ಚಿಮಣಿ ದೀಪದ ಬೆಳಕಲ್ಲಿ ಓದಿ, 20 ಲಕ್ಷದ ಐಟಿ ಕೆಲಸ ಬಿಟ್ಟು ಐಪಿಎಸ್ ಅಧಿಕಾರಿಯಾದ ಶರಣ್ ಕಾಂಬಳೆ

ಬಡತನ ಎನ್ನುವುದು ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಐಪಿಎಸ್ ಅಧಿಕಾರಿ ಶರಣ್ ಕಾಂಬಳೆ ಒಂದೊಳ್ಳೆ ಉದಾಹರಣೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ತಡ್ವಾಲೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು, ಇಂದು ದೇಶವೇ ಹೆಮ್ಮೆಪಡುವಂತಹ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೌದು, ದಿನಗೂಲಿ ಮತ್ತು ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಒಂದು ಬಡ ಕುಟುಂಬದಲ್ಲಿ ಜನಿಸಿದ ಶರಣ್, ತಮ್ಮ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಓದಿನ ಮೇಲಿನ ಆಸಕ್ತಿಯಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

Inspiring Story of IPS Sharan Kamble From Lantern Lit Nights in Solapur to Clearing UPSC Exams

ಶರಣ್ ಅವರ ಪೋಷಕರು ಹೆಚ್ಚಿನ ಶಿಕ್ಷಣ ಪಡೆದಿರಲಿಲ್ಲ. ತರಕಾರಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಪೋಷಕರು, ಎಷ್ಟೇ ಕಷ್ಟ ಬಂದರೂ ಮಗನ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ತಮಗೆ ಉನ್ನತ ಶಿಕ್ಷಣ ಸಿಗದಿದ್ದರೂ, ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಛಲ ಅವರಲ್ಲಿದ್ದಿತ್ತು.

ತಡ್ವಾಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಶರಣ್ ತಮ್ಮ ಪ್ರಾಥಮಿಕ ಶಿಕ್ಷಣವನ್ನ ಮುಗಿಸಿದರು. ಅದರ ನಂತರ, 11 ಮತ್ತು 12ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ಅವರು ಪ್ರತಿದಿನ ಸುಮಾರು 12 ಕಿಲೋಮೀಟರ್ ನಡೆದುಕೊಂಡು ಕಾಲೇಜಿಗೆ ಹೋಗಬೇಕಾಗಿತ್ತು.

ಇನ್ನೂ, ಇವರ ಮನೆಯಲ್ಲಿ ಕರೆಂಟ್‌ ಸಹ ಇರಲಿಲ್ಲ. ಹೀಗಾಗಿ ರಾತ್ರಿಯ ವೇಳೆ ಚಿಮಣಿ ದೀಪದ ಬೆಳಕಿನಲ್ಲಿ ಕುಳಿತು ಓದುತ್ತಿದ್ದರು. ಮಳೆ, ಚಳಿ ಎನ್ನದೆ ಶಾಲೆಗೆ ಹೋಗುತ್ತಿದ್ದ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಓದಿನ ಮೇಲಿನ ಆಸಕ್ತಿ ಮಾತ್ರ ಒಂದು ಚೂರು ಕಡಿಮೆಯಾಗಲಿಲ್ಲ.

20 ಲಕ್ಷದ ಐಟಿ ಕೆಲಸ ಬಿಟ್ಟು ಯುಪಿಎಸ್‌ಸಿ ಕಡೆಗೆ ಒಲವು

ನಂತರ ಶರಣ್, ಸಾಂಗ್ಲಿಯ ವಾಲ್‌ಚಂದ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದರು. ಅದನಂತರ ಪ್ರತಿಷ್ಠಿತ ಐಐಎಸ್‌ಸಿ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನ ಸಹ ಪೂರ್ಣಗೊಳಿಸಿದರು. ಅವರ ಅದ್ಭುತ ಶೈಕ್ಷಣಿಕ ಸಾಧನೆಗೆ ಪ್ರತಿ ವರ್ಷ 20 ಲಕ್ಷ ರೂಪಾಯಿ. ಪ್ಯಾಕೇಜ್‌ನ ಭರ್ಜರಿ ಐಟಿ ಉದ್ಯೋಗಾವಕಾಶ ಒದಗಿಬಂದಿತ್ತು. ಆದರೆ ಶರಣ್ ತಮ್ಮ ತಂದೆ ಗೋಪಿನಾಥ್ ಅವರು ಕಂಡಿದ್ದ ಕನಸನ್ನ ನನಸು ಮಾಡಲು ನಿರ್ಧರಿಸಿದರು.

ಐಟಿ ಕೆಲಸವನ್ನ ಬಿಟ್ಟು, ನಾಗರಿಕ ಸೇವಾ ಪರೀಕ್ಷೆಗಳ ತಯಾರಿಗಾಗಿ ದೆಹಲಿಗೆ ತೆರಳಿದರು. ಮಹಾರಾಷ್ಟ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗುತ್ತಿದ್ದ 12,000 ರೂಪಾಯಿ ವಿದ್ಯಾರ್ಥಿವೇತನ ಅವರ ಎಂಟು ತಿಂಗಳ ಪರೀಕ್ಷಾ ತಯಾರಿಗೆ ಆಸರೆಯಾಯಿತು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸತತ ಯಶಸ್ಸು

ದೆಹಲಿಗೆ ತೆರಳಿ ಕಠಿಣ ತರಬೇತಿ ಹಾಗೂ ಅಧ್ಯಯನದಲ್ಲಿ ತೊಡಗಿಸಿಕೊಂಡ ಶರಣ್ ಕಾಂಬಳೆ, 2019 ರಲ್ಲಿ ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 8ನೇ ರ‍್ಯಾಂಕ್ ಗಳಿಸಿದರು. ನಂತರ 2020ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 542 ನೇ ರ‍್ಯಾಂಕ್ ಗಳಿಸಿ, ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.

ಇಷ್ಟಕ್ಕೆ ಸುಮ್ಮನಾಗದ ಶರಣ್‌, 2021ರಲ್ಲಿ ಮತ್ತೆ ಪರೀಕ್ಷೆ ಬರೆದು 127 ನೇ ರ‍್ಯಾಂಕ್ ಪಡೆದರು. ಈ ಬಾರಿ ಅವರಿಗೆ ಐಎಫ್ಎಸ್ ಕೇಡರ್ ಒದಗಿಬಂದರೂ, ಅವರು ಐಪಿಎಸ್ ಅಧಿಕಾರಿಯಾಗಿಯೇ ಮುಂದುವರಿಯಲು ನಿರ್ಧರಿಸಿದರು.

ಒಂದು ಸಣ್ಣ ಹಳ್ಳಿಯ ಚಿಮಣಿ ದೀಪದ ಬೆಳಕಿನಿಂದ ಹಿಡಿದು ಭಾರತೀಯ ಪೊಲೀಸ್ ಸೇವೆವರೆಗಿನ ಶರಣ್ ಕಾಂಬಳೆ ಅವರ ಪಯಣ, ಛಲ, ಶಿಸ್ತು ಮತ್ತು ಶಿಕ್ಷಣದ ಮೇಲಿನ ಅಚಲವಾದ ನಂಬಿಕೆಯನ್ನ ಪ್ರತಿಬಿಂಬಿಸುತ್ತದೆ. ಸೌಲಭ್ಯಗಳಿಲ್ಲ ಎಂದು ಕೊರಗುವವರ ಮಧ್ಯೆ, ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಸಾಧನೆಯ ಶಿಖರವೇರಿದ ಇವರ ಕಥೆ ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಮಾರ್ಗದರ್ಶನ ಎನ್ನಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+