ಗಡಿ ಅತಿಕ್ರಮಣಕ್ಕೆ ಯತ್ನಿಸಿದ ಚೀನೀ ಸೈನಿಕರಿಗೆ ತಕ್ಕ ಪ್ರತ್ಯುತ್ತರ
ನವದೆಹಲಿ, ಡಿಸೆಂಬರ್ 13: ಭಾರತದ ಗಡಿ ಪ್ರದೇಶದಲ್ಲಿ ಯಾರಾದರೂ ಅತಿಕ್ರಮಣ ಮಾಡಲು ಯತ್ನಿಸಿದರೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಉಭಯ ದೇಶಗಳ ಸೈನಿಕರು ಘರ್ಷಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. "ಯಾಂಗ್ತ್ಸೆ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ನಾನು ಆ ಪ್ರದೇಶದ ಜವಾನರು ಮತ್ತು ಗ್ರಾಮಸ್ಥರನ್ನು ಭೇಟಿಯಾಗುತ್ತೇನೆ. ಇದು ಇನ್ನು 1962 ಅಲ್ಲ. ಯಾರಾದರೂ ಉಲ್ಲಂಘಿಸಲು ಪ್ರಯತ್ನಿಸಿದರೆ, ನಮ್ಮ ವೀರ ಸೈನಿಕರು ತಕ್ಕ ಉತ್ತರವನ್ನು ನೀಡುತ್ತಾರೆ," ಎಂದು ಸಿಎಂ ಪೆಮಾ ಖಂಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಸೆಂಬರ್ 9ರಂದು ತವಾಂಗ್‌ನ ಯಾಂಗ್ಟ್ಸೆಯಲ್ಲಿ ನಡೆದ ಘಟನೆಯ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಿದರು. ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು, ಇದು ಸೈನಿಕರ ನಡುವೆ ಗಲಾಟೆಗೆ ಕಾರಣವಾಯಿತು. ಆದರೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ತಮ್ಮ ಸ್ಥಳಗಳಿಗೆ ಮರಳುವಂತೆ ಒತ್ತಾಯಿಸಿದ್ದು, ಆ ಯೋಧರನ್ನು ತಡೆದರು," ಎಂದು ರಾಜನಾಥ್ ಸಿಂಗ್ ಹೇಳಿದರು.

ಯಾಂಗ್ಸೆ, ತವಾಂಗ್‌ನಲ್ಲಿ ಗಡಿ ರೇಖೆ ಉಲ್ಲಂಘನೆ:
ಚೀನಾದ ಪಡೆಗಳು "ಯಾಂಗ್ಸೆ, ತವಾಂಗ್‌ನಲ್ಲಿ ಎಲ್ಎಸಿ ಅನ್ನು ಉಲ್ಲಂಘಿಸಲು ಪ್ರಯತ್ನಿಸಿದವು. ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದವು" ಎಂದು ರಾಜನಾಥ್ ಸಿಂಗ್ ಹೇಳಿದರು. "ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ಚೀನಾದ ಸೈನಿಕರು ತಮ್ಮ ಸ್ಥಳಗಳಿಗೆ ಮರಳಿದರು." ನಂತರ ಕಮಾಂಡರ್‌ಗಳ ಸಭೆಯಲ್ಲಿ, "ಇಂತಹ ಕ್ರಮಗಳಿಂದ ದೂರವಿರಿ ಮತ್ತು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಚೀನಿಯರು ಕೇಳಿಕೊಂಡರು, ಈ ಘಟನೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕವೂ ತೆಗೆದುಕೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
2020ರಲ್ಲಿ ಗಲ್ವಾನ್ ಘರ್ಷಣೆ:
ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 2020ರಂದು ಘರ್ಷಣೆಗಳು ನಡೆದಿದ್ದವು. ಅಂದು ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ವ್ಯಾಪಕವಾಗಿ ಉಲ್ಬಣಗೊಂಡವು, ಇದರಲ್ಲಿ ದೇಶಕ್ಕಾಗಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು 40ಕ್ಕೂ ಹೆಚ್ಚು ಚೀನೀ ಸೈನಿಕರು ಮೃತಪಟ್ಟಿದ್ದರು.












Click it and Unblock the Notifications