Poonch Terrorist Attack: ಹುತಾತ್ಮ ಯೋಧರ ಹೆಸರು ಬಹಿರಂಗ ಪಡಿಸಿದ ಸೇನೆ

ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಐವರು ಸೈನಿಕರ ಹೆಸರನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಹವಿಲ್ದಾರ್ ಮನ್ದೀಪ್ ಸಿಂಗ್, ಲ್ಯಾನ್ಸ್ ನಾಯ್ಕ್ ದೇಬಾಶಿಶ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಹರ್ಕ್ರಿಶನ್ ಸಿಂಗ್ ಮತ್ತು ಸಿಪಾಯಿ ಸೇವಕ್ ಸಿಂಗ್ ಹುತಾತ್ಮರಾದ ಸೈನಿಕರು ಎಂದು ಗುರುತಿಸಲಾಗಿದೆ.

ಭಯೋತ್ಪಾದನಾ ಘಟನೆ ನಡೆದ ಸ್ಥಳಕ್ಕೆ ಎನ್‌ಐಎ ತಂಡವನ್ನು ಕಳುಹಿಸಲಾಗಿದೆ. ದೆಹಲಿಯಿಂದ ಎನ್‌ಐಎ ಫೊರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ತಲುಪಲಿದೆ.ದಾಳಿ ಮಾಡಿದ ಯೋಧರಿಗಾಗಿ ಭದ್ರತಾ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಗುರುವಾರ ಮಧ್ಯಾಹ್ನ ಸೇನಾ ವಾಹನದ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಮೊದಲು ಗುಂಡಿನ ದಾಳಿ ನಡೆಸಿದ್ದು ನಂತರ ಗ್ರೆನೇಡ್‌ನಿಂದ ವಾಹನದ ಮೇಲೆ ದಾಳಿ ಮಾಡಲಾಗಿದೆ. ಇಂಧನ ಟ್ಯಾಂಕ್‌ಗೆ ಬೆಂಕಿಹೊತ್ತಿಕೊಂಡ ಪರಿಣಾಮ ಸೇನಾ ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ.

 Indian Army Reveals Names Of Soldiers Who Were Killed In Terrorist Attack In Poonch

ಭಾರಿ ಮಳೆಯಾಗುತ್ತಿದ್ದ ಕಾರಣ ಹೆಚ್ಚಿನ ದೂರದವರೆಗೆ ವೀಕ್ಷಣೆಗೆ ಅವಕಾಶ ಇಲ್ಲವಾದ್ದರಿಂದ ಭಯೋತ್ಪಾದರು ಸುಲಭವಾಗಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ನಾಲ್ಕು ಕಡೆಗಳಿಂದ ಗುಂಡಿನ ದಾಳಿ ನಡೆದಿದೆ ಸೇನಾ ಅಧಿಕಾರಿಗಳು ತಿಳಸಿದ್ದಾರೆ. ದಾಳಿಯ ಬಳಿಕ ಉಗ್ರರು ಪರಾರಿಯಾಗಿದ್ದಾರೆ. ಸದ್ಯ ಭದ್ರತಾ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿವೆ.

ರಾಷ್ಟ್ರದ ಉನ್ನತ ರಾಜಕೀಯ ನಾಯಕರು ಭಯೋತ್ಪಾದನಾ ದಾಳಿಯನ್ನು ಖಂಡಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಾಳಿಯನ್ನು ಖಂಡಿಸಿದ್ದು, ದಾಳಿಯ ಹಿಂದಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+