Indian Railway: ರೈಲು ಟಿಕೆಟ್ ಬುಕ್ಕಿಂಗ್ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
Indian Railway: ಭಾರತೀಯ ರೈಲ್ವೆಯು ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ರೈಲಿನಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಕೆಲವೊಂದು ಮಹತ್ವದ ಗುಡ್‌ನ್ಯೂಸ್ ಅನ್ನು ಕೇಂದ್ರ ರೈಲ್ವೆ ಇದೀಗ ನೀಡಿದೆ. ಅದರ ವಿವರ ಇಲ್ಲಿದೆ.
ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದೆ. ಅದರಲ್ಲೂ ಮುಖ್ಯವಾಗಿ ಕಾಯ್ದಿರಿಸಿದ ರೈಲು ಟಿಕೆಟ್‌ನ ಸೀಟ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ಬದಲಾವಣೆಯನ್ನು ಇದೀಗ ಮಾಡಲಾಗಿದೆ. ಪ್ರಯಾಣಿಕರು ನಿರ್ದಿಷ್ಟ ಪ್ರದೇಶಗಳಿಗೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಯಾವುದೇ ಸೀಟ್ ಆಯ್ಕೆ ನೀಡದಿದ್ದರೂ ಹಿರಿಯ ನಾಗರಿಕರು ಮತ್ತು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರಿಗೆ ಆದ್ಯತೆಯ ಸೀಟ್ (ಕೆಳಗಿನ ಸೀಟುಗಳು) ಹಂಚಿಕೆ ಸ್ವಯಂಚಾಲಿತವಾಗಿ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇನ್ನು ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಕೆಲವು ಪ್ರಮುಖ ಸೌಲಭ್ಯಗಳನ್ನು ವಿಸ್ತರಿಸಿರುವು ದಾಗಿಯೂ ಸಚಿವ ವೈಷ್ಣವ್ ಅವರು ಹೇಳಿದ್ದಾರೆ. ಸ್ಲೀಪರ್ ಕ್ಲಾಸ್‌ನಲ್ಲಿ ಪ್ರತಿ ಕೋಚ್‌ಗೆ ಆರರಿಂದ ಏಳು ಲೋವರ್ ಬರ್ತ್‌ಗಳು, ಹವಾನಿಯಂತ್ರಿತ 3 ಟೈರ್ (3AC) ನಲ್ಲಿ ತಲಾ ನಾಲ್ಕರಿಂದ ಐದು ಲೋವರ್ ಬರ್ತ್‌ಗಳು ಮತ್ತು ಹವಾನಿಯಂತ್ರಿತ 2 ಟೈರ್ (2AC) ತರಗತಿಗಳಲ್ಲಿ ಪ್ರತಿ ಕೋಚ್‌ಗೆ ಮೂರರಿಂದ ನಾಲ್ಕು ಲೋವರ್ ಬರ್ತ್‌ಗಳನ್ನು (ರೈಲಿನಲ್ಲಿ ಆ ವರ್ಗದ ಕೋಚ್‌ಗಳ ಸಂಖ್ಯೆಯನ್ನು ಅವಲಂಬಿಸಿ) ಹಿರಿಯ ನಾಗರಿಕರು, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಮೀಸಲಿರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದಲ್ಲದೆ, ರಾಜಧಾನಿ/ಶತಾಬ್ದಿ ಮಾದರಿಯ ರೈಲುಗಳು ಸೇರಿದಂತೆ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಅಂಗವಿಕಲರು ಮತ್ತು ಅವರ ಸಹಾಯಕರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಸ್ಲೀಪರ್ ಮತ್ತು 3AC/3E ದರ್ಜೆಯಲ್ಲಿ (ಎರಡು ಕೆಳ ಮತ್ತು ಎರಡು ಮಧ್ಯಮ ಬರ್ತ್‌ಗಳು ಸೇರಿದಂತೆ) ತಲಾ ನಾಲ್ಕು ಬರ್ತ್‌ಗಳನ್ನು ಮತ್ತು ಕಾಯ್ದಿರಿಸಿದ ಎರಡನೇ ಕುಳಿತುಕೊಳ್ಳುವ (2S)/ಹವಾನಿಯಂತ್ರಿತ ಚೇರ್ ಕಾರ್ (CC) ನಲ್ಲಿ ನಾಲ್ಕು ಸೀಟುಗಳನ್ನು ಅವರಿಗೆ ಮೀಸಲಿರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಅಲ್ಲದೇ ರೈಲಿನಲ್ಲಿ ಯಾವುದೇ ಬರ್ತ್ ಖಾಲಿಯಾದರೆ, ಅದನ್ನು ಹಿರಿಯ ನಾಗರಿಕರು, ಅಂಗವಿಕಲರು ಅಥವಾ ಗರ್ಭಿಣಿಯರಿಗೆ (ಮಧ್ಯಮ/ಮೇಲಿನ ಬರ್ತ್ ಹಂಚಿಕೆಯಾಗಿರುವವರು) ಆದ್ಯತೆಯ ಮೇಲೆ ಹಂಚಲಾಗುತ್ತದೆ. ಸುರಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಗಮನದಲ್ಲಿ ಇರಿಸಿಕೊಂಡು ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸಲಾಗಿದೆ.
ಇನ್ನು ದೃಷ್ಟಿ ಸಮಸ್ಯೆ ಇರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಸಂಯೋಜಿತ ಬ್ರೈಲ್ ಚಿಹ್ನೆಗಳನ್ನು - ಬ್ರೈಲ್ ಲಿಪಿಗಳೊಂದಿಗೆ ಕೆಲವೊಂದು ಪ್ರಮುಖ ಫಲಕಗಳನ್ನು ಸಹ ಒದಗಿಸಲಾಗಿದೆ. ಆಧುನಿಕ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳನ್ನು ದಿವ್ಯಾಂಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ವಂದೇ ಭಾರತ್ ರೈಲುಗಳ ಮೊದಲ ಮತ್ತು ಕೊನೆಯ ಬೋಗಿಗಳು ವೀಲ್‌ಚೇರ್, ದಿವ್ಯಾಂಗರಿಗೆ ಸ್ನೇಹಿ ಶೌಚಾಲಯಗಳು ಇತ್ಯಾದಿಗಳಿಗೆ ವಿಶೇಷ ವ್ಯವಸ್ಥೆ ಮಾಡಿರುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications