಾಡಬಹುದು ಅದರೆ, ಹತ್ಯೆ ಮಾಡುವುದು ಹಿಂದೂ ಸಂಘಟನೆಗಳಿಂದ ಸಾಧ್ಯವಿಲ್ಲ. ಅದು ಎಂದಿಗೂ ನಮ್ಮ ಉದ್ದೇಶವಲ್ಲ. ಹಿಂದೂಗಳನ್ನು ಇಬ್ಭಾಗ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಷಡ್ಯಂತ್ರ ಮಾಡಲಾಗಿದೆ. (ಒನ್ ಇಂಡಿಯಾ ಸುದ್ದಿ)
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications