1,00,00,00,000 ಹಂತಕ್ಕೆ ಕುಸಿದು ಬೀಳುತ್ತಾ ಭಾರತದ ಜನಸಂಖ್ಯೆ? India Population
ಭಾರತದಲ್ಲಿ ಜನಸಂಖ್ಯೆ ಜಾಸ್ತಿ... ಭಾರತದಲ್ಲಿ ಜನಸಂಖ್ಯೆ ಜಾಸ್ತಿ... ಅನ್ನೋ ವಿಚಾರ ಮುಂದೆ ಇಟ್ಟುಕೊಂಡೇ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತದೆ. ಭಾರತದ ಜನಸಂಖ್ಯೆ ಇನ್ನೇನು 200 ಕೋಟಿಗೆ ತಲುಪುತ್ತೆ ಅಂತೆಲ್ಲಾ ಕೆಲ ಅತಿ ಬುದ್ಧಿವಂತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ ಇದೀಗ ಸ್ಫೋಟಕ ಮಾಹಿತಿ ಒಂದು ಹೊರಬಿದ್ದು, ಸಂಚಲನವೇ ಸೃಷ್ಟಿ ಆಗಿದೆ. ಭಾರತದ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿದು ಬೀಳುವ ಮುನ್ಸೂಚನೆ ಇದೀಗ ಸಿಕ್ಕಿದೆ!
ಹೌದು, ವಿಶ್ವಸಂಸ್ಥೆ ಇದೀಗ ನೀಡಿರುವ ವರದಿ ಭಾರತದ ಜನಸಂಖ್ಯೆ ವಿಚಾರದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ವಿಶ್ವಸಂಸ್ಥೆ ನೀಡಿರುವ ವಿಶ್ವ ಜನಸಂಖ್ಯೆ ವರದಿ ಭಾರತದಲ್ಲಿ ಭವಿಷ್ಯದಲ್ಲಿ ಜನಸಂಖ್ಯೆ ಕುಸಿದು ಬೀಳುವ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಇಡೀ ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ ಆಗಿದ್ದು, ಆದರೆ ಇದೀಗ ಪರಿಸ್ಥಿತಿ ಬದಲಾಗಿ ಹೋಗುತ್ತಿದೆ. ವಿಶ್ವಸಂಸ್ಥೆ ಇದೀಗ ಭಾರತಕ್ಕೆ ಈ ವಿಚಾರದಲ್ಲಿ ಮಹತ್ವದ ಸಲಹೆ ನೀಡಿದ್ದು, ಕೆಲವೇ ವರ್ಷಗಳಲ್ಲಿ ಭಾರತದಲ್ಲಿ ಜನಸಂಖ್ಯೆ ಕುಸಿದು ಬೀಳುವ ಆತಂಕ ಆವರಿಸಿದೆ.

ಫಲವತ್ತತೆ ಪ್ರಮಾಣ 1.9ಕ್ಕೆ ಕುಸಿತ?
ಅಷ್ಟಕ್ಕೂ ನಮ್ಮ ದೇಶ ಭಾರತದಲ್ಲಿ ಫಲವತ್ತತೆ ಪ್ರಮಾಣ ಅಂದ್ರೆ ಪ್ರತಿ ಮಹಿಳೆಯು ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯ ಪ್ರಮಾಣ ಕುಸಿತ ಕಾಣುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಭಾರತದ ಮಹಿಳೆಯರ ಫಲವತ್ತತೆ ಪ್ರಮಾಣವು ಈಗ 2.1 ರಿಂದ 1.9ಕ್ಕೆ ಕುಸಿತ ಕಾಣುವ ವಾತಾವರಣ ನಿರ್ಮಾಣ ಆಗಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಕುಸಿತ ಕಂಡು ಭಾರಿ ದೊಡ್ಡ ಸಮಸ್ಯೆ ಉಂಟಾಗುವ ಬಗ್ಗೆ ಕೂಡ ಇದೀಗ ಎಚ್ಚರಿಕೆ ಸಂದೇಶ ರವಾನೆ ಆಗಿದೆ. ಹಾಗೇ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪರಿಸ್ಥಿತಿ ಬದಲಾವಣೆ ಆಗುವ ಮುನ್ಸೂಚನೆ ಕೂಡ ಇದೀಗ ಸಿಗುತ್ತಿದೆ.












Click it and Unblock the Notifications