Indian Railways: ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ಈ ಪ್ರಯಾಣಿಕರ ಗಮನಕ್ಕೆ

ನವದೆಹಲಿ, ನವೆಂಬರ್ 02: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಹೊಸ ಸೌಲಭ್ಯ, ಉಪಕ್ರಮ ಜಾರಿ ಆಗುತ್ತಲೇ ಇರುತ್ತವೆ. ಇದೀಗ ಪ್ರಯಾಣಿಕರು ತಮ್ಮ ರೈಲು ಪ್ರಯಾಣಕ್ಕಾಗಿ ಕೆಳಗಿನ ಬರ್ತ್ ಸೀಟುಗಳನ್ನು ಬುಕ್ ಮಾಡುವಾಗ ಎದುರಿಸುತ್ತಿರುವ ತೊಂದರೆಗಳ ಪರಿಹಾರ ಭಾಗವಾಗಿ ಹೊಸ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ರೈಲು ಸೇವೆ ಬಗ್ಗೆ ತಿಳಿಯಲು ಆಸನ ಕಾಯ್ದಿರಿಸಲು, ಪ್ರಯಾಣ ಬಗ್ಗೆ ಟ್ರ್ಯಾಕ್ ಮಾಡಲು ಬಹುಸೇವೆ ಒಂದೇ ವೇದಿಕೆಯಲ್ಲಿ ಸಿಗುವ ರೈಲ್‌ಒನ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಇದೀಗ ಕೆಳಗಿನ ಬರ್ತ್ ಸೀಟ್‌ಗಳನ್ನು ಕಾಯ್ದಿರಿಸಲು ಸುಗಮ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಅವರು ಸೀಟ್ ಲಭ್ಯತೆಗೆ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ನಿಯಮಗಳ ಪರಿಷ್ಕರಿಸಿ ಪರಿಚಯಿಸಲಾಗಿದೆ.

Indian Railways Updates Lower Berth Reservation Rules Know more

ಪ್ರಯಾಣಿಕರ ಸಮಯ ಬದಲಾವಣೆ, ಕೆಳಗಿನ ಸೀಟ್ ಬರ್ತ್ ಸೀಟು ಕಾಯ್ದರಿಸುವ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ನಿಯಮ ಮಾಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಕೆಳಗಿನ ಬರ್ತ್ ಸ್ವಯಂಚಾಲಿತವಾಗಿ ಹಂಚಿಕೆ ಮಾಡಲು ಮೀಸಲಾತಿ ಕ್ರಮ ತರಲಾಗಿದೆ. ಇದನ್ನು ಹಂಚಿಕೆ ಮಾಡಲು ಟಿಕೆಟ್ ಪರಿಶೀಲಿಸುವ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ಅದದರೆ ಮಧ್ಯಮ ಅಥವಾ ಮೇಲಿನ ಬರ್ತ್ ಹಂಚಿಕೆಯಾದ ಸೀಟು ಅನ್ನು ಹಿರಿಯ ನಾಗರಿಕರು ಅರ್ಹ ವ್ಯಕ್ತಿಗಳನ್ನು ನೋಡಿಕೊಂಡು ಅವರಿಗೆ ಕೆಳಗಿನ ಸೀಟ್ ನೀಡಬಹುದಾಗಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.

ರಿಸರ್ವೇಷನ್ ಕೋಚ್‌ನಲ್ಲಿ ಮಲಗುವ ಸೌಕರ್ಯವನ್ನು ಬದಲಾಯಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಈ ಸೇವೆ ಲಭ್ಯವಿದೆ. ಉಳಿದ ದಿನಗಳಲ್ಲಿ ಕೂತು ಪ್ರಯಾಣಿಸುವ ಆಸನ ವ್ಯವಸ್ಥೆ ನೀಡಲಾಗಿದೆ. ಇನ್ನೂ ಬುಕ್ ಮಾಡಿ ಟಿಕೆಟ್ ರದ್ದತಿ ಮೀಸಲಾತಿ ಅಡಿಯಲ್ಲಿ, ಸೈಡ್ ಲೋವರ್ ಬರ್ತ್‌ಗಳನ್ನು ನಿಗದಿಪಡಿಸಿದ ಪ್ರಯಾಣಿಕರಿಗೆ, ಸೈಡ್-ಅಪ್ಪರ್ ಬರ್ತ್‌ನಲ್ಲಿ ಬುಕ್ ಮಾಡಿದವರು ಮತ್ತು RAC ಪ್ರಯಾಣಿಕರು ಹಗಲಿನ ವೇಳೆಯಲ್ಲಿ ಕುಳಿತುಕೊಳ್ಳಲು ಸೀಟನ್ನು ಹಂಚಿಕೊಳ್ಳುತ್ತಾರೆ.

ರಾತ್ರಿ 10:00 ರಿಂದ ಬೆಳಗ್ಗೆ 6:00 ರವರೆಗೆ ಸೈಡ್-ಅಪ್ಪರ್ ಬರ್ತ್ ಸೀಟು ಬುಕ್ ಆಗಿರುವ ಪ್ರಯಾಣಿಕರಿಗೆ ಕೆಳಗಿನ ಬರ್ತ್ ಸೀಟಿನ ಮೇಲೆ ಯಾವ ಹಕ್ಕು ಇರಲ್ಲ. ಏಕೆಂದರೆ ಕೆಳಗಿನ ಸೀಟು ಮಲಗಲು, ಕೂರಲು ಅವಕಾಶ ಇರುತ್ತದೆ. ಇನ್ನೂ ಕೆಳಗಿನ ಬರ್ತ್ ಸೀಟಗಳನ್ನು ಅರ್ಹ ಪ್ರಯಾಣಿಕರಿಗೆ ಲಭ್ಯವಿದ್ದರೆ ಮಾತ್ರವೇ ಬುಕಿಂಗ್ ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ನಿಯಮಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಪ್ರಯಾಣಿಕರಿಗೆ ಅದರ ಲಭ್ಯತೆಯ ಆಧಾರದ ಮೇಲೆ ಕೆಳಗಿನ ಸೀಟು ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

ಶೀಘ್ರವೇ ಟಿಕೆಟ್ ಬುಕ್ ಮಾಡಿದ ಬಳಿಕ ರದ್ದು ಮಾಡುವ ಅವಕಾಶದಲ್ಲೂ ಬದಲಾವಣೆ ಆಗಲಿದೆ. ಅಂದರೆ ನೀವು ಬುಕ್ ಮಾಡಿದ ದಿನ ಪ್ರಯಾಣ ರದ್ದಾದರೆ ನೀವು ಟಿಕೆಟ್ ರದ್ದುಗೊಳಿಸುವ ವ್ಯವಸ್ಥೆ ಈಗ ಇದೆ. ಮುಂದಿನ ದಿನಗಳಲ್ಲಿ ಹೊಸ ನಿಯಮ ಬಂದಲ್ಲಿ, ಟಿಕೆಟ್ ರದ್ದು ಮಾಡಿ ಹೊಸ ದಿನಾಂಕ ಕ್ಕೆ ಬುಕ್ ಮಾಡುವ ಬದಲು, ಹಾಲಿ ಟಿಕೆಟ್ ನಲ್ಲಿ ದಿನಾಂಕ ಬದಲಾಯಿಸುವ ನಿಯಮ ಜಾರಿಗೆ ತರುವ ಚಿಂತನೆಯಲ್ಲಿ ರೈಲ್ವೆ ಇಲಾಖೆ ಇದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+