ಅಂತಾರಾಷ್ಟ್ರೀಯ ಕಾಫಿ ದಿನ... ಕಾಫಿ ಎಂಬ ಅಮೃತ ನಿಮಗೆಷ್ಟು ಇಷ್ಟ?!

'ಯಾಕೋ ವಿಪರೀತ ತಲೆ ನೋವಮ್ಮಾ... ಸ್ವಲ್ಪ ಕಾಫಿ ಮಾಡ್ಕೊಡ್ತೀಯಾ...' ಅಂತ ಸುಳ್ಳು ಸುಳ್ಳೇ ತಲೆ ನೋವು ಭರಿಸಿಕೊಂಡು ಕಾಫಿ ಕುಡಿಯುತ್ತಿದ್ದ ಕಾಲವೊಂದಿತ್ತು. ಕಾಫಿ ಕುಡಿದರೆ ದೇಹದ ಉಷ್ಣತೆ ಹೆಚ್ಚುತ್ತೆ ಎಂಬ ಅಮ್ಮನ ವರಾತದಿಂದಾಗಿ ಕಾಫಿಯಿಂದ ವಂಚಿತರಾಗಿದ್ದ ನಮಗೆ, ಅದು ಸಿಗುತ್ತಿದ್ದುದೇ ಈ ತಲೆನೋವು ಬಂದ ದಿನಗಳಲ್ಲಿ!

ಕೊನೆ ಕೊನೆಗೆ 'ಕಾಫಿ ಕುಡಿಯುವ ಸಲುವಾಗಿ ಬಂದ ಸುಳ್ಳು ತಲೆ ನೋವೇ ಇದು' ಎಂಬುದನ್ನು ಅದ್ಹೇಗೋ ತನಿಖೆ ಮಾಡಿದ್ದ ಅಮ್ಮ, ತಲೆನೋವು ಬಂದರೆ ಅದ್ಯಾವುದೋ ಮನೆಮದ್ದಿನ ಹೊಸ ಕಷಾಯ ಹುಡುಕಿಕೊಂಡುಬಿಟ್ಟಳು! ಅಲ್ಲಿಗೆ ಕಾಫಿ ಕತೆ ಗೋವಿಂದ!

ಅಷ್ಟಕ್ಕೂ ಈ ಕಾಫಿ ಕತೆ ಈಗ ನೆನಪಾಗಿದ್ದೇಕೆ ಅಂದ್ರೆ, ಇಂದು ಅಂತಾರಾಷ್ಟ್ರೀಯ ಕಾಫಿ ದಿನವಂತೆ!

ಕಾಫಿಯ ಕುರಿತು ಪ್ರಚಾರ ಮಾಡುವ ಸಲುವಾಗಿ ಮತ್ತು ಕಾಫಿ ಎಂಬ ಪಾನಿಯದ ಮಹತ್ವವನ್ನು ಸಾರಿ ಹೇಳುವ ಸಲುವಾಗಿ ಅಕ್ಟೋಬರ್ 1 ಅನ್ನು ಪ್ರತಿವರ್ಷ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಅಮೋಘ ರುಚಿಯ ಕಾಫಿಯ ಉಪಯೋಗವೇನು?

ಟ್ವಿಟ್ಟರ್ ನಲ್ಲೂ #internationalcoffeeday ಟಾಪ್ ಟ್ರೆಂಡಿಂಗ್ ಆಗಿದ್ದು, ಲಕ್ಷಾಂತರ ಜನ ಈ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಕಾಫಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿದಿನವೂ ಕಾಫಿ ದಿನ!

"ಓಹ್, ಇಂದು ಅಂತಾರಾಷ್ಟ್ರೀಯ ಕಾಫಿ ದಿನವೇ? ನಾನು ನಿನ್ನೆ ಅಂತರಾಷ್ಟ್ರೀಯ ಕಾಫಿ ದಿನ ಎಂದುಕೊಂಡೆ, ಅಲ್ಲ, ಮೊನ್ನೆ ಎಂದುಕೊಂಡೆ, ಆಚೆಮೊನ್ನೆ ಎಂದುಕೊಂಡೆ... ನಾಳೆ ಎಂದುಕೊಂಡೆ, ನಾಡಿದ್ದು ಎಂದುಕೊಂಡೆ...' ಎಂದು ಪ್ರತಿದಿನವೂ ಕಾಫಿದಿನವೇ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ ಜೆ ಹೋಲ್ಡರ್.

Array

ರಿಲ್ಯಾಕ್ಸ್ ಮತ್ತು ಎಂಜಾಯ್!

'ಅಂತಾರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು. ಕಾಫಿ ನಮ್ಮ ಆರೋಗ್ಯವನ್ನು ಕಾಪಾಡುತ್ತಿದೆ. ಆರಾಮವಾಗಿ ಕುಳಿತುಕೊಂಡು ದಿನ ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯಿರಿ' ಎಂದಿದ್ದಾರೆ ಜೆನ್ನಿ ಬ್ರಾಕಿಸ್.

ಕಾಫಿಯ ಮಹತ್ವ

ಕಾಫಿಯನ್ನು ಕುಡಿಯುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕಾಫಿಯ ಕುರಿತು ಕೆಲವು ಮಹತ್ವದ ಸಂಗತಿಗಳು ಇಲ್ಲಿವೆ ಎಂದು ಕಾಫಿಯ ಕುರಿತ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಅನ್ಮೋಲ್.

Array

ಕಾಫಿ ಅಂದ್ರೆ ಅಮೃತ

ನನಗಂತೂ ಕಾಫಿ ಅಂದ್ರೆ ಅಮೃತವಿದ್ದಂತೆ. ನಾನು ದುಃಖದಲ್ಲಿದ್ದಾಗ ಅದು ನನಗೆ ಖುಷಿ ಕೊಡುತ್ತದೆ, ನಾನು ಸೋಮಾರಿತನದಿಂದ ಮಲಗಿದ್ದಾಗ, ಅದು ಉಲ್ಲಾಸ ತುಂಬಿ ಎಬ್ಬಿಸುತ್ತದೆ, ನಾನು ಬೇಸರದಲ್ಲಿದ್ದಾಗ ನಿದ್ರಿಸುವಂತೆ ಮಾಡುತ್ತದೆ. ಕಾಫಿಗೆ ಮಾಂತ್ರಿಕ ಶಕ್ತಿಯಿದೆ. ಐ ಲವ್ ಕಾಫಿ ಎಂದಿದ್ದಾರೆ ಮೀನಾಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+