India Metro Network 2026: ದೇಶದ ಟಾಪ್ 20 ನಗರಗಳ ಮೆಟ್ರೋ ಜಾಲ: ದೆಹಲಿ ನಂ.1, ಬೆಂಗಳೂರಿಗೆ ಎಷ್ಟನೇ ಸ್ಥಾನ!
ನವದೆಹಲಿ: ಕರ್ನಾಟಕದ ಬೆಂಗಳೂರು, ದೆಹಲಿ, ಪುಣೆ, ಪಾಟ್ನಾ, ಕೊಲ್ಕತ್ತಾ ಸೇರಿದಂತೆ ಭಾರತದ ಮಹಾನಗರಗಳಲ್ಲಿ ಮೆಟ್ರೋ ಸಾರಿಗೆ ಸೇವೆ ದಟ್ಟಣೆ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರಿಂದ ಪ್ರಯಾಣಿಕರಿಗೂ ತ್ವರಿತ ಸಂಚಾರ ಸೇವೆ ಲಭ್ಯವಾಗುತ್ತಿದೆ. ಅತ್ಯಗತ್ಯವಾದ ಸಾರಿಗೆ ಸೇವೆ ಇದಾಗಿದೆ. ಆದರೆ ಬೆಂಗಳೂರು ಸೇರಿ ಕೆಲವು ಮಹಾನಗರಗಳ ಮೆಟ್ರೋ ಜಾಲ ವಿಸ್ತರಣೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಕಾರಣದಿಂದ 2026ರಲ್ಲಿ ದೇಶದಲ್ಲಿನ ಮೆಟ್ರೋ ಜಾಲ ಕೇವಲ 1020.03 ಕಿಲೋ ಮೀಟರ್ ಇದೆ.
ದಶಕಗಳಿಂದ ಮಹಾನಗರಗಳು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿವೆ. ಸಾರಿಗೆ ಕ್ಷೇತ್ರದಲ್ಲೂ ಉತ್ತಮ ಸೇವೆ ನೀಡುವ ಉದ್ದೇಶದಿಂದ ಮೆಟ್ರೋ ಸೇವೆ ಆರಂಭವಾಯಿತು. ನಿತ್ಯ 1020.03 ಕಿಮೀ ಜಾಲದ ಮೆಟ್ರೋದಲ್ಲಿ ಆಯಾ ನಗರದ ಲಕ್ಷಾಂತರ ಮಂದಿ ಸಂಚಾರ ಮಾಡುತ್ತಿದ್ದಾರೆ. ಹೊಸ ಮೆಟ್ರೋ ಮಾರ್ಗದ ಯೋಜನೆಗಳು ಶೀಘ್ರವೇ ಅನುಷ್ಠಾನಗೊಳ್ಳುವಂತೆ, ಕಾಮಗಾರಿ ಪೂರ್ಣಗೊಳಿಸುವಂತೆ, ಉದ್ದೇಶಿತ ಯೋಜನೆ ಬೇಗ ಆರಂಭಿಸುವಂತೆ ಒತ್ತಾಯಗಳು ಕೇಳಿ ಬರುತ್ತಿದೆ. ಅಷ್ಟರ ಮಟ್ಟಿಗೆ ಮೆಟ್ರೊ ಸಾರಿಗೆ ಮೇಲೆ ಜನರು ಅವಲಂಬಿತರಾಗಿದ್ದಾರೆ. ಹಾಗಾದರೆ ದೇಶದ ವಿವಿಧ ಮಹಾನಗರಗಳಲ್ಲಿ ಮೆಟ್ರೋ ಜಾಲ ಎಷ್ಟು ಕಿಮೀ ವ್ಯಾಪಿಸಿದೆ? ಅತೀ ಉದ್ದದ (ದೊಡ್ಡ) ಜಾಲ ಹೊಂದಿರುವ ನಗರ, ಕಡಿಮೆ ಜಾಲದ ನಗರದ ಮಾಹಿತಿ ಇಲ್ಲಿದೆ.

ಒಂದು ವಾರದ ಹಿಂದಷ್ಟೇ ಅಹಮದಾಬಾದ್ ಮೆಟ್ರೋ ಹಂತ 2ರ ಉದ್ಘಾಟನೆ ಆಗಿದೆ. ಕಾರ್ಯಾಚರಣೆಯ ಉದ್ದದ ವಿಷಯದಲ್ಲಿ ಅಹಮದಾಬಾದ್ ಮೆಟ್ರೋ ಈಗ ಹೈದರಾಬಾದ್ ಮೆಟ್ರೋಗಿಂತ ಸ್ವಲ್ಪ ಹಿಂದಿದೆ. ಮುಂದಿನ ಕೆಲವು ವಾರಗಳಲ್ಲಿ ಮುಂಬೈ ಮೆಟ್ರೋ ಜಾಲಕ್ಕೆ ಇನ್ನೂ ಎರಡು ಮೆಟ್ರೋ ಕಾರಿಡಾರ್‌ಗಳು (ಲೈನ್ 2ಬಿ ಹಂತ 1 ಮತ್ತು ಲೈನ್ 9 ಹಂತ 1) ಸೇರ್ಪಡೆ ಆಗುವ ನಿರೀಕ್ಷೆ ಇದೆ. ಆಯಾ ನಗರಗಳಲ್ಲಿ ಅಡಚಣೆ ಇಲ್ಲದ ಕಾಮಗಾರಿಯಿಂದ ಹೊಸ ಮೆಟ್ರೋ ಮಾರ್ಗಗಳು ನಿಗದಿತ ಗಡುವಿನಲ್ಲಿ ಲೋಕಾರ್ಪಣೆಗೊಳ್ಳುತ್ತಿವೆ. ಇದರಿಂದ ಮೆಟ್ರೋ ಸಾರಿಗೆಯ ಶಕ್ತಿ ಹೆಚ್ಚಾಗುವಂತೆ ಮಾಡಿವೆ.
ದೇಶದ ಒಟ್ಟು 20 ಮಹಾನಗರಗಳಲ್ಲಿ ಮೆಟ್ರೋ ಜಾಲದ ವ್ಯಾಪ್ತಿ ಎಷ್ಟಿದೆ? ಎಂಬುದರ ಸಂಪೂರ್ಣ ವಿವರವನ್ನು @TheINIofficial ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎಲ್ಲ ನಗರಗಳ ಪಟ್ಟಿ ಮುಂದಿದೆ.
ಬೆಂಗಳೂರು ಮೆಟ್ರೋ ಜಾಲ 96 ಕಿಮೀ.
ಬೆಂಗಳೂರಿನಲ್ಲಿ 2011ರಲ್ಲಿ ಎಂಜಿ ರಸ್ತೆಯಿಂದ-ಬೈಯಪ್ಪನಹಳ್ಳಿಗೆವರೆಗೆ ಮೊದಲ ಬಾರಿಗೆ ಸುಮಾರು 6 ಕಿಲೋ ನಮ್ಮ ಮೆಟ್ರೋ ರೈಲು ಸಂಚಾರ ಮಾಡಿತು. ಅಲ್ಲಿಂದ ಈವರೆಗೆ ಸುಮಾರು ಒಂದೂವರೆ ದಶಕ ಕಳೆದಿದೆ. ಹೀಗಿದ್ದರೂ ಬೆಂಗಳೂರು ಮೆಟ್ರೋ ರೈಲು ನಿಗಮದ ಜಾಲ (BMRCL) ಕೇವಲ 96 ಕಿಲೋ ಮೀಟರ್ ವಿಸ್ತರಣೆ ಆಗಿದೆ. 2026ರಲ್ಲಿ ಮೆಟ್ರೋ ಗುಲಾಬಿ ಮಾರ್ಗ ಪೂರ್ಣವಾಗಿ ತೆರೆಯಲಿದೆ. ಇದರೊಂದಿಗೆ ನೀಲಿ ಮಾರ್ಗದ ಒಂದು ಹಂತ, 2027ರಲ್ಲಿ ನೀಲಿ ಮಾರ್ಗ ಪೂರ್ಣ ಪ್ರಮಾಣದಲ್ಲಿ ತೆರೆಯಲಿದೆ. 2030ರ ಹೊತ್ತಿಗೆ ಬೆಂಗಳೂರು ಮೆಟ್ರೋ ಜಾಲ 220 ಕಿಲೋ ಮೀಟರ್ ವಿಸ್ತರಣೆ ಆಗುವ ನಿರೀಕ್ಷೆ ಇದೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿದೆ.
ಬೆಂಗಳೂರಿಗೆ ಹೋಲಿಕೆ ಮಾಡಿದರೆ ದೆಹಲಿಯುಲ್ಲಿ ಮೆಟ್ರೋ ಜಾಲ ವಿಸ್ತರಣೆ ವೇಗವಾಗಿದೆ. ದೆಹಲಿ ಒಂದೂವರೆ ದಶಕದಲ್ಲಿ 200 ಕಿಲೋ ಮೀಟರ್ ವ್ಯಾಪ್ತಿಯ ಜಾಲ ಹೊಂದಿದೆ. ನಿತ್ಯ ಲಕ್ಷಾಂತರ ಜನರಿಗೆ ಮೆಟ್ರೋ ಸೇವೆ ಒದಗಿಸುತ್ತಿದೆ. ಅಲ್ಲಿಗೆ ಹೋಲಿಸಿದರೆ ಅಷ್ಟೇ ಅವಧಿಯಲ್ಲಿ ಬೆಂಗಳೂರಿನಲ್ಲಿ 100 ಕಿಮೀ ಸಹ ದಾಟಿಲ್ಲ. ಅದಕ್ಕೆ ಕಾಮಗಾರಿ ಮತ್ತು ಅನುಮೋದನೆ ವಿಳಂಬ, ಹಣಕಾಸು ಹೊಂದಿಸುವುದು, ಮರಗಳಿಗೆ ಕತ್ತರಿ ಹಾಕಬೇಕಾದಾಗ ಮತ್ತು ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಎದುರಾಗುವ ಕಾನೂನು ತೊಡಕುಗಳಿಂದ ನಮ್ಮ ಮೆಟ್ರೋ ಮಾರ್ಗ ಯೋಜನೆ ಲೋಕಾರ್ಪಣೆ ವಿಳಂಬವಾಗಿದೆ. ಮುಖ್ಯವಾಗಿ ಮೆಟ್ರೋ ರೈಲು ಪೂರೈಕೆಯಿಂದಲೂ ಹಳದಿ ಮಾರ್ಗದ ಆರಂಭವು ವರ್ಷಗಳ ವಿಳಂಬ ಕಂಡಿತ್ತು.
𝐎𝐩𝐞𝐫𝐚𝐭𝐢𝐨𝐧𝐚𝐥 𝐌𝐞𝐭𝐫𝐨 𝐑𝐚𝐢𝐥 𝐍𝐞𝐭𝐰𝐨𝐫𝐤 𝐢𝐧 𝐈𝐧𝐝𝐢𝐚 (𝐄𝐱𝐜𝐥𝐮𝐝𝐢𝐧𝐠 𝐑𝐑𝐓𝐒)🚇
— Infra News India (INI) (@TheINIofficial) January 20, 2026
With the Ahmedabad Metro Phase 2 getting inaugurated last week, the Ahmedabad Metro is now just behind Hyderabad Metro in terms of operational length.
Mumbai is set to get… pic.twitter.com/bU3twlDlWV
20 ಮಹಾನಗರಗಳಲ್ಲಿ ಮೆಟ್ರೋ ಜಾಲದ ಪಟ್ಟಿ
1. ದೆಹಲಿ: 353.2 ಕಿ.ಮೀ.
2. ಬೆಂಗಳೂರು: 96.1 ಕಿ.ಮೀ.
3. ಮುಂಬೈ: 80.43 ಕಿ.ಮೀ.
4. ಕೊಲ್ಕತ್ತಾ: 73,89 ಕಿ.ಮೀ.
5. ಹೈದರಾಬಾದ್: 69.2 ಕಿ.ಮೀ.
6. ಅಹಮದಾಬಾದ್: 68.28 ಕಿ.ಮೀ.
7. ಚೆನ್ನೈ: 54.1 ಕಿ.ಮೀ.
8. ನಾಗ್ಪುರ: 38.22 ಕಿ.ಮೀ.
9. ಪುಣೆ: 32. 97 ಕಿ.ಮೀ.
10. ನೋಯ್ಡಾ: 29.7 ಕಿ.ಮೀ.
11. ಕೊಚ್ಚಿ: 28. 38 ಕಿ.ಮೀ.
12. ಲಕ್ನೋ: 22.87 ಕಿ.ಮೀ.
13. ಕಾನ್ಪುರ: 15.05 ಕಿ.ಮೀ.
14. ಗುರಗಾಂವ್: 12.85 ಕಿ.ಮೀ.
15. ಜೈಪುರ: 11.97 ಕಿ.ಮೀ.
16. ನವಿ ಮುಂಬೈ: 11.01 ಕಿ.ಮೀ.
17. ಭೂಪಾಲ್: 06.22 ಕಿ.ಮೀ.
18. ಇಂದೋರ್: 06 ಕಿ.ಮೀ.
19. ಆಗ್ರಾ: 05.2 ಕಿ.ಮೀ.
20. ಪಾಟ್ನಾ: 04.3 ಕಿ.ಮೀ.
(ಈ ಮೇಲಿನ ಪಟ್ಟಿಯಲ್ಲಿ ದೆಹಲಿ ಸೇರಿ ಕೆಲವು ನಗರಗಳಲ್ಲಿ ಮೆಟ್ರೋ ಜಾಲದಲ್ಲಿ ಕೊಂಚ ಆರ್‌ಆರ್‌ಟಿಎಸ್ ಜಾಲ ಸಹ ಸೇರಿದೆ)
-
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications