ಭಾರತದಲ್ಲೇ ವಿದೇಶಿ ಕಂಪನಿಗಳ ಕೊವಿಡ್-19 ಲಸಿಕೆಗಳ ಉತ್ಪಾದನೆ

ನವದೆಹಲಿ, ಜೂನ್ 03: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿಯಾಗಿರುವ ಹಿನ್ನೆಲೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪ್ರಮುಖ ಲಸಿಕೆ ಉತ್ಪಾದನಾ ಕಂಪನಿಗಳ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ.

ಕೊವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಅಮೆರಿಕಾದ ಫೈಜರ್, ಜಾನ್ಸನ್ ಆಂಡ್ ಜಾನ್ಸನ್ ಮತ್ತು ಮಾಡರ್ನಾ ಕಂಪನಿಗಳ ಜೊತೆಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಾಹರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಹೇಳಿದ್ದಾರೆ.

ವಿದೇಶಿ ಕೊವಿಡ್-19 ಲಸಿಕೆಯನ್ನು ಭಾರತೀಯ ಕಂಪನಿಗಳಲ್ಲಿ ಉತ್ಪಾದಿಸುವುದಕ್ಕೆ ಅನುಮತಿ ನೀಡುವುದರ ಕುರಿತಾಗಿಯೂ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಫೈಜರ್, ಜಾನ್ಸನ್ ಆಂಡ್ ಜಾನ್ಸನ್ ಮತ್ತು ಮಾಡರ್ನಾ ಕಂಪನಿಗಳ ಜೊತೆಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ದೇಶೀಯ ಕಂಪನಿಗಳಲ್ಲಿ ಆ ಲಸಿಕೆಗಳನ್ನು ಉತ್ಪಾದಿಸುವುದಕ್ಕೆ ಅನುಮತಿ ಸಿಗುವ ಸಾಧ್ಯತೆಗಳಿವೆ ಎಂದು ಎಂಇಎ ವಕ್ತಾರ ಅರಿಂದಮ್ ತಿಳಿಸಿದ್ದಾರೆ.

Indian Govt Talks With Pfizer, Moderna, J&J To Procure And Manufacture Coronavirus Vaccines

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಜಾಗತಿಕ ಒಗ್ಗಟ್ಟು:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ ಎಂದು ಭಾರತದ ವಿದೇಶಾಂಗ ವ್ಯವಾಹರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಹೇಳಿದ್ದಾರೆ. ಕೊರೊನಾವೈರಸ್ ಕುರಿತು ಆಗ್ನೇಯ ಏಷ್ಯಾ ಪ್ರಾದೇಶಿಕ ಆರೋಗ್ಯ ಪಾಲುದಾರರ ವೇದಿಕೆಯಲ್ಲಿ ಮಾತನಾಡಿದ ಅವರು, ಜಗತ್ತಿನ ಬಲಿಷ್ಠ ರಾಷ್ಟ್ರಗಳು ಒಂದಾಗಿ ಜಾಗತಿಕ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ G7, G20, QUAD, BRICS, UN ಮತ್ತು WHO ಜೊತೆಗೆ ಜಾಗತಿಕ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+