24 ಗಂಟೆಯಲ್ಲಿ 22,752 ಕೊರೊನಾ ಕೇಸ್, 482 ಜನರು ಸಾವು

ದೆಹಲಿ, ಜುಲೈ 8: ದೇಶದಲ್ಲಿ ಒಂದೇ ದಿನ 22,752 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,42,417 ಲಕ್ಷಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ 22,752 ಮಂದಿಗೆ ಸೋಂಕು ತಗುಲಿದ್ದು, 486 ಜನರು ಸೋಂಕಿನಿಂದ ಪ್ರಾಣಬಿಟ್ಟಿದ್ದಾರೆ. ಈವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 20,642ಕ್ಕೆ ಜಿಗಿದಿದೆ.

ಇಂದಿನ ವರದಿ ಬಳಿಕ ದೇಶದಲ್ಲಿ 2,64,944 ಕೊರೊನಾ ವೈರಸ್ ಪ್ರಕರಣಗಳು ಸಕ್ರಿಯವಾಗಿದೆ. 4,56,831 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ 24 ಗಂಟೆಯಲ್ಲಿ ದಾಖಲಾದ ಕೇಸ್‌ಗಳ ಪೈಕಿ ರಾಜ್ಯವಾರು ಅಂಕಿ ಅಂಶ ಗಮನಿಸಿದರೆ, ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಸಂಜೆಯವರೆಗೂ ಮಹಾರಾಷ್ಟ್ರದಲ್ಲಿ 5134 ಜನರಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ 3616 ಕೇಸ್, ದೆಹಲಿಯಲ್ಲಿ 2008 ಸೋಂಕು, ಕರ್ನಾಟಕದಲ್ಲಿ 1498 ಕೇಸ್, ತೆಲಂಗಾಣದಲ್ಲಿ 1879 ಸೋಂಕು ದೃಢವಾಗಿದೆ.

India Reports 22,752 New Covid19 Cases Today

ಇನ್ನು ಜಗತ್ತಿನಲ್ಲಿ ಹೊಸ ಕೇಸ್‌ಗಳನ್ನು ಗಮನಿಸಿದರೆ ಭಾರತಕ್ಕೂ ಇಂದು ಸಹ ಮೂರನೇ ಸ್ಥಾನ. ಅಮೆರಿಕದಲ್ಲಿ ಹೊಸದಾಗಿ 55,442 ಕೇಸ್ ದಾಖಲಾಗಿದೆ. ಬ್ರೆಜಿಲ್‌ನಲ್ಲಿ 48,584 ಕೇಸ್ ವರದಿಯಾಗಿದೆ. ಭಾರತದಲ್ಲಿ 22,752 ಪ್ರಕರಣ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+