• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಟಲಿ, ಜಪಾನ್‌, ಇರಾನ್‌ನಿಂದ ಬರುವವರಿಗೆ ಭಾರತ ವೀಸಾ ಕೊಡಲ್ಲ

|

ನವದೆಹಲಿ, ಮಾರ್ಚ್ 3: ಇಟಲಿ, ಇರಾನ್, ಜಪಾನ್, ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಬರುವವರಿಗೆ ವೀಸಾ ಸ್ಥಗಿತಗೊಳಿಸಿದೆ.

ಭಾರತದಲ್ಲಿ ಕೊರೊನಾ ವೈರಸ್ 6 ಪ್ರಕರಣಗಳು ದೃಢಪಟ್ಟಿರುವ ಕಾರಣ, ಈಗಾಗಲೇ ಕೊರೊನಾವಿರುವ ದೇಶದಿಂದ ಯಾರೂ ದೇಶಕ್ಕೆ ಬರಬೇಡಿ ಎಂದು ಖಡಾಖಂಡಿತವಾಗಿ ಹೇಳಿದೆ. ಮಾರ್ಚ್ ಮೂರರಂದು ವೀಸಾವನ್ನು ಕ್ಯಾನ್ಸಲ್ ಮಾಡಿದೆ.

ಯಾರಾದರೂ ಭಾರತಕ್ಕೆ ಬರಬೇಕಿದ್ದರೆ, ಭಾರತದ ರಾಯಭಾರ ಕಚೇರಿಗೆ ತೆರಳಿ ಹೊಸ ವೀಸಾವನ್ನು ಪಡೆಯಬೇಕಿದೆ. ಅದಕ್ಕೆ ಸೂಕ್ತ ಕಾರಣವನ್ನೂ ನೀಡಬೇಕಿದೆ.ಚೀನಾದಲ್ಲಿ ಕೊರೊನಾ ರೋಗಕ್ಕೆ 3 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಕೊರೊನಾದಿಂದ (covid19) ಮೃತಪಟ್ಟವರ ಸಂಖ್ಯೆ 3000 ಗಡಿ ದಾಟಿದೆ. ಕೊರಾನಾ ದೆಸೆಯಿಂದ ಚೀನಾದ ಫಾರ್ಮಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಈ ನಡುವೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಪರೀಕ್ಷೆ ನಡೆಸಿ, ಸೋಂಕು ದೃಢಪಡಿಸುವ ಅವಧಿ ಹೆಚ್ಚಾಗುತ್ತಿದೆ.

ಕೊರೊನಾ ಸೋಂಕಿತ ಟೆಕ್ಕಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಪ್ರಯಾಣಿಸಿದ್ದ

ಈ ಸಮಸ್ಯೆಗೆ ಆಲಿಬಾಬಾ ಪರಿಹಾರ ಕಂಡುಕೊಂಡಿದೆ. ಕೃತಿಕ ಬುದ್ಧಿಮತ್ತೆ(AI) ಉಪಯೋಗಿಸಿ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದೆಯೇ? ಇಲ್ಲವೇ? ಎಂಬುದನ್ನು ಶೇ 96% ನಿಖರವಾಗಿ ತಿಳಿಸಬಹುದಾದ ವಿಧಾನವೊಂದನ್ನು ಕಂಡು ಹಿಡಿದಿದೆ.

English summary
Union Health Ministry on Tuesday issued a travel advisory suspending all regular visas/e-visas granted on or before March 3 to nationals of Italy, Iran, South Korea, Japan who have not yet entered India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X