• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ವೇ: ಸ್ವಾತಂತ್ರ್ಯಾನಂತರದ ಭಾರತದ ಅತ್ಯುತ್ತಮ ಪಿಎಂ ಯಾರು: ಮೊದಲೆರಡು ಸ್ಥಾನಕ್ಕೆ ಅಜಗಜಾಂತರ ವ್ಯತ್ಯಾಸ

|
Google Oneindia Kannada News

ಇಂಡಿಯಾ ಟುಡೇ-ಕಾರ್ವಿ ಇನ್ಸೈಟ್ಸ್ ನಡೆಸಿದ ಜಂಟಿ ಸಮೀಕ್ಷೆಯ, ಮೂಡ್ ಆಪ್ ದಿ ನೇಶನ್ ಸರ್ವೇಯ ಭಾಗವಾಗಿ, ಇದುವರೆಗೆ ದೇಶ ಕಂಡ ಅತ್ಯುತ್ತಮ ಪ್ರಧಾನಮಂತ್ರಿ ಯಾರು ಎನ್ನುವ ಪ್ರಶ್ನೆಗೆ ನಿರೀಕ್ಷಿತ ಉತ್ತರವೇ ಬಂದಿದೆ.

ಈ ಸಮೀಕ್ಷೆಯಲ್ಲಿನ ಗಮನಿಸಬೇಕಾದ ಅಂಶವೇನಂದರೆ, ಇದುವರೆಗೆ, ಬೆಸ್ಟ್ ಪಿಎಂ ಯಾರು ಎನ್ನುವ ಪ್ರಶ್ನೆ ಬಂದಾಗ, ಹಾಲೀ ಪ್ರಧಾನಿ ನರೇಂದ್ರ ಮೋದಿ ಮತ್ತು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಡುವೆ ಸ್ಪರ್ಧೆ ಏರ್ಪಡುತ್ತಿತ್ತು.

ಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇಮೂಡ್ ಆಫ್ ದಿ ನೇಶನ್ ಸಮೀಕ್ಷೆ: ಮೋದಿ ಕ್ಯಾಬಿನೆಟಿನ ಜನಪ್ರಿಯ ಸಚಿವರು ಇವರೇ

ಆದರೆ, ಈ ಬಾರಿಯ ಸಮೀಕ್ಷೆಯಲ್ಲಿ ಎನ್ಡಿಎ ಮೈತ್ರಿಕೂಟದ ಇಬ್ಬರ ನಡುವೆ ಪೈಪೋಟಿ ಉಂಟಾಗಿತ್ತು. ಒಂದು, ಎಂದಿನಂತೆ ಮೋದಿ,ಇನ್ನೊಂದು, ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಡುವೆ.

ಮೂಡ್ ಆಫ್ ದಿ ನೇಶನ್: ಕಾಂಗ್ರೆಸ್‌ ಪುನಶ್ಚೇತನಗೊಳಿಸಲು ಇವರೇ ಸೂಕ್ತ!ಮೂಡ್ ಆಫ್ ದಿ ನೇಶನ್: ಕಾಂಗ್ರೆಸ್‌ ಪುನಶ್ಚೇತನಗೊಳಿಸಲು ಇವರೇ ಸೂಕ್ತ!

ಒಟ್ಟು 12,021ರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ದೂರವಾಣಿ ಮೂಲಕ ಪಡೆದು, ದೆಹಲಿ ಮೂಲದ ಸಂಸ್ಥೆ, ಈ ಸಮೀಕ್ಷೆಯನ್ನು ಹೊರಗೆ ತಂದಿದೆ. ಅತ್ಯುತ್ತಮ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆಗೆ, ಸಮೀಕ್ಷೆಯಲ್ಲಿ ಭಾಗವಹಿಸಿದವರು ಯೋಗಿ ಆದಿತ್ಯನಾಥ್ ಗೆ ಮತ್ತೆ ಮೊದಲ ಸ್ಥಾನ ನೀಡಿದ್ದಾರೆ.

ಹತ್ತರಲ್ಲಿ ಏಳು ಬಾರಿ, ಮೋದಿಯೇ ಅತ್ಯುತ್ತಮ ಪ್ರಧಾನಿ

ಹತ್ತರಲ್ಲಿ ಏಳು ಬಾರಿ, ಮೋದಿಯೇ ಅತ್ಯುತ್ತಮ ಪ್ರಧಾನಿ

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ, ನಡೆಸಲಾಗಿರುವ ಸಮೀಕ್ಷೆಯ ಪ್ರಕಾರ, ಹತ್ತರಲ್ಲಿ ಏಳು ಬಾರಿ, ಮೋದಿಯೇ ಅತ್ಯುತ್ತಮ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿ ಜುಲೈ'2020ರ ಅವಧಿಯಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರವೂ ಮೋದಿಯೇ ಬೆಸ್ಟ್. ಆದರೆ, ಮೊದಲೆರಡು ಸ್ಥಾನಕ್ಕಿರುವ ಅಂತರ, ಅಜಗಜಾಂತರ.

19 ರಾಜ್ಯದ, 97 ಲೋಕಸಭಾ ಕ್ಷೇತ್ರದ 194 ಅಸೆಂಬ್ಲಿ ವ್ಯಾಪ್ತಿ

19 ರಾಜ್ಯದ, 97 ಲೋಕಸಭಾ ಕ್ಷೇತ್ರದ 194 ಅಸೆಂಬ್ಲಿ ವ್ಯಾಪ್ತಿ

ಜುಲೈ ಹದಿನೈದರಿಂದ, ಜುಲೈ 27ರ ಅವಧಿಯಲ್ಲಿ 19 ರಾಜ್ಯದ, 97 ಲೋಕಸಭಾ ಕ್ಷೇತ್ರದ 194 ಅಸೆಂಬ್ಲಿ ವ್ಯಾಪ್ತಿಯ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ. ಇವುಗಳಲ್ಲಿ, ದೆಹಲಿ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಹರ್ಯಾಣ, ಉತ್ತರ ಪ್ರದೇಶ, ಕರ್ನಾಟಕ, ಕೇರಳ ರಾಜ್ಯವೂ ಸೇರಿದೆ.

ನಂತರದ ಸ್ಥಾನ ವಾಜಪೇಯಿಯವರಿಗೆ ಶೇ. 14

ನಂತರದ ಸ್ಥಾನ ವಾಜಪೇಯಿಯವರಿಗೆ ಶೇ. 14

ಜುಲೈನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಬೆಸ್ಟ್ ಪ್ರಧಾನಿ ಮೋದಿಯೆಂದು ಶೇ. 44, ನಂತರದ ಸ್ಥಾನ ವಾಜಪೇಯಿಯವರಿಗೆ ಶೇ. 14. ಹಾಗಾಗಿ, ಸಮೀಕ್ಷೆಯಲ್ಲಿ ಭಾಗವಹಿಸಿದವರು, ಮೋದಿ ನಂತರ, ಇಂದಿರಾ ಅಥವಾ ರಾಜೀವ್ ಗಾಂಧಿಯ ಹೆಸರು/ಸೇವೆಯನ್ನು ಸ್ಮರಿಸಿಕೊಳ್ಳಬಹುದು ಎನ್ನುವುದು ಸುಳ್ಳಾಗಿದೆ.

ಮನಮೋಹನ್ ಸಿಂಗ್ - ತಲಾ ಶೇ. 7

ಮನಮೋಹನ್ ಸಿಂಗ್ - ತಲಾ ಶೇ. 7

ಮೋದಿ, ವಾಜಪೇಯಿ ನಂತರದ ಸ್ಥಾನ ಇಂದಿರಾ ಗಾಂಧಿಗೆ, ಸಮೀಕ್ಷೆಯ ಪ್ರಕಾರ ಲಭಿಸಿದೆ. ಇಂದಿರಾ ಗಾಂಧಿ - ಶೇ. 12, ಜವಾಹರ್ ಲಾಲ್ ನೆಹರೂ ಮತ್ತು ಮನಮೋಹನ್ ಸಿಂಗ್ - ತಲಾ ಶೇ. 7, ರಾಜೀವ್ ಗಾಂಧಿ ಶೇ. 5, ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಶೇ.3ರಷ್ಟು ಸಮೀಕ್ಷೆಯಲ್ಲಿ ಭಾಗವಹಿಸಿದವರು ಉತ್ತಮ ಪ್ರಧಾನಿ ಎಂದಿದ್ದಾರೆ.

English summary
India Today Mood Of The Nation Poll: Who Is The Best Prime Minister Of India Since Independence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X