ಪ್ರೇಮಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ!
ನವದೆಹಲಿ, ಆಗಸ್ಟ್ 28 : ಗೂಡ್ಸ್ ರೈಲಿನ ವ್ಯಾಗನ್ ಕೆಳಗೆ ಕುಳಿತುಕೊಳ್ಳುವ ಪ್ರೇಮಿಗಳಿಗೆ ಭಾರತೀಯ ರೈಲ್ವೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಪ್ರೇಮಿಗಳ ಫೋಟೋವೊಂದನ್ನು ಹಾಕಿ ಎಚ್ಚರಿಕೆ ಸಂದೇಶ ರವಾನಿಸಿದೆ.
ಭಾರತೀಯ ರೈಲ್ವೆ ಫೇಸ್ ಬುಕ್ ಪುಟದಲ್ಲಿ ಫೋಟೋವೊಂದನ್ನು ಹಾಕಿ ಇಲಾಖೆ ಎಚ್ಚರಿಕೆ ನೀಡಿದೆ. ಹೀಗೆ ಕುಳಿತುಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ.

ಗೂಡ್ಸ್ ರೈಲಿನ ವ್ಯಾಗನ್ ಕೆಳಗೆ ಕುಳಿತುಕೊಳ್ಳಬೇಡಿ. ಯಾವುದೇ ಸೂಚನೆ ಕೊಡದೆ ರೈಲು ಹೊರಡಬಹುದು. ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ರೈಲ್ವೆ ಹಳಿಯನ್ನು ದಾಟಿ ಎಂಬ ಸಂದೇಶ ನೀಡಿದೆ.
ಈ ಜೋಡಿ ರೈಲಿನ ಬೋಗಿ ಕೆಳಗೆ ಕುಳಿತಿರುವ ಚಿತ್ರವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ? ಎಂಬುದನ್ನು ಫೇಸ್ ಬುಕ್ ಪುಟದಲ್ಲಿ ತಿಳಿಸಿಲ್ಲ. ರೈಲ್ವೆ ಬೋಗಿಯ ಕೆಳಗೆ ಕುಳಿತು ಕೊಂಡು ಜೀವ ಕಳೆದುಕೊಳ್ಳಬೇಡಿ ಎಂದು ಇಲಾಖೆ ಸಂದೇಶದಲ್ಲಿ ತಿಳಿಸಿದೆ.
ಭಾರತೀಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಟ್ವೀಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಯಾಣಿಕ ಸ್ನೇಹಿ ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ಪ್ರಯಾಣಿಕರ ದೂರುಗಳನ್ನು ಸಹ ಸ್ವೀಕಾರ ಮಾಡುತ್ತದೆ.












Click it and Unblock the Notifications