ಕೊರೊನಾ: ಚೀನಾಗೆ ಹೊರಟ ಭಾರತೀಯ ವಾಯುಪಡೆಯ ವಿಮಾನ

ನವದೆಹಲಿ, ಫೆ 26: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಪಟ್ಟಿ ಏರುತ್ತಲೇ ಇದ್ದು, ಚೀನಾ ಹೊರತಾಗಿ ದಕ್ಷಿಣ ಕೊರಿಯಾದಲ್ಲೂ ಇದುವರೆಗೆ 893 ಪ್ರಕರಣಗಳು ದಾಖಲಾಗಿವೆ.

ಈ ನಡುವೆ, ಭಾರತೀಯ ವಾಯುಪಡೆಯ ವಿಮಾನ, ಚೀನಾದ ವುಹಾನ್ ನಗರಕ್ಕೆ, ಹದಿನೈದು ಟನ್ ಮೆಡಿಸಿನ್ ಹೊತ್ತು ಹೊರಟಿದೆ. ಇದರ ಜೊತೆಗೆ C-17 ಮಿಲಿಟರಿ ಯುದ್ದ ವಿಮಾನ, ಅಲ್ಲಿ ಸಿಲುಕಿಕೊಂಡಿರುವರನ್ನು ಸ್ವದೇಶಕ್ಕೆ ವಾಪಸ್ ಕರೆತರಲಿದೆ.

ಸರಕಾರದ ಮೂಲಗಳ ಪ್ರಕಾರ, ಎಂಬತ್ತು ಭಾರತೀಯರು ಮತ್ತು ಪಕ್ಕದ ದೇಶದ ನಲವತ್ತು ನಾಗರೀಕರನ್ನು,ಈ ವಿಮಾನ ವಾಪಸ್ ಕರೆದುಕೊಂಡು ಬರಲಿದೆ.

Indian Airforce Flights Leaves To China With 15 Tonnes Of Medical Supplies

ಕಳೆದ ವಾರ, ಕೊರೊನಾ ಪೀಡಿತ ವುಹಾನ್ ನಗರಕ್ಕೆ ಪ್ರವೇಶಿಸಲು ನಮ್ಮ ವಿಮಾನಗಳಿಗೆ ಅನುಮತಿ ನೀಡಲು ಚೀನಾ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರಕಾರ ದೂರಿತ್ತು. ಇದು ಸುಳ್ಳು ಆಪಾದನೆ ಎಂದು ಚೀನಾ ಪ್ರತಿಕ್ರಿಯೆ ನೀಡಿತ್ತು.

"ವಿಶ್ವ ಆರೋಗ್ಯ ಸಂಘಟನೆ, ಕೊರೊನಾ ವೈರಸ್ ಸೋಂಕಿತರನ್ನು, ಸಾರ್ವಜನಿಕ ಆರೋಗ್ಯ ಎಮರ್ಜೆನ್ಸಿ ಎಂದು ಘೋಷಿಸಿರುವುದರಿಂದ, ಹದಿನೈದು ಟನ್ ಲಸಿಕೆ ಮತ್ತು ವೈದ್ಯಕೀಯ ಉಪಕರಣಗಳನ್ನು ಚೀನಾಗೆ ಕಳುಹಿಸಲು ನಿರ್ಧರಿಸಲಾಗಿದೆ" ಎಂದು ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

"ಗ್ಲೌವ್ಸ್, ಮಾಸ್ಕ್, ಮೆಡಿಸಿನ್ ಮುಂತಾದವುಗಳನ್ನು ಹೊತ್ತ ವಿಮಾನ ಚೀನಾಗೆ ಈಗಾಗಲೇ ಹೊರಟಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈ ಭಯಾನಕ ಸೋಂಕಿನಿಂದ ಇದುವರೆಗೆ ಚೀನಾದಲ್ಲಿ 2,715 ಜನ ಮೃತ ಪಟ್ಟಿದ್ದರೆ, ಸುಮಾರು, 78 ಸಾವಿರ ಜನರಿಗೆ ಕೊರೊನಾ ಸೋಂಕು ಹರಡಿರುವುದು ಧೃಡಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+