India Weather Alert: ಈ ಭಾಗಗಳಲ್ಲಿ ಭಾರೀ ಮಳೆ, ಮುಂದಿನ 5 ದಿನದ ಹವಾಮಾನ ವರದಿ ಹೀಗಿದೆ
IMD Rain Alert: ಮುಂಗಾರು ಮಳೆ ನಾನಾ ಭಾಗಗಳಲ್ಲಿ ತೀವ್ರಗೊಂಡರೆ, ಇನ್ನು ಹಲವೆಡೆ ಮಳೆ ಪ್ರಮಾಣ ತಗ್ಗಿದೆ. ಬದಲಾದ ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಚುರುಕಾಗಿದೆ. ಕರಾವಳಿ ರಾಜ್ಯಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ ಇದೆ. ಮುಂದಿನ ಐದು ದಿನ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ಎಲ್ಲೆಲ್ಲಿ ಎಷ್ಟು ಮಳೆ ಆಗುತ್ತೆ ಎಂಬ ಸಂಪೂರ್ಣ ವರದಿ ಇಲ್ಲಿದೆ.
ಮುಂಗಾರು ಮಳೆಯು ಮುಂದಿನ 2-3 ದಿನಗಳಲ್ಲಿ ಗುಜರಾತ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಭಾಗಗಳಿಂದ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಭಾಗಗಳಿಂದ ಹಿಂತೆಗೆದುಕೊಳ್ಳಲಿದೆ. ಅಂದರೆ. ಈ ಭಾಗಗಳಲ್ಲಿ ಮಳೆ ದುರ್ಬಲವಾಗಲಿದೆ. ಕೆಲವೆಡೆ ಹಗುರ ಮಳೆ ಆಗಬಹುದು. ಉಳಿದಂತೆ ಹೆಚ್ಚಿನ ಬಿಸಿಲು ಕಂಡು ಬರಲಿದೆ.

ಹವಾಮಾನ ವೈಪರೀತ್ಯಗಳ ಪ್ರಭಾವ
ಒಡಿಶಾ ರಾಜ್ಯದ ಉತ್ತರ ಭಾಗದ, ಬಂಗಾಳ ಕೊಲ್ಲಿ ವಾಯುವ್ಯ ಹಾಗೂ ದಕ್ಷಿಣ ಉತ್ತರ ಆಂಧ್ರ ಕರಾವಳಿಯ ಭಾಗದಲ್ಲಿ ವಾಯು ಚಂಡಮಾರುತ ಪ್ರಸರಣ ಉಂಟಾಗಿದೆ. ಇದರ ಪ್ರಭಾವದಿಂದಾಗಿ ಸೆಪ್ಟೆಂಬರ್ 26 ರಂದು ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳಲಿದೆ. ಸೆಪ್ಟೆಂಬರ್ 27ರಂದು ದಕ್ಷಿಣ ಒಡಿಶಾ ಉತ್ತರ ಆಂಧ್ರ ಕರಾವಳಿಯನ್ನು ಈ ವೈಪರೀತ್ಯ ತಲುಪುತ್ತದೆ. ಇದರ ಪ್ರಭಾವದಿಂದ ಈ ಭಾಗಗಳಲ್ಲಿ ರಣ ಮಳೆಯ ಸಂಭವವಿದೆ.
ಹಲವು ರಾಜ್ಯಗಳಿಗೆ ಭಾರೀ ಮಳೆ
ಪೂರ್ವ ಮತ್ತು ಮಧ್ಯ ಭಾರತ ಭಾಗಗಳಾದ ಛತ್ತೀಸ್‌ಗಢ, ಮಧ್ಯಪ್ರದೇಶ, ವಿದರ್ಭ, ಬಿಹಾರ, ಒಡಿಶಾ, ಗಂಗಾ ನದಿ ಪಕ್ಕದ ಪಶ್ಚಿಮ ಬಂಗಾಳ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮಳೆಯ ನಿರೀ ಇದೆ. ಸೆಪ್ಟಂಬರ್ 25ರಂದು ವಿದರ್ಭ ಮತ್ತು ಛತ್ತೀಸ್‌ಗಢ, ಸೆಪ್ಟಂಬರ್ 26 27ರಂದು ಒಡಿಶಾದಲ್ಲಿ ಭಾರೀ ಮಳೆ ಆಗಲಿದೆ.
ಸೆಪ್ಟಂಬರ್ 30ರವರೆಗೆ ಮಹಾರಾಷ್ಟ್ರ, ಕೊಂಕಣ, ಗೋವಾ, ಮರಾಠವಾಡ, ಗುಜರಾತ್ ಪ್ರದೇಶ ಹಾಗೂ ಸೌರಾಷ್ಟ್ರ-ಕಚ್‌ನಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇನ್ನೂ ದೇಶದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮುಂದಿನ ದಿನಗಳಲ್ಲಿ ವಿಪೀತ್ಯ ಮಳೆ ನಿರೀಕ್ಷೆ ಇದೆ. ಕೆಲವು ರಾಜ್ಯಗಳಿಗೆ ಮೂರು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ.
ದಕ್ಷಿಣ ಭಾರತದ ತೆಲಂಗಾಣ, ತಮಿಳುನಾಡು, ಕೇರಳ, ಲಕ್ಷದ್ವೀಪ, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್ 30ರವರೆಗೆ ಧಾರಾಕಾರ ಮಳೆ ಸುರಿಯಲಿದೆ. ಸೆಪ್ಟಂಬರ್ 26 ಮತ್ತು 27ರಂದು ರಾಯಲಸೀಮಾ, ಆಂಧ್ರ ಕರಾವಳಿ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಆಂಧ್ರ ಪ್ರದೇಶ, ಒಡಿಶಾ ಮತ್ತು ಕರ್ನಾಟಕ ಕರಾವಳಿ ಭಾಗಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40-60 ಗಂಟೆವರೆಗೆ ಹೆಚ್ಚಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications