ಮೈಕ್ರೋಸಾಫ್ಟ್ ಸೇರಿದ 3 ತಿಂಗಳಿಗೆ ವಾಲಂಟಿಯರ್‌ ಎಕ್ಸಿಟ್‌ ಆಫರ್: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಂಗಾಲಾದ ಟೆಕ್ಕಿ

ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಸುದ್ದಿ ಇನ್ನೂ ಮುಗಿದಿಲ್ಲ. ಐಟಿ ದಿಗ್ಗಜ ಮೈಕ್ರೋಸಾಫ್ಟ್ ಇದೀಗ ಭಾರತವೂ ಸೇರಿದಂತೆ ವಿಶ್ವದಾದ್ಯಂತ ತನ್ನ ಉದ್ಯೋಗಿಗಳಿಗೆ 'ವಾಲಂಟಿಯರ್‌ ಎಕ್ಸಿಟ್‌' ಆಫರ್ ನೀಡಿದೆ. ಈ ಬೆಳವಣಿಗೆಯಿಂದ ಐಟಿ ವಲಯದಲ್ಲಿ ಮತ್ತೊಂದು ಸುತ್ತಿನ ಲೇಆಫ್ ಭೀತಿ ಹುಟ್ಟುಹಾಕಿದೆ. ವಿಶೇಷವೆಂದರೆ, ಮೈಕ್ರೋಸಾಫ್ಟ್ ಕಂಪನಿಗೆ ಸೇರಿ ಕೇವಲ ಮೂರು ತಿಂಗಳಾಗಿರುವ ಭಾರತೀಯ ಸಾಫ್ಟ್‌ವೇರ್ ಡೆವಲಪರ್ ಒಬ್ಬರಿಗೂ ಈ ಇಮೇಲ್ ಬಂದಿದ್ದು, ಆ ಟೆಕ್ಕಿ ತೀವ್ರ ಹತಾಶೆಗೆ ಒಳಗಾಗಿದ್ದಾರೆ.

ಮೈಕ್ರೋಸಾಫ್ಟ್ ಉದ್ಯೋಗ ಕಡಿತದ ಭೀತಿ : ಕಂಗಾಲಾದ ಭಾರತೀಯ ಟೆಕ್ಕಿ

ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿರುವ ಸುಮಾರು 60,000 ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ಸ್ವಯಂ ನಿರ್ಗಮನ ಅಂದರೆ ಈ ವಾಲಂಟಿಯರ್‌ ಎಕ್ಸಿಟ್‌ ಆಫರ್ ನೀಡಲಾಗಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ರೆಡ್ಡಿಟ್‌ನ ಡೆವಲಪರ್ಸ್ ಇಂಡಿಯಾ ವೇದಿಕೆಯಲ್ಲಿ clock-maker365 ಹೆಸರಿನ ಬಳಕೆದಾರರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Indian Techie Gets Microsoft Voluntary Exit Offer 3 Months After Joining Fears Imminent Layoffs

"ನಾನು ಮೈಕ್ರೋಸಾಫ್ಟ್ ಕಂಪನಿಗೆ ಸೇರಿ ಕೇವಲ ಮೂರು ತಿಂಗಳಾಗಿದೆ. ನನಗೆ ಕಂಪನಿಯ ಕೋಡ್‌ಬೇಸ್ ಬಗ್ಗೆ ಇನ್ನೂ ಸರಿಯಾದ ಜ್ಞಾನವೂ ಇಲ್ಲ. ಅದಾಗಲೇ ನನಗೆ ಈ ಇಮೇಲ್ ಬಂದಿದೆ. ಒಂದು ವೇಳೆ ನಾನು ಈ ಆಫರ್ ಒಪ್ಪಿಕೊಳ್ಳದಿದ್ದರೆ, ಕಂಪನಿಯು ನನ್ನನ್ನು ಕೆಲಸದಿಂದ ತೆಗೆದುಹಾಕಬಹುದು ಎಂಬ ಭಯ ಕಾಡುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಆಯ್ದ ಉದ್ಯೋಗಿಗಳಿಗೆ ಮಾತ್ರ ವಾಲಂಟಿಯರ್‌ ಎಕ್ಸಿಟ್‌ ಇಮೇಲ್

ಈ ಆಫರ್ ಎಲ್ಲರಿಗೂ ಬಂದಿಲ್ಲ. ಆಯ್ದ ಕೆಲವು ಉದ್ಯೋಗಿಗಳಿಗೆ ಮಾತ್ರ ಈ ಇಮೇಲ್ ಕಳುಹಿಸಲಾಗಿದೆ ಎಂಬುದು ಟೆಕ್ಕಿಯ ಆತಂಕಕ್ಕೆ ಮುಖ್ಯ ಕಾರಣವಾಗಿದೆ. "ಈ ಇಮೇಲ್ ಬಂದಿದೆ ಎಂದರೆ ನಾವು ಲೇಆಫ್ ಪಟ್ಟಿಯಲ್ಲಿದ್ದೇವೆ ಎಂದೇ ಅರ್ಥ. ಹೇಗಾದರೂ ಮಾಡಿ ನಮ್ಮನ್ನ ಹೊರಹಾಕುವುದು ಕಂಪನಿಯ ಉದ್ದೇಶವಾಗಿದೆ" ಎಂದು ಟೆಕ್ಕಿ ತಮ್ಮ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಈ ಆಫರ್ ಅನ್ನು ಒಪ್ಪಿಕೊಳ್ಳಲು ಡಿಸೆಂಬರ್ 1 ಕಡೆಯ ದಿನಾಂಕವಾಗಿದ್ದು, ಡಿಸೆಂಬರ್ 31 ಮೈಕ್ರೋಸಾಫ್ಟ್‌ನಲ್ಲಿ ಇವರ ಕೊನೆಯ ಕೆಲಸದ ದಿನವಾಗಿರಲಿದೆ. ಪರಿಹಾರ ಪ್ಯಾಕೇಜ್ ಆಗಿ 2 ಅಥವಾ 3 ತಿಂಗಳ ಮೂಲ ವೇತನ ಹಾಗೂ ಕೆಲಸ ಮಾಡಿದ ಪ್ರತಿ ಆರು ತಿಂಗಳಿಗೆ 2 ವಾರದ ಮೂಲ ವೇತನವನ್ನ ನೀಡಲಾಗುತ್ತಿದೆ ಎಂದು ಟೆಕ್ಕಿ ವಿವರಿಸಿದ್ದಾರೆ.

ನೆಟ್ಟಿಗರ ಸಾಂತ್ವನ

ಕಳೆದ ಮೂರು ತಿಂಗಳು ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ನನಗೆ ಈ ಪ್ರತಿಫಲ ಸಿಕ್ಕಿತೇ ಎಂದು ನೊಂದುಕೊಂಡಿರುವ ಟೆಕ್ಕಿ, "ನನಗೆ ಕೇವಲ 3 ವರ್ಷದ ಅನುಭವವಿದೆ. ಯಾವುದೇ ಕುಟುಂಬದಲ್ಲಿ ಯಾವುದೇ ಬ್ಯುಸಿನೆಸ್ ಇಲ್ಲ, ಕೇವಲ 6 ತಿಂಗಳು ಜೀವನ ನಡೆಸುವಷ್ಟು ಮಾತ್ರ ಉಳಿತಾಯವಿದೆ. ಈಗೇನು ಮಾಡಬೇಕು?" ಎಂದು ರೆಡ್ಡಿಟ್‌ನಲ್ಲಿ ಸಲಹೆ ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅನೇಕರು, "ಮೈಕ್ರೋಸಾಫ್ಟ್‌ನಂತಹ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ನಿಮ್ಮ ರೆಸ್ಯೂಮ್‌ನಲ್ಲಿದ್ದರೆ, ಬೇರೆ ಯಾವುದೇ ಕಂಪನಿಯಲ್ಲಾದರೂ ಸುಲಭವಾಗಿ ಕೆಲಸ ಪಡೆಯಬಹುದು, ಆತಂಕ ಪಡಬೇಡಿ" ಎಂದು ಧೈರ್ಯ ತುಂಬಿದ್ದಾರೆ.

Indian Techie Gets Microsoft Voluntary Exit Offer 3 Months After Joining Fears Imminent Layoffs

ಮತ್ತೊಬ್ಬ ನೆಟ್ಟಿಗರು, "ನಾನು ಕಳೆದ ತಿಂಗಳಷ್ಟೇ ಕಂಪನಿಗೆ ಸೇರಿದ್ದೆ, ನನಗೂ ಈ ಇಮೇಲ್ ಬಂದಿದೆ. ಉದ್ಯೋಗ ಮಾರುಕಟ್ಟೆ ಅಷ್ಟು ಕೆಟ್ಟದಾಗಿಲ್ಲ, ಸಂದರ್ಶನಗಳಿಗೆ ತಯಾರಿ ನಡೆಸಿ" ಎಂದು ಕಿವಿಮಾತು ಹೇಳಿದ್ದಾರೆ.

ವರದಿಗಳ ಪ್ರಕಾರ, ಮೈಕ್ರೋಸಾಫ್ಟ್‌ನ ಕೋಪೈಲಟ್, ಹಣಕಾಸು, ಮಾನವ ಸಂಪನ್ಮೂಲ (HR), ಎಕ್ಸ್‌ಬಾಕ್ಸ್ ಹಾಗೂ ವಿಂಡೋಸ್ ಮತ್ತು ಡಿವೈಸಸ್ ವಿಭಾಗದ ಉದ್ಯೋಗಿಗಳಿಗೆ ಈ ಆಫರ್ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಹಿರಿಯ ಉದ್ಯೋಗಿಗಳಿಗೆ ಇದೇ ರೀತಿಯ ಆಫರ್ ನೀಡಿದ ಬಳಿಕ ಮೈಕ್ರೋಸಾಫ್ಟ್ ಸುಮಾರು 4,800 ಉದ್ಯೋಗಿಗಳನ್ನು ವಜಾಗೊಳಿಸಿತ್ತು ಎಂಬುದು ಇಲ್ಲಿ ಗಮನಾರ್ಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+