IRCTC Update: ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ನವೀಕರಣ, ವಿಧಾನ-ನಿಯಮ ತಿಳಿಯಿರಿ
ಬೆಂಗಳೂರು, ಜನವರಿ 30: ದೇಶದ ಜನರಿಗೆ ಅತ್ಯುತ್ಯಮ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡಬೇಕಾದರೆ ನೀವು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಮೂಲಕವೇ ಟಿಕೆಟ್ ಬುಕ್ ಮಾಡುತ್ತೀರಿ. ಇದೀಗ ನೀವು ಈ IRCTC ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ನವೀಕರಣಗೊಂಡಿರುವುದನ್ನು ಗಮನಿಸಬೇಕಿದೆ.
ರೈಲ್ವೆ ಪ್ರಯಾಣಕ್ಕೂ ಮೊದಲು ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಬೇಕಾಗುತ್ತದೆ. ಇದೀಗ ಐಆರ್‌ಸಿಟಿಸಿಯಲ್ಲಿ ನವೀಕರಣಗೊಂಡ ಬಳಿಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಕೆಲವು ನಿಯಮ ಅನುಸರಿಸಬೇಕಿದೆ. ಅವುಗಳೇನು ಎಂದು ಇಲ್ಲಿ ತಿಳಿಯೋಣ.

ಆನ್‌ಲೈನ್ ನಲ್ಲಿ ರೈಲ್ವೇ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಮೊದಲು IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಮೊದಲು ನೋಂದಾಯಿಸಿಕೊಳ್ಳಬೇಕು. ಹೊಸ ನಿಯಮಗಳ ಪ್ರಕಾರ, ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಿದ್ಧರಿರುವ ವ್ಯಕ್ತಿಗಳು ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಮೊದಲು ತಮ್ಮ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ.
ಭಾರತೀಯ ರೈಲ್ವೇಯು 70 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ವಿಪರ್ಯಾಸವೆಂದರೆ 70 ಮಿಲಿಯನ್‌ನಲ್ಲಿ ಕೇವಲ 30 ಮಿಲಿಯನ್ ಮಾತ್ರ IRCTC ಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಉಳಿದ ಬಳಕೆದಾರರು (40 ಮಿಲಿಯನ್) ನೋಂದಾಯಿಸದೇ ಬಳಕೆ ಮಾಡುವವರಾಗಿದ್ದಾರೆ. ಅಂತವರು ತಮ್ಮ ಖಾತೆಗಳನ್ನು ನೋಂದಾಯಿಸಿಕೊಳ್ಳಬೇಕು.ಅದಾಗಲೇ IRCTC ಯ ಅಪ್ಲಿಕೇಶನ್ ಮೂಲಕ ಆನ್‌ಲೈನ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
IRCTC ನವೀಕೃತ ನಿಯಮಗಳ ಪ್ರಕಾ, ಆನ್‌ಲೈನ್ ಟಿಕೆಟ್‌ಗಳನ್ನು ಬುಕ್ಕಿಂಗ್ ಮುನ್ನ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಐಆರ್‌ಸಿಟಿಸಿ ಆಪ್ ಇಲ್ಲವೇ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಲು ಈ ಹಂತಗಳನ್ನು ಅನುಸರಿಸಿ.
ಈ ವಿಧಾನಗಳನ್ನು ಅನುಸರಿಸಿ
* IRCTC ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಪರಿಶೀಲನೆ ವಿಂಡೋಗೆ ನ್ಯಾವಿಗೇಟ್ ಮಾಡಿ.
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಹಾಕಿ.
* ಅಗತ್ಯ ಮಾಹಿತಿ ನೀಡಿದ ನಂತರ ವೆರಿಫೈ ಆಯ್ಕೆ ಮಾಡಿ
* ನಿಮ್ಮ ಮೊಬೈಲ್‌ನಲ್ಲಿ ನೀವು OTP ಅನ್ನು ಸ್ವೀಕರಿಸುತ್ತೀರಿ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಒಟಿಪಿ ಹಾಕಿ
* ನಿಮ್ಮ ಇಮೇಲ್ ಪರಿಶೀಲನೆಯನ್ನು ಪೂರ್ಣಗೊಳಿಸಲು ನಿಮ್ಮ ಇಮೇಲ್ ಐಡಿಯಲ್ಲಿ ಸ್ವೀಕರಿಸಿದ ಕೋಡ್ ಅನ್ನು ನಮೂದಿಸಿ.
* ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೀವು ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗುತ್ತದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
* ಲಾಗ್ ಇನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ
* 'ಟ್ರೇನ್ ಟಿಕೆಟಿಂಗ್' ಅಡಿಯಲ್ಲಿ, 'ನನ್ನ ಬುಕಿಂಗ್ ಆಯ್ಕೆ ಮಾಡಿ
* ಪ್ರಯಾಣದ ವಿವರಗಳನ್ನು ಆಯ್ಕೆಮಾಡಿ ಮತ್ತು 'ರೈಲುಗಳನ್ನು ಹುಡುಕಿ' ಸರ್ಚ್ ಮಾಡಿ
* ರೈಲನ್ನು ಆಯ್ಕೆಮಾಡಿ ಮತ್ತು ಪ್ರಯಾಣಿಕರ ಮಾಹಿತಿಯನ್ನು ಸೇರಿಸಲು 'ಪ್ರಯಾಣಿಕರ ವಿವರದ ಮೇಲೆ ಕ್ಲಿಕ್ ಮಾಡಿ
* ನಿಖರತೆಗಾಗಿ ಪ್ರಯಾಣದ ವಿವರಗಳನ್ನು ಪರಿಶೀಲಿಸಿ.
* ನಂತರ ಹಣ ಪಾವತಿಗೆ ಕಂಟಿನ್ಯೂ ಕ್ಲಿಕ್ ಮಾಡಿ ಮತ್ತು ವಿವಿಧ ಆಯ್ಕೆಗಳನ್ನು ಬಳಸಿಕೊಂಡು ಹಣ ಪಾವತಿಸಿದರೆ ನಿಮಗೆ ಕನ್ಫರ್ಮ್ ಟಿಕೆಟ್ ಸಂದೇಶ ಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ ಎಂದು ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ಮಾಹಿತಿ ನೀಡಿದೆ.












Click it and Unblock the Notifications