ಚೀನಾಕ್ಕೆ ಸಡ್ಡು ಹೊಡೆಯಲು ಭಾರತ- ಯುಎಸ್- ಜಪಾನ್ ಸಮರಾಭ್ಯಾಸ ಚುರುಕು

ಮಲಬಾರ್ ನಲ್ಲಿ ಜಂಟಿ ಸಮರಾಭ್ಯಾಸ ಮತ್ತಷ್ಟು ಚುರುಕು. ಭಾರತ-ಅಮೆರಿಕ-ಜಪಾನ್ ದೇಶಗಳ ನೌಕಾಪಡೆಗಳ ಜಂಟಿ ಸಮರಾಭ್ಯಾಸ. ಚೀನಾಕ್ಕೆ ಸೇನಾ ಬಲ ತೋರ್ಪಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದಿಂದ ಈ ನಿರ್ಧಾರ.

ನವದೆಹಲಿ, ಜುಲೈ 5: ಗಡಿಯಲ್ಲಿ ಕ್ಯಾತೆ ತೆಗೆಯುತ್ತಾ, ಭಾರತೀಯ ಸೇನೆ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಚೀನಾ ದೇಶಕ್ಕೆ ತನ್ನಲ್ಲಿರುವ ತಾಕತ್ತು ತೋರಿಸಲು ಭಾರತ ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ, ಕೆಲ ದಿನಗಳಿಂದ ಕೇರಳದ ಕರಾವಳಿ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕೇರಳದ ಮಲಬಾರ್ ನಲ್ಲಿ ನಡೆಯುತ್ತಿದ್ದ ಭಾರತ-ಅಮೆರಿಕ- ಜಪಾನ್ ದೇಶಗಳ ನೌಕಾಪಡೆಗಳ ಜಂಟಿ ಸಮರಾಭ್ಯಾಸವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

India rises Malabar Navy exercise to tackle china problem

ಶೀಘ್ರವೇ ಈ ಸಮರಾಭ್ಯಾಸವನ್ನು ಬಂಗಾಳ ಕೊಲ್ಲೆಯಲ್ಲಿಯೂ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ, ಭಾರತವು ತನ್ನ ಮಿತ್ರ ದೇಶಗಳೊಂದಿಗೆ ಒಗ್ಗೂಡಿಸಲ್ಪಟ್ಟಿರುವ ತನ್ನ ಸೇನಾ ತಾಕತ್ತನ್ನು ಚೀನಾಕ್ಕೆ ಮನದಟ್ಟು ಮಾಡಲು ಯತ್ನಿಸಿದೆ.

ಸಿಕ್ಕಿಂಗೆ ಹೊಂದಿಕೊಂಡಂತಿರುವ ವಿವಾದಿತ ಪ್ರದೇಶವಾದ ಡೊಕ್ಲಾಮ್ ನಲ್ಲಿ ಚೀನಾವು ತನ್ನ ಸೈನಿಕರನ್ನು ಹೆಚ್ಚುವರಿಯಾಗಿ ಜಮಾವಣೆ ಮಾಡಿದ ನಂತರ ಭಾರತವೂ ಅದೇ ಕ್ರಮವನ್ನು ಅನುಸರಿಸಿತ್ತು. ಇದು ಉಭಯ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡವನ್ನು ಸೃಷ್ಟಿಸಿದೆ.

ಅದರ ಬೆನ್ನಲ್ಲೇ, ಮಂಗಳವಾರ ಚೀನಾದ ಜಲಾಂತರ್ಗಾಮಿಗಳು (ಸಬ್ ಮರಿನ್ ಗಳು), , ದಕ್ಷಿಣ ಚೀನಾ ಸಮುದ್ರದಿಂದ ಹೊರಟು ಭಾರತೀಯ ಸಾಗರ ವಲಯ (ಐಒಆರ್) ಪ್ರವೇಶಿಸಿವೆ. ಇದರ ಗಾಂಭೀರ್ಯತೆಯನ್ನು ಅರಿತ ಭಾರತ, ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿಯಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಜಂಟಿ ಸಮರಾಭ್ಯಾಸವನ್ನು ಇನ್ನಷ್ಟು ತೀವ್ರಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+