Indian Post: ರಿಜಿಸ್ಟರ್ ಪೋಸ್ಟ್ ಸೇವೆಗೆ ಗುಡ್‌ಬೈ...ಅಂಚೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ:
Indian Post Service: ಭಾರತೀಯ ಅಂಚೆ ಇಲಾಖೆಯಲ್ಲಿ ಅನೇಕ ಸೇವೆಗಳು ಲಭ್ಯವಾಗುತ್ತಿವೆ. ಇಲ್ಲಿನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಂಚೆ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಯಾಚರಣೆ ಸುಗಮಗೊಳಿಸಿ, ವಿತರಣಾ ಸಮಯವನ್ನು ವೇಗಗೊಳಿಸುವ ಗುರಿಯೊಂದಿಗೆ ನೋಂದಾಯಿತ ಅಂಚೆ (Registered Post) ಮತ್ತು ಸ್ಪೀಡ್ ಪೋಸ್ಟ್ (Speed Post) ಸೇವೆಗಳ ಸಂಸ್ಕರಣಾ ವ್ಯವಸ್ಥೆಯನ್ನು ಏಕೀಕರಿಸಿದೆ. ಅಂದರೆ ಮರ್ಜ್ ಮಾಡಿದ್ದು, ಮುಂದಿನ ತಿಂಗಳಿನಿಂದ ರಿಜಿಸ್ಟರ್ ಪೋಸ್ಟ್ ಸೇವೆ ಕೊನೆಯಾಗಲಿದೆ.
ಈ ಹೊಸ ವ್ಯವಸ್ಥೆಯು ಸೇವೆಯಲ್ಲಿನ ದಕ್ಷತೆಯನ್ನು ಹೆಚ್ಚಿಸಿ, ಸಾರಿಗೆ ವಿಳಂಬವನ್ನು ಕಡಿಮೆ ಮಾಡುತ್ತದೆ. ನೋಂದಾಯಿತ ಅಂಚೆಯು ನಿರ್ದಿಷ್ಟ ವಿಳಾಸದಾರರಿಗೆ ಮಾತ್ರ ತಲುಪಿಸುವ ಸುರಕ್ಷತೆ, ಭರವಸೆ ನೀಡುತ್ತದೆ. ಇನ್ನೂ ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ವಿಳಾಸದಲ್ಲಿ ತ್ವರಿತವಾಗಿ ತಲುಪುವಂತಹ ಸೌಲಭ್ಯವನ್ನು ಬಲಪಡಿಸಲಾಗಿದೆ.

ನೋಂದಾಯಿತ ಅಂಚೆಯ ಬೆಲೆ ಪ್ರತಿ ಹೆಚ್ಚುವರಿ 20 ಗ್ರಾಂಗೆ 25.96 ರೂ. ಜೊತೆಗೆ 5 ರೂ.ಗಳಾಗಿತ್ತು. ಆದರೆ ಸ್ಪೀಡ್ ಪೋಸ್ಟ್ 50 ಗ್ರಾಂ ವರೆಗಿನ ಪಾರ್ಸೆಲ್‌ಗಳಿಗೆ 41 ರೂ.ಗಳಿಂದ ಆರಂಭವಾಗುತ್ತದೆ. ಇದು 20-25 ಪ್ರತಿಶತ ಹೆಚ್ಚು ದುಬಾರಿಯಾಗಿದೆ. ಹೆಚ್ಚಿನ ವೆಚ್ಚವು ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕೈಗೆಟುಕುವ ಅಂಚೆ ಸೇವೆಗಳನ್ನು ಅವಲಂಬಿಸಿದೆ. ಹೀಗಾಗಿ ರಿಜಿಸ್ಟರ್ ಪೋಸ್ಟ್ ಸೇವೆನಯನ್ನು ಏಕೀಕೃತಗೊಳಿಸಲಾಗುತ್ತಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
ಸ್ಪೀಡ್ ಪೋಸ್ಟ್ ಸೇವೆನಯನ್ನು ನೀವು ಪ್ರತಿಯೊಂದು ಹಂತದಲ್ಲಿ ಟ್ರ್ಯಾಕಿಂಗ್ ಮಾಡಲು ಅವಕಾವಿದೆ. ನೋಂದಾಯಿತ ಪೋಸ್ಟ್ ವಿಳಾಸದಾರ-ನಿರ್ದಿಷ್ಟವಾಗಿರುತ್ತದೆ. ಆದರೆ ಈ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ವಿಳಾಸದಲ್ಲಿ ನಿರ್ಧಿಷ್ಟ ವ್ಯಕ್ತಿಗೆ ಸೇವೆ/ವಸ್ತು ತಲುಪಿಸಲಾಗುತ್ತದೆ. OTP ಆಧಾರಿತ ಸುರಕ್ಷಿತ ಸೇವೆಯನ್ನು ಸಹ ನೀಡಲಾಗುತ್ತಿದೆ.
ಏನೆಲ್ಲ ಅಪ್ಡೇಟ್ಸ್ ಆಗಿದೆ? ಗ್ರಾಹಕರಿಗೆ ಸಿಗುವ ಪ್ರಯೋಜನಗಳು
ಈ ಮಹತ್ವದ ಬದಲಾವಣೆಯಿಂದ ಗ್ರಾಹಕರು ಇನ್ನೊಂದು ತಿಂಗಳಲ್ಲಿ ಏಕೀಕೃತ ಸೇವೆಯ ಪ್ರಯೋಜನಗಳನ್ನು ಪಡೆಯಬಹುದು. 'ನೋಂದಣಿಯೊಂದಿಗೆ ಸ್ಪೀಡ್ ಪೋಸ್ಟ್' ಎಂದು ಬುಕ್ ಮಾಡಿದಾಗ, ಪತ್ರ ಅಥವಾ ಪಾರ್ಸೆಲ್ ನಿರ್ದಿಷ್ಟ ವ್ಯಕ್ತಿಗೆ ಮಾತ್ರ ತಲುಪುತ್ತದೆ. ಇದರೊಂದಿಗೆ, ಎಂಡ್-ಟು-ಎಂಡ್ ಆನ್‌ಲೈನ್ ಟ್ರ್ಯಾಕಿಂಗ್, OTP ಆಧಾರಿತ ಸುರಕ್ಷಿತ ವಿತರಣೆ, ಕ್ಯಾಶ್ ಆನ್ ಡೆಲಿವರಿ (COD) ಮತ್ತು ಕಾರ್ಪೋರೇಟ್ ಗ್ರಾಹಕರು ವಿಶೇಷ ರಿಯಾಯಿತಿಗಳಂತಹ ಸ್ಪೀಡ್ ಪೋಸ್ಟ್‌ನ ಎಲ್ಲಾ ಪ್ರೀಮಿಯಂ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಬುಧವಾರ ಭಾರತೀಯ ಅಂಚೆ ಇಲಾಖೆ ಮಾಹಿತಿ ನೀಡಿದೆ.
ಅಂಚೆ ಇಲಾಖೆ ವ್ಯಾಪ್ತಿಯಲ್ಲಿ ಅಕೌಂಟ್ ತೆರೆಯುವವರು, ಇಲ್ಲಿನ ಎಲ್ಲ ತರಹದ ಸೇವೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರು, ನೌಕರರು, ಯುವಕರು, ಹಿರಿಯ ನಾಗರಿಕರು ಹೀಗೆ ಎಲ್ಲ ವಯೋಮಾನದ ಗ್ರಾಹಕರು ಅಂಚೆ ಇಲಾಖೆ ಸೇವೆ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಸಹ ಹಲವು ಯೋಜನೆಗಳನ್ನು ಅಂಚೆ ಇಲಾಖೆಯಡಿ ಜಾರಿಗೆ ತಂದಿದೆ. ಸದ್ಯ ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ಅಂಚೆ ಸೇವೆಗಳನ್ನು ಆಧುನೀಕರಿಸುವ ಉದ್ದೇಶದ ಭಾಗವಾಗಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡು ಸುಧಾರಣೆ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications