Indian Railways: ಕಡಿಮೆ ವೆಚ್ಚದಲ್ಲಿ 'ದಿವ್ಯ ದಕ್ಷಿಣ ಯಾತ್ರೆ'- ರೈಲ್ವೆ ಇಲಾಖೆಯಿಂದ ವಿಶೇಷ ಪ್ರವಾಸ ಪ್ಯಾಕೇಜ್, ದಿನಾಂಕ, ವಿವರ
ನವದೆಹಲಿ, ಜುಲೈ 27: ಭಾರತೀಯ ರೈಲ್ವೆಯು ( Indian Railways ) ವಿಶೇಷ ಪ್ರವಾಸ ಪ್ಯಾಕೇಜ್ ಒಂದನ್ನು ಆರಂಭವಿಸಿದೆ. ಪ್ರಮುಖವಾಗಿ ದಕ್ಷಿಣ ಭಾರತದ ( South India ) ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಇದಕ್ಕೆ 'ದಿವ್ಯ ದಕ್ಷಿಣ ಯಾತ್ರೆ' ಎಂದು ಹೆಸರಿಡಲಾಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು, ಐತಿಹಾಸಿಕ ತಾಣಗಳು ಮತ್ತು ರಮಣೀಯ ಪ್ರದೇಶಗಳಿಗೆ ಭೇಟಿ ನೀಡುವುದು ಈ ಪ್ಯಾಕೇಜ್‌ನ ಉದ್ದೇಶವಾಗಿದೆ.

ಜ್ಯೋತಿರ್‌ಲಿಂಗ ಪ್ಯಾಕೇಜ್ ಅಡಿಯಲ್ಲಿ ದಿವ್ಯ ದಕ್ಷಿಣ ಯಾತ್ರೆ ಎಂಬ ಹೆಸರಿನ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಹೊರತಂದಿದೆ. ಇದು ಧಾರ್ಮಿಕ ಯಾತ್ರಾರ್ಥಿಗಳ ಇಷ್ಟಾರ್ಥಗಳನ್ನು ಪೂರೈಸುವ ಪ್ರಯತ್ನವಾಗಿದೆ. ದಕ್ಷಿಣ ಭಾರತದಲ್ಲಿ ಆರು ಮಹತ್ವದ ಯಾತ್ರಾ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ಯಾಕೇಜ್ 9 ದಿನದ ಪ್ರಯಾಣವನ್ನು ಹೊಂದಿದೆ. ಎಲ್ಲಾ ಪ್ರಯಾಣಿಕರಿಗೆ ರೈಲಿನಲ್ಲಿ ಐಷಾರಾಮಿ ಸೌಲತ್ತುಗಳು ಇರಲಿವೆ. ಇದು 2AC, 3AC ಮತ್ತು SL ಕ್ಲಾಸ್‌ಗಳನ್ನು ಒಳಗೊಂಡಿದೆ.

ದಿವ್ಯ ದಕ್ಷಿಣ ಯಾತ್ರೆ ಪ್ಯಾಕೇಜ್ ಒಳಗೊಂಡಿರುವ ಸ್ಥಳಗಳು
ತಿರುವಣ್ಣಾಮಲೈ- ಅರುಣಾಚಲಂ ದೇವಸ್ಥಾನ
ರಾಮೇಶ್ವರಂ- ರಾಮನಾಥಸ್ವಾಮಿ ದೇವಸ್ಥಾನ
ಮಧುರೈ- ಮೀನಾಕ್ಷಿ ಅಮ್ಮನ್ ದೇವಸ್ಥಾನ
ಕನ್ಯಾಕುಮಾರಿ- ರಾಕ್ ಮೆಮೋರಿಯಲ್, ಕುಮಾರಿ ಅಮ್ಮನ್ ದೇವಸ್ಥಾನ
ತಿರುವನಂತಪುರಂ- ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
ತಿರುಚ್ಚಿ- ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ತಂಜಾವೂರು-ಬೃಹದೀಶ್ವರ ದೇವಸ್ಥಾನ
ದಿವ್ಯ ದಕ್ಷಿಣ ಯಾತ್ರೆ ದಿನಾಂಕಗಳು
9 ಆಗಸ್ಟ್ 2023ರಂದು ದಿವ್ಯ ದಕ್ಷಿಣ ಯಾತ್ರೆ ಆರಂಭವಾಗಲಿದೆ. ಇದು 8 ರಾತ್ರಿಗಳು ಮತ್ತು 9 ದಿನಗಳು ಪ್ರಯಾಣವಾಗಿದೆ. ಬುಕಿಂಗ್ ಮಾಡುವ ಮೊದಲು ಅವಧಿ ಮತ್ತು ದಿನಾಂಕಗಳನ್ನು ಖಚಿತಪಡಿಸಿಕೊಳ್ಳಬೇಕು. ಅಧಿಕೃತ ವೆಬ್‌ಸೈಟ್‌ನೊಂದಿಗೆ ಪರಿಶೀಲಿಸುವುದು ಹೆಚ್ಚು ಸೂಕ್ತ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸ್ಟೇಷನ್‌ಗಳು
ಸಿಕಂದರಾಬಾದ್
ಕಾಜಿಪೇಟೆ
ವಾರಂಗಲ್
ಖಮ್ಮಂ
ವಿಜಯವಾಡ
ತೆನಾಲಿ
ಒಂಗೋಲ್
ನೆಲ್ಲೂರು
ಗುಡೂರು
ರೇಣಿಗುಂಟಾ
ದಿವ್ಯ ದಕ್ಷಿಣ ಯಾತ್ರೆ ವೆಚ್ಚ
ಎಕಾನಮಿ ವಿಭಾಗದಲ್ಲಿ ಪ್ರತಿ ವ್ಯಕ್ತಿಗೆ ವೆಚ್ಚ
ಡಬಲ್/ಟ್ರಿಪಲ್ ಶೇರಿಂಗ್- ರೂ. 14,300
ಮಗು (5-11 ವರ್ಷಗಳು)- ರೂ. 13,300

ಸ್ಟ್ಯಾಂಡರ್ಡ್ ಕೆಟಗರಿ ಪ್ರತಿ ವ್ಯಕ್ತಿಗೆ ವೆಚ್ಚ
ಡಬಲ್/ಟ್ರಿಪಲ್ ಶೇರಿಂಗ್- ರೂ. 21,900
ಮಗು (5-11 ವರ್ಷ) - ರೂ. 20,800
ಕಂಫರ್ಟ್ ಕೆಟಗರಿ ಪ್ರತಿ ವ್ಯಕ್ತಿಗೆ ವೆಚ್ಚ
ಡಬಲ್/ಟ್ರಿಪಲ್ ಶೇರಿಂಗ್- ರೂ. 28,500
ಮಗು (5-11 ವರ್ಷಗಳು) - ರೂ. 27,100












Click it and Unblock the Notifications