ಯೋಗ-ಯಾಗ: ಮೋದಿ ಸೇರಿದಂತೆ ಗಣ್ಯರ ಯೋಗಾಚರಣೆ ವಿಡಿಯೋ
ವದೆಹಲಿ, ಜೂನ್ 21: ಭಾರತವೇ ಜಗತ್ತಿಗೆ ಪರಿಚಯಿಸಿದ ಯೋಗಕ್ಕಾಗಿ ದಿನವೊಂದನ್ನು ಗೊತ್ತುಮಾಡಿ, ಆ ಮೂಲಕ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ ಕೆಲಸ ನಾಲ್ಕು ವರ್ಷದಿಂದ ಔಪಚಾರಿಕವಾಗಿ ನಡೆಯುತ್ತಿದೆ. ಜೂನ್ 21, 2015 ರಿಂದ ಪ್ರತಿವರ್ಷ ಯೋಗದಿನವನ್ನು ಆಚರಿಸಲು ವಿಶ್ವಸಂಸ್ಥೆಯೇ ಸಮ್ಮತಿ ಸೂಚಿಸಿದೆ.
ಆದ್ದರಿಂದ ಜಗತ್ತಿನಾದ್ಯಂತ ಈ ದಿನವನ್ನು 'ಯೋಗದಿನ'ವನ್ನಾಗಿ ಆಚರಿಸಿ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರವೇನು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತದೆ.
ಇಂದು ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 55 ಸಾವಿರಕ್ಕೂ ಹೆಚ್ಚು ಜನರೊಟ್ಟಿಗೆ ಯೋಗ ಮಾಡಿ, ಯೋಗದ ಮಹತ್ವ ತಿಳಿಸಿದರು. ಜಗತ್ತನ್ನು ಒಂದುಗೂಡಿಸುವ ಅತ್ಯುತ್ತಮ ಸಾಧನವಾಗಿ ಯೋಗ ಮಹತ್ವ ಪಡೆದುಕೊಂಡಿದೆ ಎಂದು ಇದೇ ಸಂದರ್ಭದಲ್ಲಿ ಮೋದಿ ಹೇಳಿದರು.
In Pics: ವಿಶ್ವ ಯೋಗದಿನ: ಶಾಂತಿ-ಆರೋಗ್ಯದತ್ತ ಯೋಗ ಯಾಗ
ಕರ್ನಾಟಕ ರಾಜ್ಯದಲ್ಲಿ, ದೇಶದಲ್ಲಿ ಜೊತೆಗೆ ವಿಶ್ವದಾದ್ಯಂತ ನಡೆದ ವಿಶ್ವ ಯೋಗದಿನದ ಪ್ರಮುಖ ವಿಡಿಯೋಗಳು ಇಲ್ಲಿವೆ.
|
ಪ್ರಧಾನಿ ಮೋದಿ ಯೋಗಾಚರಣೆ ವಿಡಿಯೋ
ಇಂದಿನ ವೇಗದ ಯುಗದಲ್ಲಿ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯಲು ಯೋಗ ಮಹತ್ವದ ಪಾತ್ರ ವಹಿಸಿದೆ. ಇದು ಶಾಂತಿಯತ್ತ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗವಾಗಿದೆ" ಎಂದ ಪ್ರಧಾನಿ ಮೋದಿ ಡೆಹ್ರಾಡೂನ್ ನ ಫಾರೆಸ್ಟ್ ರೀಸರ್ಚ್ ಇನ್ ಸ್ಟಿಟ್ಯೂಟ್ ನಲ್ಲಿ ವಿಶ್ವ ಯೋಗದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ತಾನೂ ಯೋಗಾಸನ ಮಾಡುವುದರೊಂದಿಗೆ ಆದರ್ಶ ಮೆರೆದರು.
|
ಲೇಹ್ ನ ಸ್ಮಾರಕದಲ್ಲಿ ಸದ್ಗುರು ಯೋಗಾಚರಣೆ
ಅಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ ಅವರು ಲೇಹ್ ನ ಹುತಾತ್ಮ ಸೈನಿಕರ ಸ್ಮಾರಕಕ್ಕೆ ನಮನ ಸಲ್ಲಿಸಿ. ಅಲ್ಲಿಯೇ ಯೋಗ ದಿನಾಚರಣೆ ಆಚರಿಸಿದರು. ನಮ್ಮೆಲ್ಲರ ಸಾಧನೆಗಳಿಗಿಂತ ನಮ್ಮ ಸೈನಿಕರ ತ್ಯಾಗ ಮತ್ತು ಸೇವೆ ದೊಡ್ಡದು ಎನ್ನುವ ಮೂಲಕ ಹುತಾತ್ಮ ಯೋಧರಿಗೆ ಸದ್ಗುರು ನಮನ ಸಲ್ಲಿಸಿದರು.
|
ಯೋಧರ ಯೋಗದಿನಾಚರಣೆ
ಭಾರತ-ಟಿಬೆಡ್ ಗಡಿ ಲಡಾಕ್ ನಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು. ಮೈಕೊರೆವ ಚಳಿ ಮರೆತು, ವಿಶ್ವಕ್ಕೆ ಭಾರತ ನೀಡಿದ ಯೋಗದ ಮಹತ್ವವನ್ನು ಈ ರೀತಿ ತೋರಿಸಿಕೊಟ್ಟರು.
|
ನದಿಯಲ್ಲೇ ಯೋಗದಿನಾಚರಣೆ
ಅರುಣಾಚಲಪ್ರದೇಶದ ದಿಗಾರು ನದಿಯಲ್ಲಿ ಐಟಿಬಿಪಿ ಯೋಧರು ರಿವರ್ ಯೋಗ ಆಚರಿಸಿದರು. ನದಿಯಲ್ಲೇ ಯೋಗ ಮಾಡುವ ಮೂಲಕ ಯೋಗದಿನಕ್ಕೆ ಶುಭ ಹಾರೈಸಿದರು.
|
ಶಾಂತಿ, ಸೌಹಾರ್ದಕ್ಕೆ ಯೋಗ
ಶಾಂತಿ ಮತ್ತು ಸೌಹಾರ್ದಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ವಿಶ್ವಯೋಗದಿನಕ್ಕೆ ಶುಭ ಹಾರೈಸಿದ್ದಾರೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್. ಒಡಿಶಾದ ಪುರಿ ಬೀಚ್ ನಲ್ಲಿ ಈ ಸುಂದರ ಮರಳು ಚಿತ್ರವನ್ನು ಚಿತ್ರಿಸಿದ್ದಾರೆ ಪಟ್ನಾಯಕ್.
|
ಪಿಯೂಷ್ ಗೋಯಲ್ ಯೋಗಾಚರಣೆ
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಶ್ವ ಯೋಗ ದಿನಾಚರಣೆ ಆಚರಿಸಿದ್ದು ಹೀಗೆ.
|
ಚಿಕ್ಕಮಗಳೂರಿನಲ್ಲಿ ಯೋಗದಿನಾಚರಣೆ
ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡರಾದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಸಿ ಟಿ ರವಿ ಯೋಗ ದಿನ ಆಚರಿಸಿದರು. ದೈಹಿನ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯಕ್ಕಾಗಿ ನಾವೆಲ್ಲ ಪ್ರತಿದಿನ ಯೋಗ ಮಾಡಬೇಕು ಎಂದು ಅವರು ಹೇಳಿದರು.
|
ಎಚ್ ಡಿ ದೇವೇಗೌಡರ ಯೋಗಾಸನ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಯೋಗ ಮಾಡಿದ್ದು ಹೀಗೆ!
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications