Indore stepwell disaster: ರಕ್ಷಣೆ ವೇಳೆ ತುಂಡಾದ ಹಗ್ಗ- ಮತ್ತೆ ಬಾವಿಗೆ ಬಿದ್ದ ಮಹಿಳೆ
ಇಂದೋರ್ ಏಪ್ರಿಲ್ 1: ಮಧ್ಯಪ್ರದೇಶ ರಾಜ್ಯದ ಆರ್ಥಿಕ ರಾಜಧಾನಿ ಇಂದೋರ್‌ಗೆ ಗುರುವಾರ ಅಕ್ಷರಶ: ನೋವಿನ ದಿನವಾಗಿತ್ತು. ರಾಮನವಮಿ ಆಚರಣೆಯಲ್ಲಿದ್ದ ಜನ ಶೋಕದಲ್ಲಿ ಮುಳುಗುವಂತಾಗಿದೆ. ಬಾಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಕೆಲವರು ದೇವಸ್ಥಾನದಲ್ಲಿರುವ ಮೆಟ್ಟಿಲುಬಾವಿಯ ಚಪ್ಪಡಿ ಮೇಲೆ ಕುಳಿತು ಹವನ ಪೂಜೆ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಮೆಟ್ಟಿಲು ಬಾವಿ ಕುಸಿದು ದುರ್ಘಟನೆ ನಡೆದಿದೆ.
ಸ್ಲ್ಯಾಬ್ ಕುಸಿದು 50 ಕ್ಕೂ ಹೆಚ್ಚು ಜನರು ಮೆಟ್ಟಿಲುಬಾವಿಯಲ್ಲಿ ಬಿದ್ದರು. ಇಂದೋರ್‌ನ ಬೆಲೇಶ್ವರ್ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ಆಘಾತಕಾರಿ ಘಟನೆ ನಡೆದಿದೆ. ಹಗ್ಗದ ಸಹಾಯದಿಂದ ಮಹಿಳೆಯೊಬ್ಬರನ್ನು ಮೇಲೆತ್ತುವ ವೇಳೆ ಹಗ್ಗ ತುಂಡಾಗಿ ಮತ್ತೆ ಮೆಟ್ಟಿಲು ಬಾವಿಗೆ ಬಿದ್ದಿದ್ದಾರೆ.

ರಾಮನವಮಿ ಆಚರಣೆಗೆಂದು (ಮಾರ್ಚ್ 30) ದೇವಸ್ಥಾನದಲ್ಲಿ ಸೇರಿದ್ದ ವೇಳೆ ಮೆಟ್ಟಿಲುಬಾವಿ ಛಾವಣಿ ಕುಸಿದು ಅದರ ಮೇಲೆ ಕುಳಿತಿದ್ದ ಇಪ್ಪತ್ತಕ್ಕೂ ಹೆಚ್ಚು ಜನ ಬಾವಿಗೆ ಬಿದ್ದಿದ್ದಾರೆ. ರಕ್ಷಣಾ ತಂಡಗಳು ಈವರೆಗೆ 36 ಮೃತದೇಹಗಳನ್ನು ಹೊರತೆಗೆದಿವೆ. ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೆಟ್ಟಿಲುಬಾವಿಯಿಂದ ತೆರವುಗೊಂಡ 18 ಮಂದಿಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಮತ್ತೊಂದೆಡೆ ಈ ಘಟನೆ ಬಳಿಕ ಪಟೇಲ್ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪಾರುಗಾಣಿಕಾ ಕಾರ್ಯಾಚರಣೆ ವೇಳೆ ಮಹಿಳೆಯನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲೆತ್ತುವ ವೇಳೆ ಹಗ್ಗ ತುಂಡಾಗಿ ಆಕೆ ಮತ್ತೆ ಬಾವಿಗೆ ಬಿದ್ದಿದ್ದಾಳೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಶಕ್ತಿ ಕಳೆದುಕೊಂಡಿದ್ದಳು. ಏಣಿಯನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ರಕ್ಷಣಾ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಮಹಿಳೆ ಶಕ್ತಿ ಕಳೆದುಕೊಂಡು, ಏರಲು ಸಾಧ್ಯವಾಗಲಿಲ್ಲ. ಸುರಕ್ಷಿತವಾಗಿ ತಲುಪುವಷ್ಟರಲ್ಲಿ ಆಕೆಯನ್ನು ಹಿಡಿದಿದ್ದ ಹಗ್ಗ ತುಂಡಾಗಿ ಮಹಿಳೆ ಮತ್ತೆ ಬಾವಿಗೆ ಬಿದ್ದಿದ್ದಾಳೆ. ಬಳಿಕ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.

ದೇವಾಲಯದ ಗುಹೆಯ ಭಾಗದ ಸುತ್ತಲೂ ರಕ್ಷಣಾ ಕಾರ್ಯಕರ್ತರು ಜಮಾಯಿಸಿದ್ದು, ಅವರು ಬಾವಿಯಲ್ಲಿ ಬಿದ್ದ ಭಕ್ತರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಇಂದೋರ್ ದೇವಾಲಯ ದುರಂತ
ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ರಾಮನವಮಿ ಆಚರಣೆಯ ವೇಳೆ ದೇವಸ್ಥಾನದಲ್ಲಿ ಮೆಟ್ಟಿಲುಬಾವಿ ಛಾವಣಿ ಕುಸಿದು ದುರಂತ ಸಂಭವಿಸಿದೆ. ಶೀಘ್ರದಲ್ಲೇ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ನಾಗರಿಕ ರಕ್ಷಣಾ ತಂಡಗಳು ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು, ಸ್ಥಳೀಯರೊಂದಿಗೆ ಬಾವಿಯಿಂದ ಜನರನ್ನು ಹೊರತೆಗೆಯಲು ಪ್ರಯತ್ನಿಸಿದವು. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಹತ್ತಿರದ ಮ್ಹೋ ಪಟ್ಟಣದಿಂದ ಸೇನಾ ರಕ್ಷಣಾ ತಂಡವನ್ನು ಸಹ ಕರೆಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಶಿವಶಂಕರ್ ಮೌರ್ಯ, ಈ ದೇವಾಲಯವನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಚೌಕಾಕಾರದ ಮೆಟ್ಟಿಲುಬಾವಿ 100 ವರ್ಷಗಳಷ್ಟು ಹಳೆಯದಾಗಿದೆ. "ಮೊದಲು, ಮೆಟ್ಟಿಲುಬಾವಿ ತೆರೆದಿತ್ತು, ಆದರೆ ಸುಮಾರು 25 ವರ್ಷಗಳ ಹಿಂದೆ ಮುಚ್ಚಲಾಯಿತು" ಎಂದು ಮೌರ್ಯ ಹೇಳಿದರು. ಮೆಟ್ಟಿಲುಬಾವಿಯ ಮೇಲ್ಛಾವಣಿ ನಿರ್ಮಾಣವು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಮೌರ್ಯ ಹೇಳಿದರು.

ದೇವಾಲಯದ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದು 36 ಜನರ ಸಾವಿಗೆ ಕಾರಣವಾದ ಘಟನೆಯ ನಂತರ ಇಂದೋರ್ ಪುರಸಭೆಯ ಆಯುಕ್ತರು ಸ್ಥಳೀಯ ಕಟ್ಟಡ ನಿರೀಕ್ಷಕ ಮತ್ತು ಕಟ್ಟಡ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ತನಿಖೆಗೆ ಆದೇಶ
ಅಪಘಾತದ ನಂತರ ಮೃತರ ಮತ್ತು ಗಾಯಾಳುಗಳ ಸಂಬಂಧಿಕರು ಹಾಗೂ ನಗರದ ನಿವಾಸಿಗಳು ಎತ್ತಿರುವ ಬೇಡಿಕೆಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಇಳಯ್ಯ ರಾಜಾ ಟಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಇಳಯ್ಯ ರಾಜಾ ಟಿ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಅಭಯ ಬೇಡಕರ್ ಅವರಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಿದ್ದಾರೆ. ಅಲ್ಲದೆ, ಘಟನೆಯ ತನಿಖೆಗೆ ಜಿಲ್ಲಾಧಿಕಾರಿ ಇಳಯ್ಯ ರಾಜಾ ಟಿ 15 ದಿನಗಳನ್ನು ನಿಗದಿಪಡಿಸಿದ್ದಾರೆ. ಇದರೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸಬೇಕಾದ ಅಂಶಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಈ ಕುರಿತು ಹೊರಡಿಸಿರುವ ಆದೇಶದ ಪ್ರಕಾರ ಮೃತರು ಯಾವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಸಂಭವಿಸಿದ ಸಂಪೂರ್ಣ ಘಟನೆಯ ಕಾಲಗಣನೆ ಏನು? ಮೇಲಿನ ಘಟನೆಯ ಸಂದರ್ಭಗಳೇನು, ಅದಕ್ಕೆ ಯಾರು ಹೊಣೆ? ಭವಿಷ್ಯದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಸಲಹೆಗಳನ್ನು ನೀಡಲಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications