Get Updates
Get notified of breaking news, exclusive insights, and must-see stories!

ಭಾರತದ ಡೆಪ್ಯೂಟಿ ಹೈ ಕಮಿಷನರ್ ರಿಂದ ಕುಲಭೂಷಣ್ ಜಾಧವ್ ಭೇಟಿ

ನವದೆಹಲಿ, ಸೆಪ್ಟೆಂಬರ್ 2: ಗೂಢಚರ್ಯೆ ಹಾಗೂ ಭಯೋತ್ಪಾದನೆಯ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿ ಆಗಿರುವ ಭಾರತದ ನೌಕಾ ಸೇನೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ನನ್ನು ಮೊದಲ ಬಾರಿಗೆ ಭಾರತದ ಅಧಿಕಾರಿಯೊಬ್ಬರು ಸೋಮವಾರ ಭೇಟಿ ಆದರು.

ಕುಲಭೂಷಣ್ ಜಾಧವ್ ಮರಣದಂಡನೆ ಶಿಕ್ಷೆ ಪುನರ್ ಪರಿಶೀಲನೆ ಹಾಗೂ ಭಾರತದಿಂದ ದೂತಾವಾಸ ಸಂಪರ್ಕಕ್ಕೆ ಅವಕಾಶ ನೀಡಬೇಕು ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಿಂದ ಸೂಚನೆ ಬಂದ ವಾರಗಳ ಬಳಿಕ ಪಾಕ್ ಈ ಕ್ರಮ ಕೈಗೊಂಡಿದೆ. ಭಾರತದ ಡೆಪ್ಯೂಟಿ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರು ಜಾಧವ್ ನನ್ನು ಭೇಟಿ ಆಗಿದ್ದಾರೆ.

Indias Deputy High Commissioner Meets Kulbhushan Jadhav In Pakistan

ಅಂತರರಾಷ್ಟ್ರೀಯ ನ್ಯಾಯಾಲಯದ ಆದೇಶದ ಪ್ರಕಾರ ಸರಿಯಾದ ವಾತಾವರಣದಲ್ಲಿ ಕುಲಭೂಷಣ್ ಜಾಧವ್ ಭೇಟಿಗೆ ಪಾಕಿಸ್ತಾನ ಅವಕಾಶ ಮಾಡಿಕೊಡುತ್ತದೆ ಎಂಬ ಭರವಸೆ ಇದೆ ಎಂದು ಭಾರತದ ಸರಕಾರಿ ಮೂಲಗಳು ತಿಳಿಸಿವೆ. ಅಹ್ಲುವಾಲಿಯಾ ಮೊದಲಿಗೆ ಪಾಕ್ ವಿದೇಶಾಂಗ ವಕ್ತಾರ ಡಾ. ಮೊಹ್ಮದ್ ಫೈಸಲ್ ರನ್ನು ಭೇಟಿ ಆಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+