ನಷ್ಟದಿಂದ ಹೊರ ಬರಲು ರೈಲ್ವೆಯ ಹೊಸ ಆಲೋಚನೆ
ನವದೆಹಲಿ, ಏಪ್ರಿಲ್ 28 : ಲಾಕ್ ಡೌನ್ ಪರಿಣಾಮ ಪ್ರಯಾಣಿಕರ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೇ 3ರ ಬಳಿಕ ಸಂಚಾರ ಪುನಃ ಆರಂಭವಾಗಲಿದೆಯೇ? ಎಂಬುದನ್ನು ಇನ್ನೂ ಉತ್ತರ ಸಿಕ್ಕಿಲ್ಲ.
Recommended Video
ಲಾಕ್ ಡೌನ್ ಸಮಯದಲ್ಲಿ ಆದ ನಷ್ಟದಿಂದ ಹೊರ ಬರಲು ಭಾರತೀಯ ರೈಲ್ವೆ ದಾರಿಯನ್ನು ಹುಡುಕುತ್ತಿದೆ. ದೂರದ ಊರಿಗೆ ಪ್ರಯಾಣಿಸುವ ರೈಲುಗಳನ್ನು ಮಾತ್ರ ಮೊದಲು ಆರಂಭಿಸಲು ಚಿಂತನೆ ನಡೆದಿದೆ.
ಹತ್ತಿರದ ಊರುಗಳಿಗೆ ಸಂಚಾರ ನಡೆಸುವ ರೈಲುಗಳನ್ನು ರದ್ದುಗೊಳಿಸಲಾಗುತ್ತದೆ. ಈ ಸಮಯವನ್ನು ಗೂಡ್ಸ್ ರೈಲುಗಳಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಲಾಕ್ ಡೌನ್ ಮುಗಿದ ಮೇಲೆ ಸರಕು ಸಾಗಣೆಗೆ ಬೇಡಿಕೆ ಹೆಚ್ಚಲಿದ್ದು, ಈ ಸಂದರ್ಭದಲ್ಲಿ ಆದಾಯಗಳಿಸಬಹುದು ಎಂಬುದು ಇಲಾಖೆಯ ಲೆಕ್ಕಾಚಾರ.

ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಸರಬರಾಜು ಮಾಡಲಾಗುತ್ತಿದೆ. ಈ ಸಂಧರ್ಭದಲ್ಲಿ ರೈಲ್ವೆ ಸರಕು ಸಾಗಣೆಗೆ ಇರುವ ಬೇಡಿಕೆಯನ್ನು ಗ್ರಹಿಸಿದೆ. ಆದ್ದರಿಂದ, ಅದಕ್ಕೆ ಹೆಚ್ಚು ಒತ್ತು ಕೊಡಲು ಚಿಂತನೆ ನಡೆದಿದೆ.
ಹತ್ತಿರದ ಪ್ರದೇಶಗಳಿಗೆ ಹೋಗಲು ಜನರು ಬಸ್ ಅವಲಂಬಿಸಿದ್ದಾರೆ. ದೂರದ ಊರುಗಳಿಗೆ ಹೋಗಲು ಮಾತ್ರ ರೈಲು, ವಿಮಾನ ಬಳಸುತ್ತಾರೆ. ಆದ್ದರಿಂದ, ಹಲವು ಪ್ರಯಾಣಿಕ ರೈಲುಗಳನ್ನು ಲಾಕ್ ಡೌನ್ ಮುಗಿದ ಮೇಲೆ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.
ಹತ್ತಿರದ ಸ್ಥಳಗಳಿಗೆ ರೈಲು ಓಡಿಸುವುದರಿಂದ ಆದಾಯವೂ ಹೆಚ್ಚು ಬರುವುದಿಲ್ಲ. ಈ ಮಾರ್ಗದ ಟಿಕೆಟ್ ದರಗಳು ಸಹ ಕಡಿಮೆ ಇದೆ. ಆದ್ದರಿಂದ, ಸರಕು ಸಾಗಣೆಗೆ ಆದ್ಯತೆ ನೀಡಬೇಕು ಎಂದು ಯೋಜನೆ ರೂಪಿಸಲಾಗಿದೆ.
ಭವಿಷ್ಯದಲ್ಲಿ ಇಂಟರ್ ಸಿಟಿ ರೈಲುಗಳಿಗೆ ರೈಲ್ವೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ರಾತ್ರಿಯ ಸಂಚಾರದ ರೈಲುಗಳನ್ನು ಓಡಿಸಲಾಗುತ್ತದೆ. ಹೆಚ್ಚು ಬೇಡಿಕೆ ಬಂದರೆ 'ಸುವಿಧಾ' ರೈಲುಗಳ ಸಂಚಾರ ಆರಂಭಿಸಲಾಗುತ್ತದೆ.
ಹತ್ತಿರದ ಊರುಗಳಿಗೆ ಸಂಚಾರ ನಡೆಸುವ ರೈಲುಗಳನ್ನು ನಿಲ್ಲಿಸಿದರೆ ಇಲಾಖೆಗೆ ಆದ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಆಲೋಚನೆ ಇದೆ. ಪ್ರಯಾಣಿಕರ ರೈಲು ಸಂಚಾರ ಎಂದು ಆರಂಭವಾಗಲಿದೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.












Click it and Unblock the Notifications