Inspiring Journey: ಗರ್ಭಿಣಿಯಾಗಿದ್ದಾಗಲೇ UPSC ಪಾಸ್, ಇದು ಇತಿಹಾಸ ಸೃಷ್ಟಿಸಿದ ಲೇಡಿ ಸಿಂಗಂ ಮಂಜಿಲ್ ಸೈನಿ ಕಹಾನಿ

ಕೇಂದ್ರ ಲೋಕಸೇವಾ ಆಯೋಗದ ( upsc) ಪರೀಕ್ಷೆ ಎದುರಿಸುವುದು ಎಂದರೆ ಹಗಲಿರುಳು ಕಷ್ಟಪಡಬೇಕು. ಇದರ ಜೊತೆಗೆ ಲಕ್ಷ ಲಕ್ಷ ಹಣ ಕೊಟ್ಟು ಕೋಚಿಂಗ್‌ ಪಡೆಯಬೇಕು. ಅಂಥದ್ದರಲ್ಲಿ ತುಂಬು ಗರ್ಭಿಣಿಯಾಗಿದ್ದಾಗ ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸುವುದು ಎಂದರೆ ಸಾಮಾನ್ಯದ ಮಾತಲ್ಲ ಅಲ್ಲವೇ?. ಆದ್ರೆ ಇಂತಹ ಅಸಾಮಾನ್ಯ ಸಾಧನೆ ಮಾಡಿದವರೇ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ದಿಟ್ಟ ಅಧಿಕಾರಿ ಮಂಜಿಲ್ ಸೈನಿ.

ಹೌದು, ಐಪಿಎಸ್ ಸೇರಿದ ಭಾರತದ ಮೊದಲ ವಿವಾಹಿತ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಸಾಧನೆ ಹಾಗೂ ವಾಸ್ತವ ಎರಡನ್ನೂ ಸಮಾನವಾಗಿ ಎದುರಿಸಿದ ಇವರ ವೃತ್ತಿಜೀವನದ ಕಥೆ ನಿಜಕ್ಕೂ ಕುತೂಹಲಕಾರಿಯಾಗಿದೆ.

Inspiring Journey of Manzil Saini IPS UP s Lady Singham Who Broke Records amp amp Accepted Failures

ಮಂಜಿಲ್ ಸೈನಿ ಐಪಿಎಸ್ ಹಿನ್ನೆಲೆ

1975ರಲ್ಲಿ ದೆಹಲಿಯಲ್ಲಿ ಜನಿಸಿದ ಮಂಜಿಲ್ ಸೈನಿ ಅವರು ಓದಿನಲ್ಲಿ ಸದಾ ಮುಂದಿದ್ದರು. ಪ್ರಸಿದ್ಧ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದ ಅವರು, ಬಳಿಕ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿ ಚಿನ್ನದ ಪದಕ ಪಡೆದರು. ಶಿಕ್ಷಣ ಮುಗಿದ ನಂತರ ಸುಮಾರು ಮೂರು ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು. ನಂತರ ದೆಹಲಿಯಲ್ಲಿ ಓದುವಾಗ ಪರಿಚಯವಾಗಿದ್ದ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾದರು.

ಕಾರ್ಪೊರೇಟ್ ಕೆಲಸ ಬಿಟ್ಟು 2005ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ವಿಯಾದರು. ಉತ್ತರ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡ ಇವರ ಮೊದಲ ಪೋಸ್ಟಿಂಗ್ ಮೊರಾದಾಬಾದ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ASP) ಆಗಿತ್ತು.

'ಲೇಡಿ ಸಿಂಗಂ ಯುಪಿ' ಎಂಬ ಬಿರುದು ತಂದುಕೊಟ್ಟ ಆ ಭೀಕರ ಪ್ರಕರಣ

ಮಂಜಿಲ್ ಸೈನಿ ಅವರ ಹೆಸರನ್ನ ದೇಶಾದ್ಯಂತ ಜನಪ್ರಿಯಗೊಳಿಸಿದ್ದು 2008ರ ಬೃಹತ್ ಕಿಡ್ನಿ ದಂಧೆ ಪ್ರಕರಣ. ಹೌದು ನೋಡಿ, ಗುರ್ಗಾಂವ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಅಮಾಯಕ ಬಡ ಕಾರ್ಮಿಕರಿಗೆ ಕೆಲಸದ ಆಮಿಷವೊಡ್ಡಿ, ಅವರಿಗೆ ಡ್ರಗ್ಸ್ ನೀಡಿ ಕಿಡ್ನಿ ತೆಗೆದು ಶ್ರೀಮಂತರು ಹಾಗೂ ವಿದೇಶಿ ರೋಗಿಗಳಿಗೆ ಮಾರಾಟ ಮಾಡಲಾಗುತ್ತಿತ್ತು.

ನೂರಾರು ಜನರು ಈ ದಂಧೆಗೆ ಬಲಿಯಾಗಿದ್ದರು. ಈ ಪ್ರಕರಣದ ತನಿಖಾ ತಂಡದಲ್ಲಿದ್ದ ಮಂಜಿಲ್ ಸೈನಿ, ಪ್ರಮುಖ ಆರೋಪಿಗಳನ್ನ ಬಂಧಿಸಿ ಇಡೀ ಜಾಲವನ್ನು ಬೇರುಸಹಿತ ಕಿತ್ತುಹಾಕುವಲ್ಲಿ ಯಶಸ್ವಿಯಾದರು. ಈ ಕಾರ್ಯಾಚರಣೆಯ ಬಳಿಕ ಉತ್ತರ ಪ್ರದೇಶ ಪೊಲೀಸರು ಇವರನ್ನು ಲೇಡಿ ಸಿಂಗಂ ಎಂದೇ ಕರೆಯಲಾರಂಭಿಸಿದರು.

ಲಕ್ನೋದ ಮೊದಲ ಮಹಿಳಾ ಎಸ್‌ಎಸ್‌ಪಿ

ಮಂಜಿಲ್ ಸೈನಿ ಅವರ ಕಾರ್ಯದಕ್ಷತೆಯನ್ನ ಗುರುತಿಸಿದ ರಾಜ್ಯ ಸರ್ಕಾರ, ಮೇ 2016ರಲ್ಲಿ ಅವರನ್ನ ಲಕ್ನೋದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿತು. ಯುಪಿ ಇತಿಹಾಸದಲ್ಲೇ ಈ ಹುದ್ದೆಗೇರಿದ ಮೊದಲ ಮಹಿಳೆ ಇವರಾಗಿದ್ದಾರೆ. ಇದಕ್ಕೂ ಮುನ್ನ ಎಟಾವಾ, ಬದೌನ್, ಮುಜಾಫರ್‌ನಗರ ಹಾಗೂ ಮಥುರಾದಲ್ಲೂ ಸೇವೆ ಸಲ್ಲಿಸಿದ್ದರು.

2017ರಲ್ಲಿ ಮೀರತ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಡಾ. ಶ್ರೀಕಾಂತ್ ಎಂಬುವವರನ್ನ ರಕ್ಷಿಸಿದ ಸಾಹಸಕ್ಕಾಗಿ, ಜನವರಿ 2024ರಲ್ಲಿ ಮಂಜಿಲ್ ಸೈನಿ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ ಲಭಿಸಿದೆ. ಈ ಪ್ರತಿಷ್ಠಿತ ಪದಕ ಪಡೆದ ಯುಪಿಯ ಎರಡನೇ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಕೀರ್ತಿ ಇವರದ್ದು.

ಶ್ರವಣ್ ಸಾಹು ಪ್ರಕರಣ: ಪೊಲೀಸ್ ವೈಫಲ್ಯವನ್ನ ಬಹಿರಂಗವಾಗಿ ಒಪ್ಪಿಕೊಂಡ ದಿಟ್ಟೆ

ಮಂಜಿಲ್ ಸೈನಿ ಅವರ ವೃತ್ತಿಜೀವನ ಕೇವಲ ಸಾಧನೆಗಳ ಸರಮಾಲೆಯಿಂದ ಮಾತ್ರ ಕೂಡಿಲ್ಲ, ಕೆಲವು ವಿವಾದಗಳು ಹಾಗೂ ಕಹಿ ಘಟನೆಗಳು ಕೂಡ ಸೇರಿಕೊಂಡಿವೆ. ಫೆಬ್ರವರಿ 1, 2017ರಂದು ಲಕ್ನೋದಲ್ಲಿ ಶ್ರವಣ್ ಸಾಹು ಎಂಬ ಉದ್ಯಮಿಯ ಹತ್ಯೆಯಾಯಿತು. ತಮ್ಮ ಮಗನ ಕೊಲೆಗಾರರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ಸಾಹು, ಆ ಕೊಲೆಗೆ ತಾವೇ ಏಕೈಕ ಸಾಕ್ಷಿಯಾಗಿದ್ದರು. ತಮಗೆ ಜೀವಬೆದರಿಕೆ ಇದ್ದು ಪೊಲೀಸ್ ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದರೂ, ಅವರಿಗೆ ಭದ್ರತೆ ಒದಗಿಸುವಲ್ಲಿ ಇಲಾಖೆ ವಿಫಲವಾಗಿತ್ತು.

ಈ ಹತ್ಯೆ ನಡೆದಾಗ ಲಕ್ನೋ ಎಸ್‌ಎಸ್‌ಪಿಯಾಗಿದ್ದ ಮಂಜಿಲ್ ಸೈನಿ, ಘಟನೆಯ ನಂತರ ಪತ್ರಿಕಾಗೋಷ್ಠಿ ನಡೆಸಿ, "ಇದು ಪೊಲೀಸ್ ಇಲಾಖೆಯ ವೈಫಲ್ಯ" ಎಂದು ಬಹಿರಂಗವಾಗಿ ಒಪ್ಪಿಕೊಂಡರು. ನಂತರ ಈ ಪ್ರಕರಣದ ಸಿಬಿಐ ತನಿಖೆ ನಡೆದಾಗ, ಭದ್ರತೆ ಒದಗಿಸುವಲ್ಲಿ ಸೈನಿ ಅವರ ನಿರ್ಲಕ್ಷ್ಯವಿದೆ ಎಂದು ವರದಿ ಬಂತು. ಇದರ ಆಧಾರದ ಮೇಲೆ ಇಲಾಖಾ ವಿಚಾರಣೆಯೂ ನಡೆಯಿತು.

ಒಬ್ಬ ಅಧಿಕಾರಿ ದೊಡ್ಡ ಅಪರಾಧ ಜಾಲವನ್ನ ಭೇದಿಸಿ, ಶೌರ್ಯ ಪ್ರಶಸ್ತಿ ಪಡೆದರೆ ಅದು ಸಾಧನೆ. ಆದರೆ, ಅದೇ ಅಧಿಕಾರಿ ತನ್ನ ಇಲಾಖೆಯ ವೈಫಲ್ಯದಿಂದ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಾಗ, ಅದನ್ನ ಮುಚ್ಚಿಹಾಕದೆ ಮಾಧ್ಯಮಗಳ ಮುಂದೆ ನಿಂತು ತಪ್ಪು ಒಪ್ಪಿಕೊಳ್ಳುವುದು ನಿಜಕ್ಕೂ ಅಪರೂಪದ ಗುಣ. ಮಂಜಿಲ್ ಸೈನಿ ಅವರ ಈ ನಡೆಯು ಅವರ ಪ್ರಾಮಾಣಿಕತೆ ಹಾಗೂ ದಿಟ್ಟತನಕ್ಕೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+