ಕಾಶ್ಮೀರ ಸಭೆಗೆ ಚೀನಾ ಚಕ್ಕರ್: ನೋ ಟೆನ್ಷನ್.. ಕೂಲ್ ಕೂಲ್!
ನವದೆಹಲಿ: ಭಾರತದ ಕಿರೀಟ ಕಾಶ್ಮೀರದಲ್ಲಿ ನಡೆಯುತ್ತಿರುವ ಜಿ20 ಸಭೆಗೆ ಚೀನಾ ಚಕ್ಕರ್ ಹಾಕಿದೆ. ಜಗತ್ತಿನ ಪ್ರತಿಯೊಂದು ದೇಶವೂ ಚೀನಾದ ಈ ನಿರ್ಧಾರವನ್ನು ಗಮನಿಸುತ್ತಿವೆ. ಆದರೆ ಭಾರತ ಮಾತ್ರ ಚೀನಾದ ನಡೆ ಬಗ್ಗೆ ಸೂಕ್ತವಾಗಿ ಪ್ರತಿಕ್ರಿಯೆ ನೀಡಿದೆ. ಇದರಿಂದ ಚೀನಾಗೆ ಮಾತ್ರವಲ್ಲ, ಪಾಕಿಸ್ತಾನಕ್ಕೂ ಖಡಕ್ ಉತ್ತರವೇ ರವಾನೆಯಾಗಿದೆ. ಭಾರತದ ಖಡಕ್ ರಿಯಾಕ್ಷನ್ ಬಗ್ಗೆ ಇಲ್ಲಿದೆ ವರದಿ.
ಕಾಶ್ಮೀರ ಭಾರತದ ಮುಕುಟ, ಭಾರತಕ್ಕೆ ಕಾಶ್ಮೀರವೇ ಕಿರೀಟ. ಆದರೆ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಮತ್ತು ಚೀನಾ ಕಿರಿಕಿರಿ ಕಿರಿಕ್ ಮಾಡೋದು ಮಾತ್ರ ನಿಲ್ಲುತ್ತಿಲ್ಲ. ಅರ್ಧ ಶತಮಾನದಿಂದ ಇದೇ ರೀತಿ ಸಮಸ್ಯೆಯನ್ನು ಭಾರತ ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಆಧುನಿಕ ಜಗತ್ತಿನಲ್ಲಿ ಭಾರತಕ್ಕೆ ಇಂತಹ ನಡೆ ಯಾವುದೇ ಸಮಸ್ಯೆ ಮಾಡುವುದಿಲ್ಲ. ಪಾಕಿಸ್ತಾನದ ಕುತಂತ್ರ ವರ್ಕೌಟ್ ಆಗಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು, G20 ಸಭೆಗೆ ಚೀನಾ ಚಕ್ಕರ್ ಹಾಕಿದ್ದಕ್ಕೆ ಪಕ್ಕಾ ಮೆಸೇಜ್ ರವಾನಿಸಲಾಗಿದೆ.

ಭಾರತದ ರಿಯಾಕ್ಷನ್ ಹೇಗಿತ್ತು?
ಶ್ರೀನಗರದ G20 ಸಭೆಯಲ್ಲಿ ಚೀನಾ ಭಾಗವಹಿಸದೇ ಇರುವುದು ನಮಗೆ ಯಾವುದೇ ವ್ಯತ್ಯಾಸ ಉಂಟುಮಾಡಿಲ್ಲ. ಈ ನಡೆಯಿಂದ ಚೀನಾಗೆ ನಷ್ಟವಾಗಿದೆಯೇ ಹೊರತು, ಭಾರತಕ್ಕೆ ಅಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಅಲ್ಲದೇ ಯುರೋಪ್‌ನ ಕೆಲ ದೇಶಗಳಂತೆ ಸಣ್ಣ ಹಾಗೂ ಏಕರೂಪದ ದೇಶ ನಮ್ಮದಲ್ಲ. ಭಾರತ ವೈವಿಧ್ಯಮಯ ದೇಶವೆಂದು ಉತ್ತರ ನೀಡಲಾಗಿದೆ. ಈ ಮೂಲಕ ಕಾಶ್ಮೀರ ಎಂದೆಂದಿಗೂ ಭಾರತದ ಸ್ವತ್ತು ಎಂದು ಕೇಂದ್ರ ಸರ್ಕಾರ ಜಗತ್ತಿಗೇ ತಿಳಿಸಿದೆ.
ನೋ ಟೆನ್ಷನ್.. ಕೂಲ್..!
ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದ ಚೀನಾ, ಸೌದಿ, ಟರ್ಕಿ ಎಸ್ಕೇಪ್ ಆಗಿವೆ. ಕಾಶ್ಮೀರದಲ್ಲಿ ಈ ಸಭೆ ನಡೆಯುತ್ತಿರುವ ಕಾರಣ ನಾನು ಬರಲ್ಲ ಅಂತಾ ಚೀನಾ ಹೇಳಿದ್ದರೆ, ಟರ್ಕಿ ಪರೋಕ್ಷವಾಗಿ ಇದೇ ಮಾತನ್ನ ತಿಳಿಸಿದೆ. ಸೌದಿ ಅರೇಬಿಯಾ ಯಾವ ರಿಯಾಕ್ಷನ್ ನೀಡದೆ ಚಕ್ಕರ್ ಹಾಕಿದೆ. ಪಾಕ್ ನಾಯಕರ ಮನ ಒಲಿಸಲು ಈ ರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಆದರೆ ಭಾರತಕ್ಕೆ ಇದರಿಂದ ನಷ್ಟವಿಲ್ಲ ಎಂಬ ಸಂದೇಶ ಕೇಂದ್ರ ಸರ್ಕಾರದಿಂದ ಸಿಕ್ಕಿದೆ.

ಕಣಿವೆ ರಾಜ್ಯ ಎಂದಿಗೂ ನಮ್ಮದು!
ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ 2019ರಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತು. ಆ ಬಳಿಕ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮ ಇದು. ಚೀನಾ, ಸೌದಿ ಅರೇಬಿಯಾ & ಟರ್ಕಿ ಹೊರತುಪಡಿಸಿ ಪಾಕಿಸ್ತಾನ & ಚೀನಾ ವಿರೋಧದ ನಡುವೆಯೂ ಜಿ20ಗೆ ಒಕ್ಕೂಟದ ಬಹುತೇಕ ಎಲ್ಲಾ ದೇಶಗಳು ಸಭೆಗೆ ಹಾಜರಾಗಿವೆ. ಈ ಮೂಲಕ ಪಾಕ್ ಎಷ್ಟೇ ಪ್ರಯತ್ನಿಸಿದ್ರೂ ಭಾರತದ ಶಕ್ತಿಯನ್ನ ಜಾಗತಿಕ ಮಟ್ಟದಲ್ಲಿ ಕುಗ್ಗಿಸಲು ಆಗಿಲ್ಲ.
G20 ಸದಸ್ಯ ರಾಷ್ಟ್ರಗಳು ಯಾರು?
ಜಗತ್ತಿನ ಅತ್ಯಂತ ಶಕ್ತಿಶಾಲಿ ಒಕ್ಕೂಟಗಳ ಪೈಕಿ ಜಿ20 ಗುಂಪು ಕೂಡ ಒಂದು. ಭಾರತ ಸೇರಿದಂತೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೊನೇಷ್ಯಾ, ಇಟಲಿ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಇಂಗ್ಲೆಂಡ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಜಿ20 ಭಾಗವಾಗಿವೆ. ಈ ಪೈಕಿ ಸೌದಿ ಅರೇಬಿಯಾ, ಚೀನಾ, ಟರ್ಕಿ ಕಾಶ್ಮೀರದ ಜಿ20 ಸಭೆಗೆ ಚಕ್ಕರ್ ಹಾಕಿದ್ದಾರೆ.
ಅರುಣಾಚಲ ಸಭೆಗೂ ಚೀನಾ ಬಂದಿರಲಿಲ್ಲ
ಈ ಹಿಂದೆ ಅರುಣಾಚಲ ಸಭೆಯಿಂದ ದೂರವಾಗಿದ್ದ ಚೀನಾ, 22ರಿಂದ 25ರ ವರೆಗೆ ನಡೆಯಲಿರುವ ಜಿ20 ಪ್ರವಾಸಿ ಕಾರ್ಯಕಾರಿ ಗುಂಪಿನ ಸಭೆಯಿಂದಲೂ ದೂರ ಉಳಿಯಲು ನಿರ್ಧರಿಸಿದೆ. ಈ ಸಭೆ ಕಾಶ್ಮೀರದಲ್ಲಿ ನಡೆಯುತ್ತಿರುವ ಕಾರಣ ಪಾಕಿಸ್ತಾನದ ಜೊತೆಗಿನ ಸಂಬಂಧ ಹಾಳಾಗಬಾರದು ಅಂತಾ ಚೀನಾ ಇಂತಹ ನಿರ್ಧಾರ ಕೈಂಡಿದೆ ಎನ್ನುವ ಮಾತು ಕೇಳಿಬಂದಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಯಿಂದಲೂ ಚೀನಾ ಹಿಂದೆ ಸರಿದಿತ್ತು. ಈಗ ನೋಡಿದರೆ ಚೀನಾ, ಸೌದಿ ಅರೇಬಿಯಾ ಮತ್ತು ಟರ್ಕಿ ಎಸ್ಕೇಪ್ ಆಗಿವೆ.












Click it and Unblock the Notifications