ವಾಘಾ ಗಡಿಯಲ್ಲಿ ಹಾರಿತು ಭಾರತದ ಬೃಹತ್ ತ್ರಿವರ್ಣ ಧ್ವಜ
ಚಂಡೀಗಢ, ಮಾರ್ಚ್. 06 : ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ(ಪಂಜಾಬ್) ಗಡಿಯಲ್ಲಿ ಬೃಹತ್ ತ್ರಿವರ್ಣ ಧ್ವಜ ಅನಾವರಣಗೊಳಿಸಲಾಗಿದೆ.
ಬಿಜೆಪಿ ಮುಖ್ಯಸ್ಥ ಅನಿಲ್ ಜೋಷಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೇರವೇರಿಸಲಾಯಿತು. ತ್ರಿವರ್ಣ ಧ್ವಜದ ಹಾರಾಟ ಪಾಕಿಸ್ತಾನದ ಲಹೋರ್ ವರೆಗೂ ಕಾಣಿಸಲಿದೆ ಎಂಬುದು ವಿಶೇಷ.
ಈ ಯೋಜನೆಗೆ ಪಂಜಾಬ್ ಸರ್ಕಾರ 3.50 ಕೋಟಿ ರು ವೆಚ್ಚ ಮಾಡಿದ್ದು, ಅದರಲ್ಲಿ 1.75 ಕೋಟಿ ಕೇವಲ ಉಕ್ಕಿನ ಧ್ವಜಸ್ತಂಭಕ್ಕೆ ವೆಚ್ಚ ಮಾಡಲಾಗಿದೆ.

ಧ್ವಜಸ್ತಂಭ ಭೂಮಿಯಿಂದ 365 ಅಡಿ ಎತ್ತರವಿದ್ದು, 55 ಟನ್ ತೂಕ ಹೊಂದಿದೆ. ತ್ರಿವರ್ಣ ಧ್ವಜ 110 ಅಡಿ ಉದ್ದ ಮತ್ತು 80 ಅಡಿ ಅಗಲ ಹೊಂದಿದೆ.
ಪ್ರಸ್ತುತ ಅನಾವರಣಗೊಂಡಿರುವ ತ್ರಿವರ್ಣಧ್ವಜಕ್ಕೂ ಮುನ್ನ ಜಾರ್ಖಂಡ್ ನ ರಾಂಚಿಯಲ್ಲಿರುವ 300 ಅಡಿ ಎತ್ತರದ ತ್ರಿವರ್ಣ ಧ್ವಜ ಇದುವರೆಗಿನ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿತ್ತು.
ಇದೀಗ ಅಟ್ಟಾರಿ ಗಡಿಯಲ್ಲಿ ನಿರ್ಮಿಸಿರುವ ತ್ರಿವರ್ಣ ಧ್ವಜ ದೇಶದ ಅತ್ಯಂತ ದೊಡ್ಡ ಧ್ವಜ ಎಂಬ ಖ್ಯಾತಿ ಗಳಿಸಿತು.












Click it and Unblock the Notifications