ಹೈದ್ರಾಬಾದಿನಲ್ಲಿ ಅಮೃತಾನಂದಮಯಿ, ಗೂಬೆ ಹಿಡಿದ ಹುಡುಗ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,19: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮೂವರು ವಿದ್ಯಾರ್ಥಿಗಳಿಗೆ ನವದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

ಬೆಂಗಳೂರಲ್ಲಿ ಎರಡು ದಿನ ತಂಗಿದ್ದು, ಭಕ್ತ ಮಹಾಶಯರಿಗೆ ತನ್ನ ಆಶೀರ್ವಾದ ನೀಡಿದ ಮಾತಾ ಅಮೃತಾನಂದಮಯಿ ಅವರು ಹೈದರಾಬಾದಿಗೆ ತೆರಳಿದ್ದಾರೆ. ತಮ್ಮ ಬೋಧನೆ ನೀಡಿದ್ದಾರೆ.[ಮಾತಾ ಅಮೃತಾನಂದಮಯಿ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ್ದೇನು?]

ಕೊಲ್ಕತ್ತಾದ ಈಡನ್ ಗಾರ್ಡ್ ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದ ವಿಶ್ವಕಪ್ ಕ್ರಿಕೆಟ್ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಬೀಳುತ್ತಿರುವ ತುಂತುರು ಮಳೆ ಸಂಜೆ 7.30ಕ್ಕೆ ಆರಂಭವಾಗುವ ಆಟಕ್ಕೆ ಅಡ್ಡಿ ಆಗಲಿದೆಯೋ ಎಂದು ಜನರಲ್ಲಿ ಆತಂಕಮೂಡಿದೆ. ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇನ್ನಷ್ಟು ಸುದ್ದಿಗಳು ಇಲ್ಲಿವೆ ನೋಡಿ.

ಗೂಬೆಯನ್ನು ಹಿಡಿದ ಹುಡುಗ

ಗೂಬೆಯನ್ನು ಹಿಡಿದ ಹುಡುಗ

ಗೂಬೆಯನ್ನು ಕಂಡರೆ ನಮಗೆಲ್ಲಾ ಏನೋ ಒಂದು ರೀತಿಯ ಭಯ. ಆದರೆ ಇಲ್ಲೊಬ್ಬ ಹುಡುಗ ಗೂಬೆಯನ್ನು ಕೈ ಮೇಲೆ ಕೂರಿಸಿಕೊಂಡು ಜನರಿಗೆ ಪ್ರದರ್ಶಿಸಿದ್ದು ಹೀಗೆ.

ಆಶೀರ್ವಚನ ನೀಡಿದ ಅಮೃತಾನಂದಮಯಿ

ಆಶೀರ್ವಚನ ನೀಡಿದ ಅಮೃತಾನಂದಮಯಿ

ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ಹೈದರಾಬಾದಿನಲ್ಲಿ ನಡೆದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ನಾವು ನಮ್ಮ ಒಗ್ಗಟ್ಟನ್ನು ಬಿಡಬಾರದು

ನಾವು ನಮ್ಮ ಒಗ್ಗಟ್ಟನ್ನು ಬಿಡಬಾರದು

ದೇಶದ್ರೋಹದ ಆರೋಪದ ಮೇಲೆ ಬಂಧಿತರಾದ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಅನಿರ್ಬನ್, ಉಮಾರ್ ಖಾಲೀದ್ ಅವರನ್ನು ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ. ಆಗ ಉಮಾರ್ ಖಾಲೀದ್ ನೆರೆದಿದ್ದವರನ್ನು ಉದ್ದೇಶಿಸಿ ನಮ್ಮ ಒಗ್ಗಟ್ಟು ಮುರಿಯಲು ನೋಡಿದರು ಆದರೂ ನಾವು ಗೆದ್ದೇವು.

ಚಿತ್ರಪಟದ ಮೇಲೆ ಮೋದಿ ಸಹಿ

ಚಿತ್ರಪಟದ ಮೇಲೆ ಮೋದಿ ಸಹಿ

ರಾಜಸ್ತಾನದ ಪೋಕ್ರಾನ್ ನಲ್ಲಿ ನಡೆದ ಐರಾನ್ ಫಿಸ್ಟ್-2016 ಕಾರ್ಯಕ್ರಮದಲ್ಲಿ ಇಂಡಿಯನ್ ಏರ್ ಫೋರ್ಸ್ ತನ್ನ ಕಾರ್ಯಕ್ಷಮತೆಯ ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಚಿತ್ರಪಟದ ಮೇಲೆ ಸಹಿ ಮಾಡಿದರು.

'ಬುದ್ದ ಇನ್ ಎ ಟ್ರಾಫಿಕ್ ಜಾಮ್' ಚಲನಚಿತ್ರ

'ಬುದ್ದ ಇನ್ ಎ ಟ್ರಾಫಿಕ್ ಜಾಮ್' ಚಲನಚಿತ್ರ

ಬಾಲಿವುಡ್ ನಟ ಅನುಪಮ್ ಖೇರ್ ಜೆಎನ್ ಯು ವಿಶ್ವವಿದ್ಯಾಲಯದಲ್ಲಿ 'ಬುದ್ದ ಇನ್ ಎ ಟ್ರಾಫಿಕ್ ಜಾಮ್' ಎಂಬ ಚಲನಚಿತ್ರ ಪ್ರದರ್ಶನ ಮಾಡಿದರು. ಇವರೊಂದಿಗೆ ಫಿಲ್ಮ್ ಮೇಕರ್ ಅಶೋಕ್ ಪಂಡಿತ್ ಸಹ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Inshort news of New delhi, Hyderabad, kolkata. Indian cricketers during a practice session at the Eden Gardens in Kolkata. Prime Minister Narendra Modi signing a painting at IAF Fire Power Demonstration 'IRON FIST 2016', at Pokhran, Rajasthan
Please Wait while comments are loading...