ಇಂಡಿಗೋ ವಿಮಾನಗಳ ರದ್ದು: ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗೆ ನೆಮ್ಮದಿಯ ಸುದ್ದಿ ನೀಡಿದ ಭಾರತೀಯ ರೈಲ್ವೆ
Indian Railways Good News: ದೇಶಾದ್ಯಂತ ಕಳೆದ ಕೆಲ ದಿನಗಳಿಂದ ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಇಂದು ಕೂಡ ಇದು ಮುಂದುವರೆದಿದೆ. ಪರಿಣಾಮ ಪ್ರಯಾಣಿಕರು ಈಗಲೂ ಹಲವಾರು ಏರ್‌ಪೋರ್ಟ್‌ಗಳಲ್ಲಿ ಯಾವುದೇ ಪರ್ಯಾಯ ದಾರಿ ಇಲ್ಲದೆ ಇಕ್ಕಟ್ಟಿಗೆ ಸಿಲುಕಿ ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗುವಂತಹ ಶುಭ ಸುದ್ದಿಯೊಂದನ್ನು ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಇದೀಗ ಸದ್ಯ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣಗಳು ಮಾರುಕಟ್ಟೆಯಂತೆ ಮಾರ್ಪಟ್ಟುಬಿಟ್ಟಿವೆ. ಕಾರಣ ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಪಡಿಸಿರುವುದು. ಇದರಿಂದ ಬೇರೆಡೆ ಪ್ರಯಾಣ ಬೆಳೆಸುವ ಪ್ರಯಾಣಿಕರೆಲ್ಲಾ ಯಾವುದೇ ಪರ್ಯಾಯ ದಾರಿ ಇಲ್ಲದೆ ವಿಮಾನ ನಿಲ್ದಾಣಗಳಲ್ಲೇ ಬೀಡುಬಿಟ್ಟಿದ್ದಾರೆ. ಜೊತೆಗೆ ವಿಮಾನಯಾನ ಸಂಸ್ಥೆ ವಿರುದ್ಧವೂ ಕೆಂಡಕಾರುತ್ತಿದ್ದಾರೆ. ಟಿಕೆಟ್ ಬುಕಿಂಗ್ ಆಯ್ಕೆಯನ್ನು ಯಾಕೆ ತೆರೆಯಬೇಕಿತ್ತು? ಮುಂಚಿತವಾಗಿ ಇದನ್ನು ಕ್ಲೋಸ್ ಮಾಡಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದರ ಬೆನ್ನಲ್ಲೇ ಪ್ರಯಾಣಿಕರ ಗೋಳು ಅರಿತುಕೊಂಡ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಈ ಇಲಾಖೆಯು ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ದಟ್ಟಣೆ ನಿವಾರಣೆಗೆ ಹೆಚ್ಚುವರಿ ರೈಲುಗಳು ಬಿಡುತ್ತಲಿರುತ್ತಲಿರುತ್ತದೆ. ಇದೀಗ ಇಂಡಿಗೋ ವಿಮಾನ ಸಂಸ್ಥೆ ಮಾಡಿದ ಯಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ವಿಮಾನ ಸೇವೆ ಸ್ಥಗಿತಗೊಂಡ ಹಿನ್ನೆಲೆ ಪ್ರಯಾಣಿಕರಿಗೆ ಸೇವೆ ನೀಡಲು ರೈಲ್ವೇ ಇಲಾಖೆ ಮುಂದೆ ಬಂದಿದ್ದು, ಅಂತರ್ ರಾಜ್ಯಗಳಿಗೆ ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನ ಜೋಡಿಸಲಾಗಿದೆ. ಈ ಮೂಲಕ ವಿಮಾನ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರ ನೆರವಿಗೆ ಭಾರತೀಯ ರೈಲ್ವೆ ಧಾವಿಸಿದೆ. ಹಾಗಾದ್ರೆ, ಯಾವೆಲ್ಲಾ ರೈಲಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವೆಲ್ಲಾ ರೈಲುಗಳಿಗೆ ಹೆಚ್ಚುವರಿ ಎಸಿ ಕೋಚ್?
* ಹಮ್ಸಫರ್ ಏಕ್ಸ್‌ಪ್ರೆಸ್
* ತಿರುವಂತನಪುರಂ ಸೆಂಟ್ರಲ್ ಏಕ್ಸ್‌ಪ್ರೆಸ್
* ಡಾ.ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್
* ಮಂಗಳೂರು ಸೂಪರ್ ಫಸ್ಟ್ ಎಕ್ಸ್‌ಪ್ರೆಸ್
* ಮುಂಬೈ ಸಿಎಸ್‌ಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
* ಚೆನ್ನೈ ಬಿಚ್ ಸೂಪರ್ ಫಸ್ಟ್ ಎಕ್ಸ್‌ಪ್ರೆಸ್
* ಬೆಂಗಳೂರು-ಅಗರ್ತಲಾ- ಹಮ್ ಸಫರ್ ಎಕ್ಸ್‌ಪ್ರೆಸ್
* ಮಂಗಳೂರು-ತಿರುವನಂತಪುರ-ತಿರು ಸೆಂಟ್ರಲ್ ಎಕ್ಸ್‌ಪ್ರೆಸ್
* ಬೆಂಗಳೂರು-ಚೆನ್ನೈ- ಡಾ.ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್
* ಮುಂಬೈ-ಮಂಗಳೂರು-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
* ಮುಂಬೈ ಮಂಗಳೂರು ಮುಂಬೈ ಸಿಎಸ್‌ಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
ವಿಮಾನ ರದ್ದಾಗಿ ಪರದಾಡ್ತಿರುವ ಪ್ರಯಾಣಿಕರು ಈ ರೈಲುಗಳ ಮೂಲಕ ತಮ್ಮ, ತಮ್ಮ ಊರು ತಲುಪಬಹುದಾಗಿದೆ.
ಬೆಂಗಳೂರು ಸೇರಿದಂತೆ ಹಲವೆಡೆ ಇಂದಿನಿಂದ ವಿಮಾನ ಹಾರಾಟ ಆರಂಭವಾಗಿದೆ ಎನ್ನುವ ಮಾಹಿತಿ ಇದೆ. ಆದರೂ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ನಿಯಂತ್ರಣ ಮಾಡುವುದು ತುಂಬಾ ಕಷ್ಟ. ಆದ್ದರಿಂದ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ ಎನ್ನಲಾಗಿದೆ.












Click it and Unblock the Notifications