Indian Railway: ಭಾರತದ ಟಾಪ್ 6 ಅತಿ ಉದ್ದವಾದ ರೈಲು ಪ್ಲಾಟ್‌ಫಾರ್ಮ್‌ಗಳ ಪಟ್ಟಿ ಇಲ್ಲಿದೆ

ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಂಪರ್ಕಿಸುವ ಅತಿ ದೊಡ್ಡ ವ್ಯವಸ್ಥೆಯಲ್ಲಿ ಕೆಲವು ರೈಲು ನಿಲ್ದಾಣಗಳು ತಮ್ಮ ದೇಶದಲ್ಲೆ ಅತಿ ಉದ್ದವಾದ ಪ್ಲಾಟ್‌ಫಾರ್ಮ್‌ಗಳಿಂದ ವಿಶೇಷ ಗಮನ ಸೆಳೆಯುತ್ತಿವೆ. ಇಂತಹ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ರೈಲುಗಳನ್ನು ಸುಲಭವಾಗಿ ನಿಲುಗಡೆಗೊಳಿಸಲು ಸಹಾಯ ಮಾಡುವುದರ ಜೊತೆಗೆ, ಹೆಚ್ಚಿನ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗುತ್ತವೆ. ಭಾರತದ ಅತಿ ಉದ್ದವಾದ 6 ರೈಲು ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್(ಹುಬ್ಬಳ್ಳಿ ಜಂಕ್ಷನ್ - 1,507 ಮೀಟರ್)

ಕರ್ನಾಟಕದ ಹೆಮ್ಮೆ ಹುಬ್ಬಳ್ಳಿ ಜಂಕ್ಷನ್ ರೈಲು ನಿಲ್ದಾಣವು ಸುಮಾರು 1,507 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಹೊಂದಿದ್ದು, ಪ್ರಸ್ತುತ ವಿಶ್ವದಲ್ಲೇ ಅತಿ ಉದ್ದವಾದ ರೈಲು ಪ್ಲಾಟ್‌ಫಾರ್ಮ್ ಎಂದು ಗುರುತಿಸಿಕೊಂಡಿದೆ. ಇದು ಸಂಪೂರ್ಣ ಉದ್ದದ ರೈಲುಗಳನ್ನು ಸುಲಭವಾಗಿ ನಿಲುಗಡೆಗೊಳಿಸಲು ವಿನ್ಯಾಸಗೊಳಿಸಲಾಗಿದೆ.

Indian Railway

2. ಗೋರಖ್‌ಪುರ ಜಂಕ್ಷನ್ (1,366 ಮೀಟರ್)

ಈ ಹಿಂದೆ ವಿಶ್ವದ ಅತಿ ಉದ್ದವಾದ ಪ್ಲಾಟ್‌ಫಾರ್ಮ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ ಗೋರಖ್‌ಪುರ ಜಂಕ್ಷನ್, ಇಂದಿಗೂ 1,366 ಮೀಟರ್ ಉದ್ದದೊಂದಿಗೆ ಪ್ರಮುಖ ಸ್ಥಾನದಲ್ಲಿದೆ. ಇದು ದೇಶದ ಅತ್ಯಂತ ಬಿಡುವಿಲ್ಲದ ರೈಲು ಮಾರ್ಗಗಳಲ್ಲಿ ಇದು ಒಂದಾಗಿದೆ.

ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ

3. ಕೊಲ್ಲಂ ಜಂಕ್ಷನ್ (1,180 ಮೀಟರ್)

ಇದು ಕೇರಳದ ಕೊಲ್ಲಂ ನಗರದಲ್ಲಿರುವ ಕೊಲ್ಲಂ ಜಂಕ್ಷನ್, ಇದು ಸುಮಾರು 1,180 ಮೀಟರ್ ಉದ್ದವಿರುವ ಕೊಲ್ಲಂ ಜಂಕ್ಷನ್ ದಕ್ಷಿಣ ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಭಾರೀ ಪ್ರಯಾಣಿಕರ ಸಂಚಾರವನ್ನು ನಿರ್ವಹಿಸುತ್ತದೆ ಮತ್ತು ಕೇರಳದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ.

Indian Railway

4. ಖರಗ್ ಪುರ ಜಂಕ್ಷನ್ (1,072 ಮೀಟರ್)

ಸುಮಾರು 1,072 ಮೀಟರ್ ಉದ್ದವಿರುವ ಖರಗ್ಪುರ್ ಜಂಕ್ಷನ್, ಒಂದು ಕಾಲದಲ್ಲಿ ಅತಿ ಉದ್ದವಾದ ಪ್ಲಾಟ್‌ಫಾರ್ಮ್ ಹೊಂದಿದ ನಿಲ್ದಾಣವಾಗಿತ್ತು. ಇದು ಭಾರತದ ರೈಲ್ವೇ ಮೂಲಸೌಕರ್ಯದ ಅಭಿವೃದ್ಧಿಯ ಉದಾಹರಣೆಯಾಗಿದೆ. ದಿನನಿತ್ಯ ಅನೇಕ ಪ್ರಮುಖ ರೈಲುಗಳು ಇಲ್ಲಿ ನಿಲುಗಡೆ ಮಾಡುವುದರಿಂದ ಇದು ಅತ್ಯಂತ ಬ್ಯುಸಿ ಜಂಕ್ಷನ್‌ಗಳಲ್ಲಿ ಒಂದಾಗಿದೆ.

Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್

5. ಬಿಲಾಸ್ಪುರ್ ಜಂಕ್ಷನ್ (1,055 ಮೀಟರ್)

ಸುಮಾರು 1,055 ಮೀಟರ್ ಉದ್ದವಿರುವ ಬಿಲಾಸ್ಪುರ್ ಜಂಕ್ಷನ್, ಪ್ರಯಾಣಿಕರು ಮತ್ತು ಸರಕು ಸಾಗಣೆಗೆ ಪ್ರಮುಖ ಕೇಂದ್ರವಾಗಿದೆ. ಇದು ದಕ್ಷಿಣ ಪೂರ್ವ ಮಧ್ಯ ರೈಲ್ವೇ ವಲಯದ ಪ್ರಮುಖ ನಿಲ್ದಾಣವಾಗಿದ್ದು, ದಿನನಿತ್ಯ ಭಾರೀ ಜನದಟ್ಟಣೆಯ ಸಂಚಾರವನ್ನು ನಿರ್ವಹಿಸುತ್ತದೆ.

Indian Railway

6. ವಿರಂಗನ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ (ಝಾನ್ಸಿ ಜಂಕ್ಷನ್- 1,050 ಮೀಟರ್)

ಝಾನ್ಸಿ ಜಂಕ್ಷನ್ ಉತ್ತರ ಪ್ರದೇಶದ ಒಂದು ಪ್ರಮುಖ ರೈಲ್ವೆ ನಿಲ್ದಾಣವಾಗಿದೆ. ಸುಮಾರು 1,050 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಹೊಂದಿರುವ ಝಾನ್ಸಿ ಜಂಕ್ಷನ್, ದೂರದ ರೈಲು ಸಂಚಾರಕ್ಕೆ ಮಹತ್ವದ ಕೇಂದ್ರವಾಗಿದೆ. ಉತ್ತರ ಮತ್ತು ಮಧ್ಯ ಭಾರತದ ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿಯೂ ಇದು ಗುರುತಿಸಿಕೊಂಡಿದೆ.

ಭಾರತದಲ್ಲಿ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಮಾತ್ರವಲ್ಲ, ರೈಲ್ವೇ ವ್ಯವಸ್ಥೆಯ ಸಾಮರ್ಥ್ಯ ಮತ್ತು ಅಭಿವೃದ್ಧಿಯನ್ನೂ ಪ್ರತಿಬಿಂಬಿಸುತ್ತವೆ. ಇಂತಹ ಪ್ಲಾಟ್‌ಫಾರ್ಮ್‌ಗಳು ರೈಲುಗಳನ್ನು ಯಾವುದೇ ತೊಂದರೆಯಿಲ್ಲದೆ ನಿಲ್ಲಿಸಲು ಸಹಾಯ ಮಾಡುತ್ತವೆ, ಇದರಿಂದ ಕಾರ್ಯಾಚರಣೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದರ ಜೊತೆಗೆ, ಈ ರೀತಿಯ ಮೂಲಸೌಕರ್ಯವು ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ನಿಲ್ದಾಣಗಳು ಭಾರತದ ರೈಲ್ವೇ ಅಭಿವೃದ್ಧಿಗೆ ಉತ್ತಮ ಉದಾಹರಣೆಯಾಗಿವೆ ಮತ್ತು ದೇಶದ ಮೂಲಸೌಕರ್ಯ ಪ್ರಗತಿಯನ್ನು ತೋರಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+