Secunderabad-Ayodhya train: ಮೊದಲ ಪ್ರಯಾಣದಲ್ಲಿ 1,346 ಭಕ್ತರ ಯಾತ್ರೆ, ಕಿಟ್ ಕೊಟ್ಟ ರೈಲ್ವೆ ಇಲಾಖೆ
ಬೆಂಗಳೂರು, ಫೆಬ್ರವರಿ 06: ಜನವರಿ 22ರಂದು ಉತ್ತರ ಪ್ರದೇಶದ ಶ್ರೀರಾಮ ಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆಗೆ ತೆರಳುವವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇದೀಗ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಮೊದಲ ರೈಲು ಅಯೋಧ್ಯೆಗೆ ಪ್ರಯಾಣ ಬೆಳೆಸಿತು.
ಸಿಕಂದರಾಬಾದ್ ರೈಲು ನಿಲ್ದಾಣದಿಂದ ಅಯೋಧ್ಯೆಗೆ ತೆರಳುವ ಒಟ್ಟು 1,346 ಭಕ್ತರನ್ನು ಮೊದಲ ಆಸ್ತಾ ವಿಶೇಷ ರೈಲು ಸೋಮವಾರ (ಫೆಬ್ರವರಿ 5) ಹೊತ್ತೊಯ್ಯಿತು. 'ಜೈ ಶ್ರೀ ರಾಮ್' ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಯಾಣಿಕರು ರೈಲು ಪ್ರಯಾಣ ಆರಂಭಿಸಿದ್ದು ಕಂಡು ಬಂತು.

ಭಾರತೀಯ ರೈಲ್ವೇ ಅಯೋಧ್ಯೆಗೆ ತೆರಳುವ ರೈಲಿನಲ್ಲಿ ಪ್ರಯಾಣಿಕರಿಗೆ ಎಲ್ಲ ಮೂಲ ಸೌಕರ್ಯ, ಸೇವೆ ನೀಡುತ್ತಿದೆ. ಇದು ಅಯೋಧ್ಯೆಯ ಮೊದಲ ಯಾತ್ರೆಯಾಗಿದ್ದು, ಬಿಜೆಪಿ ಉಸ್ತುವಾರಿ ರಮೇಶ್ ರಾಮ್ ಅವರು ಯಾತ್ರೆಯ ಮಹತ್ವ ವಿವರಿಸಿದರು.
ಭಕ್ತರಿಗೆ ರೈಲಿನಿಂದ ಅಗತ್ಯ ಕಿಟ್ ವಿತರಣೆ
ಈ ರೈಲಿನಲ್ಲಿ 1,346 ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದು, ಅವರಿಗೆಲ್ಲ ಇಲಾಖೆಯಿಂದ ಸಾಬೂನು, ಒಆರ್‌ಎಸ್ ಬಾಟಲಿಗಳು, ಊಟ-ತಿಂಡಿಗಳು ಮತ್ತು ತಂಪು ಪಾನೀಯಗಳು ಸೇರಿದಂತೆ 13 ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಸಿದ್ದಪಡಿಸಿದೆ.

ನಾವು ಹೈದರಾಬಾದ್‌ನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಲಿದ್ದೇವೆ. ಕಳೆದ 500 ವರ್ಷಗಳ ಕನಸನ್ನು ನನಸು ಮಾಡಿದ್ದಕ್ಕಾಗಿ ಪ್ರಧಾನಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಹೈದರಾಬಾದ್‌ನಿಂದ ಅಯೋಧ್ಯೆಗೆ ಹೋಗುವ ಮೊದಲ ರೈಲು ಇದಾಗಿದೆ. ಎಲ್ಲಾ ವಯೋಮಾನದ ಭಕ್ತರು ಈ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಭಕ್ತ ರಾಮೋಜಿ ಅವರು 90ರ ದಶಕದಲ್ಲಿ ಕರಸೇವಕರಾದರು ಎಂದು ತಿಳಿಸಿದರು.
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್
ಭಾರತೀಯ ರೈಲ್ವೇ ಇಲಾಖೆಯು ಅಡಿಯಲ್ಲಿ ಪುನರಾಭಿವೃದ್ಧಿಗಾಗಿ 1318 ನಿಲ್ದಾಣಗಳನ್ನು ಗುರುತಿಸಲಾಗಿದೆ. ಈಗಾಗಲೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದರಲ್ಲಿ ಕರ್ನಾಟಕದ ಸುಮಾರು 50 ರೈಲು ನಿಲ್ದಾಣಗಳು ಸೇರಿವೆ ಎಂದು ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.
ಅಯೋಧ್ಯೆ 'ಪ್ರಾಣ ಪ್ರತಿಷ್ಠಾಪನಾ' ಸಮಾರಂಭ
ಉತ್ತರ ಪ್ರದೇಶದ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಆಯಿತು. ಜನವರಿ 22 ನಡೆದ ಐತಿಹಾಸಿಕ ದೇವಾಲಯದಲ್ಲಿ ಶ್ರೀ ರಾಮಲಲ್ಲಾ ಅವರ 'ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ 1,500-1,600 ಗಣ್ಯ ಅತಿಥಿಗಳು ಸೇರಿದ್ದರು. ಸುಮಾರು 8,000 ಆಹ್ವಾನಿತರು ಪಾಲ್ಗೊಂಡಿದ್ದರು. ಅದರ ಮರು ದಿನವೇ ಜನವರಿ 23 ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.












Click it and Unblock the Notifications