ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಂವಿಧಾನ ದಿನ 2022: ನಾಡಿನ ಜನತೆಗೆ ಗಣ್ಯರಿಂದ ಶುಭಾಶಯ

|
Google Oneindia Kannada News

26 ನವೆಂಬರ್ ಅನ್ನು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ಈ ದಿನವು ಭಾರತದಲ್ಲಿ ಸಂವಿಧಾನದ ಅಂಗೀಕಾರವನ್ನು ಸ್ಮರಿಸುತ್ತದೆ. ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನವನ್ನು ಬರೆಯಲು ಭಾರತದ ಸಂವಿಧಾನ ಸಭೆಯನ್ನು ಆಯ್ಕೆ ಮಾಡಲಾಯಿತು. ಈ ದಿನ ನಾಡಿನ ಜನತೆಗೆ ರಾಜಕೀಯ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

''ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಭಿಮಾನದ, ಘನತೆಯ ಬದುಕಿಗೆ ಆಸರೆ ಮತ್ತು ಭರವಸೆಯೇ ನಮ್ಮ ಹೆಮ್ಮೆಯ ಸಂವಿಧಾನ. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಪರಿಶ್ರಮದಿಂದಾಗಿ ರಚಿಸಿ, ಅಳವಡಿಸಿಕೊಂಡಿರುವ ಸಂವಿಧಾನವನ್ನ ರಕ್ಷಿಸುವ ಹೊಣೆ ಮತ್ತು ಜವಾಬ್ದಾರಿ ನಮ್ಮ ಮೇಲಿದೆ. ಬಾಬಾ ಸಾಹೇಬರಿಗೆ ಕೃತಜ್ಞತೆ ಸಲ್ಲಿಸುತ್ತಾ ಸಂವಿಧಾನ ದಿನದ ಶುಭಾಶಯಗಳು'' ಎಂದು ಅವರು ಬರೆದಿದ್ದಾರೆ.

Indias Constitution Day 2022: Greetings from dignitaries to the people of the country

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ''ಜಗತ್ತಿನಲ್ಲಿಯೇ ‌ಅತಿ‌ದೊಡ್ಡ ಸಂವಿಧಾನ ಎಂದು ಕರೆಸಿಕೊಳ್ಳುವ ‌ನಮ್ಮ ಭಾರತದ ಸಂವಿಧಾನವನ್ನು ಗೌರವಿಸಿ ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸರ್ವರಿಗೂ ರಾಷ್ಟ್ರೀಯ ಸಂವಿಧಾನ‌ ದಿನದ ಶುಭಾಶಯಗಳು'' ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ''ದೇಶದ ಬಡ ಮತ್ತು ಶೋಷಿತ ವರ್ಗಗಳಿಗೆ ಸಂವಿಧಾನವೆಂಬ ಆರದ ದೀಪವನ್ನು ಕೊಟ್ಟು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ ಸಮಾನತೆಯ ನ್ಯಾಯಕ್ಕಾಗಿ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆದು, ರಾಷ್ಟ್ರೀಯ ಸಂವಿಧಾನ ದಿನದಂದು ಅಂಬೇಡ್ಕರ್ ಆಶಯಗಳನ್ನು ಸಂಪೂರ್ಣಗೊಳಿಸಲು ಸಂಕಲ್ಪಿಸೋಣ. ಸಂವಿಧಾನ ದಿನದ ಶುಭಾಶಯಗಳು'' ತಿಳಿಸಿದ್ದಾರೆ.

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, 1949 ರ ನವೆಂಬರ್ 26 ರಂದು ಭಾರತದ ಸಂವಿಧಾನ ಅಂಗೀಕಾರಗೊಂಡು, ಅಳವಡಿಸಿಕೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನ. ಪ್ರಜಾಪ್ರಭುತ್ವಕ್ಕೆ ಬಲ ನೀಡುವ, ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆ ಕಾಪಾಡುವ ನಮ್ಮ ಸಂವಿಧಾನವನ್ನು ಗೌರವಿಸೋಣ. ಸಂವಿಧಾನದ ಆಶಯ ಕಾಪಾಡೋಣ' ಎಂದು ಬರೆದಿದ್ದಾರೆ.

ಮಾಜಿ ಸಚಿವ ಹೆಚ್‌ ಸಿ ಮಹದೇವಪ್ಪ, 'ಮುಸ್ಲಿಮರ ರಕ್ಷಣೆಗೆ ಕುರಾನ್ ಇದೆ. ಕ್ರೈಸ್ತರ ರಕ್ಷಣೆಗೆ ಬೈಬಲ್ ಇದೆ. ಆದರೆ ಇವರೆಲ್ಲರ ರಕ್ಷಣೆಗೆ ಇರುವುದು ಈ ದೇಶದ ಸಂವಿಧಾನ ಮಾತ್ರ. ಒಂದು ವೇಳೆ ಬಾಬಾ ಸಾಹೇಬರ ಸಂವಿಧಾನ ಇಲ್ಲದೇ ಹೋಗಿದ್ದರೆ ನಾವು ಈ ದಿನ ನಾವೆಲ್ಲರೂ ನಾಯಿ ನರಿಗಳಂತೆ ಬದುಕಬೇಕಾಗಿತ್ತು ಎಂಬುದನ್ನು ನಾವು ನೆನಪಿಡಬೇಕು' ಎಂದು ಟ್ವೀಟ್ ಮಾಡಿದ್ದಾರೆ.

Indias Constitution Day 2022: Greetings from dignitaries to the people of the country

ವಿಪಕ್ಷ ನಾಯಕ ಸಿದ್ದರಾಮಯ್ಯ, 'ಸಂವಿಧಾನದ ಉಳಿವಿನಲ್ಲಿಯೇ ನಮ್ಮ ಉಳಿವು, ಅಳಿವಿನಲ್ಲಿಯೇ ನಮ್ಮದೂ ಅಳಿವು. ಸಂವಿಧಾನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸಂವಿಧಾನವನ್ನು ರಕ್ಷಿಸುವ ಹೋರಾಟಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳೋಣ. ಸಮಸ್ತ ದೇಶಪ್ರೇಮಿಗಳಿಗೆ ಸಂವಿಧಾನ ದಿನಾಚರಣೆಯ ಶುಭಹಾರೈಕೆಗಳು' ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬೊಮ್ಮಾಯಿಯವರು, 1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢನಿಶ್ಚಯದೊಂದಿಗೆ , ಸಂವಿಧಾನದ ಕರ್ತೃಗಳನ್ನು ಸ್ಮರಿಸಿ, ಸಂವಿಧಾನಕ್ಕೆ ಸದಾ ಬದ್ಧವಾಗಿರುವ ಸಂಕಲ್ಪವನ್ನು ಮಾಡೋಣ ಎಂದು ಹೇಳಿದ್ದಾರೆ.

English summary
Dignitaries including Chief Minister Basavaraj Bommai have congratulated the people of India on Constitution Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X