ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!

|
Google Oneindia Kannada News

Recommended Video

Surgical Strike 2: ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು ಕೋಟಿ ಮೌಲ್ಯದ ಬಾಂಬ್! | Oneindia Kannada

ಬೆಂಗಳೂರು, ಫೆಬ್ರವರಿ 26 : ಭಾರತೀಯ ವಾಯುಸೇನೆ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಉಗ್ರರನ್ನು ಕೊಂದು ಶಿಬಿರವನ್ನು ನಾಶ ಮಾಡಿದೆ. 1.7 ಕೋಟಿ ರೂ. ಮೌಲ್ಯದ ಬಾಂಬ್‌ಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಮಂಗಳವಾರ ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಈ ಮೂಲಕ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ದಾಳಿ ಮಾಡಿದ್ದ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಸೇಡು ತೀರಿಸಿಕೊಂಡಿದೆ.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಗಡಿನಿಯಂತ್ರಣ ರೇಖೆಯಾಚೆ ಇರುವ ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರ ನಾಶ ಮಾಡಲು 2,568 ಕೋಟಿ ರೂ. ಮೌಲ್ಯದ ವಾಯುಪಡೆಯ ಆಸ್ತಿಗಳನ್ನು ಬಳಸಿಕೊಳ್ಳಲಾಗಿತ್ತು. ಉಗ್ರರ ಶಿಬಿರದ ಮೇಲೆ 1.7 ಕೋಟಿ ರೂ. ಮೌಲ್ಯದ ಬಾಂಬ್‌ ದಾಳಿ ಮಾಡಲಾಗಿದೆ.

ಉಗ್ರರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್ಉಗ್ರರ ಮೇಲಿನ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ನೇತ್ರಾ, ಹೆರಾನ್

1000 ಕೆಜಿ ಬಾಂಬ್‌ ಬಳಕೆ ಮಾಡಲಾಗಿದೆ. ಪ್ರತಿ ಬಾಂಬ್ ಮೌಲ್ಯ 56 ಲಕ್ಷ ರೂ.ಗಳು. ಬಾಲಾಕೋಟ್, ಚಕೋತಿ ಮತ್ತು ಮುಜಾಫರಾಬಾದ್‌ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಲೇಸರ್‌ ಲೈಟ್ ಮೂಲಕ ಈ ಬಾಂಬ್‌ಗಳನ್ನು ಹಾಕಲಾಗಿದೆ.

ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್ಕೇವಲ 21 ನಿಮಿಷದಲ್ಲಿ ಉಗ್ರರ ನೆಲೆಗಳ ಧ್ವಂಸ, ಆಪರೇಷನ್ ಫಿನಿಷ್

ಆಪರೇಷನ್‌ಗೆ ಸಿದ್ಧವಾಗಿದ್ದು ಎಷ್ಟು?

ಆಪರೇಷನ್‌ಗೆ ಸಿದ್ಧವಾಗಿದ್ದು ಎಷ್ಟು?

ಬಾಲಾಕೋಟ್, ಚಕೋತಿ ಮತ್ತು ಮುಜಾಫರಾಬಾದ್‌ ಪ್ರದೇಶದಲ್ಲಿದ್ದ ಉಗ್ರರ ಭೇಟೆಗೆ 6,300 ಕೋಟಿ ಮೌಲ್ಯದ ವಸ್ತುಗಳನ್ನು ಸಿದ್ಧ ಮಾಡಲಾಗಿತ್ತು. ಇವುಗಳಲ್ಲಿ ಯುದ್ಧ ವಿಮಾನ, ಬಾಂಬ್ ಎಲ್ಲವೂ ಸೇರಿದಂತೆ 3,686 ಕೋಟಿ ಮೌಲ್ಯದ ವಸ್ತುಗಳನ್ನು ಬಳಕೆ ಮಾಡಲಾಗಿದೆ.

ರಡಾರ್ ಹದ್ದಿನ ಕಣ್ಣಿಟ್ಟಿತ್ತು

ರಡಾರ್ ಹದ್ದಿನ ಕಣ್ಣಿಟ್ಟಿತ್ತು

ಭಾರತೀಯ ವಾಯುಪಡೆಯ ಎಡಬ್ಲ್ಯೂಎಸಿಎಸ್ ರಡಾರ್ ಹೊಂದಿರುವ ವಿಮಾನದ ಮೌಲ್ಯ 1,750 ಕೋಟಿ. ಉಗ್ರರ ಬೇಟೆ ಸಂದರ್ಭದಲ್ಲಿ ಪಾಕಿಸ್ತಾನ ಪ್ರತಿದಾಳಿ ನಡೆಸಬಹುದೇ ಎಂದು ಈ ವಿಮಾನವನ್ನು ಕಾವಲಿಗೆ ಇಡಲಾಗಿತ್ತು.

ಕಾರ್ಯಾಚರಣೆಯಲ್ಲಿ ದ್ರೋಣ್ ಬಳಕೆ

ಕಾರ್ಯಾಚರಣೆಯಲ್ಲಿ ದ್ರೋಣ್ ಬಳಕೆ

ವಿಮಾನಗಳಿಗೆ ಇಂಧನ ತುಂಬುವ 22 ಕೋಟಿ ಮೌಲ್ಯದ ಟ್ಯಾಂಕರ್ ಜೆಟ್, 80 ಕೋಟಿ ಮೌಲ್ಯದ ದ್ರೋಣ್ ಕ್ಯಾಮರಾಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯಿತು. 3 ಸುಖೋಯ್ ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು.

ಗ್ವಾಲಿಯರ್‌ನಿಂದ ಹಾರಿದ ವಿಮಾನ

ಗ್ವಾಲಿಯರ್‌ನಿಂದ ಹಾರಿದ ವಿಮಾನ

ಗ್ವಾಲಿಯರ್ ವಿಮಾನ ನಿಲ್ದಾಣದಿಂದ 12 ಐಎಎಫ್ 2000 ವಿಮಾನಗಳು ಕಾರ್ಯಾಚರಣೆಗಾಗಿ ಹಾರಾಟ ಆರಂಭಿಸಿದ್ದವು. 225 ಕೆಜಿ ಜಿಬಿಯು-12 ಬಾಂಬ್ ಹೊಂದಿದ್ದ ವಿಮಾನಗಳು ಉಗ್ರರ ನೆಲೆ ಮೇಲೆ ದಾಳಿ ಮಾಡಿದ್ದವು.

English summary
Indian Air Force used bombs worth approximately Rs 1.7 crore to destroy the Jaish-e-Mohammed terror camp in Pakistan's Balakot area on February 26, 2019 early morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X