ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ
Recommended Video

ಬೆಂಗಳೂರು, ಆಗಸ್ಟ್ 06: ಗ್ರಾಮೀಣ ಭಾಗದ ಅಂಚೆ ಕಚೇರಿಗಳನ್ನು ಪುಟ್ಟ ಬ್ಯಾಂಕ್ ಗಳಾಗಿ ಪರಿವರ್ತಿಸುವ ಡಿಜಿಟಲ್ ಇಂಡಿಯಾದ ಕನಸು ಈಗ ನನಸಾಗುವ ಕಾಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆ ಅನುಷ್ಠಾನಕ್ಕೆ ಆಗಸ್ಟ್ 21ರಂದು ಚಾಲನೆ ನೀಡುತ್ತಿದ್ದಾರೆ. ಈ ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಸೌಲಭ್ಯ ಲಭ್ಯವಾಗಲಿದೆ ಇಲ್ಲಿದೆ ವಿವರ...
ಭಾರತೀಯ ಅಂಚೆ ಕಚೇರಿಗಳಿಗೆ ಪೇಮೆಂಟ್ ಬ್ಯಾಂಕ್ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳುತ್ತಿದ್ದಂತೆ, ಸರಿ ಸುಮಾರು 34 ಕೋಟಿಗೂ ಅಧಿಕ ಖಾತೆದಾರರನ್ನು ಹೊಂದಲಿದೆ. ಈ ಮೂಲಕ ಅತಿದೊಡ್ಡ ಡಿಜಿಟಲ್ ವ್ಯವಹಾರ ಜಾಲ ಸ್ಥಾಪನೆಯಾಗಲಿದೆ.
ಅಂಚೆ ಪೇಮೆಂಟ್ಸ್ ಬ್ಯಾಂಕ್ (IPPB)ಗೆ ಆಗಸ್ಟ್ 21 ರಿಂದ ಜಾರಿಗೆ ಬರಲಿದ್ದು, ಪ್ರತಿ ಜಿಲ್ಲೆಗೆ ಕನಿಷ್ಟ ಒಂದು ಬ್ರ್ಯಾಂಚ್ ಸಿಗಲಿದ್ದು, ಆ ಭಾಗದ ಗ್ರಾಮೀಣ ಹಣಕಾಸು ಸೇವೆಗೆ ಅನುಕೂಲವಾಗಲಿದೆ. ಎರಡು ಶಾಖೆಗಳು ಸದ್ಯ ಪ್ರಾಯೋಗಿಕವಾಗಿ ಜಾರಿಯಲ್ಲಿವೆ. ಇದಲ್ಲದೆ, ಹಾಲಿ ಲಭ್ಯವಿರುದ ಅಂಚೆ ಕಚೇರಿ ಪೇಮೆಂಟ್ ಬ್ಯಾಂಕ್ ನ ಖಾತೆಗಳು 'ಜೀರೋ ಬ್ಯಾಲೆನ್ಸ್ ಖಾತೆ' ಗಳಾಗಿರುವುದು ವಿಶೇಷ.. ಇನ್ನಷ್ಟು ವಿವರ ಮುಂದಿದೆ..

ಬ್ಯಾಂಕ್ ಗಳಲ್ಲಿರುವಂತೆ ಪೇಮೆಂಟ್ ಸೇವೆ
ಬ್ಯಾಂಕ್ ಗಳಲ್ಲಿರುವಂತೆ ಆರ್.ಟಿ.ಜಿ.ಎಸ್., ನೆಫ್ಟ್, ಸೇರಿದಂತೆ ಆನ್ ಲೈನ್ ಪೇಮೆಂಟ್ ಸೇವೆಗಳನ್ನು ಅಂಚೆ ಕಚೇರಿಯಲ್ಲಿಯೂ ಲಭ್ಯವಾಗಲಿದೆ. ಸದ್ಯ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದವರು, ಎನ್.ಇ.ಎಫ್.ಟಿ, ಆರ್.ಟಿ.ಜಿ.ಎಸ್, ಐ.ಎಂ.ಪಿ.ಎಸ್. ಹಾಗೂ ಬಿಲ್ ಪಾವತಿಗೆ ಸೇವೆಗಳನ್ನು ಪಡೆಯಬಹುದು.

650 ಶಾಖೆಗಳಲ್ಲಿ ಪೇಮೆಂಟ್ ಬ್ಯಾಂಕ್
650 ಶಾಖೆಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ಸಿಗಲಿವೆ. ಅಂಚೆ ಕಚೇರಿಗಳ ಪಕ್ಕದಲ್ಲೇ 3,250 ಆಕ್ಸೆಸ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 11,000 ಅಂಚೆ ಸಿಬ್ಬಂದಿಯು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲಿದ್ದಾರೆ. ಒಟ್ಟಾರೆ, 35ಕೋಟಿಗೂ ಅಧಿಕ ಖಾತೆದಾರರನ್ನು ಹೊಂದಲಿದ್ದು, ಬೃಹತ್ ಬ್ಯಾಂಕಿಂಗ್ ಜಾಲ ಎನಿಸಲಿದೆ.

ಮೋದಿ ಕನಸಿನ ಯೋಜನೆ
ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಇನ್ನು ಕೆಲ ತಿಂಗಳುಗಳಲ್ಲಿ 3,500ಕ್ಕೂ ಅಧಿಕ ಸಿಬ್ಬಂದಿ ನೇಮಕಾತಿ ನಡೆಸಲಾಗುತ್ತಿದೆ. ದೇಶದ ಪ್ರತಿ ಜಿಲ್ಲೆಗಳಲ್ಲಿ ಒಂದು ಪೇಮೆಂಟ್ ಬ್ಯಾಂಕ್ ಶಾಖೆ ಅಥವಾ ಎಟಿಎಂ ಮಾದರಿ ಆಕ್ಸೆಸ್ ಪಾಯಿಂಟ್ ಸ್ಥಾಪಿಸುವುದು ಮೋದಿ ಅವರ ಕನಸಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಯೋಜನೆ ಪ್ರಾಯೋಗಿಕ ಹಂತದಲ್ಲಿ ಜಾರಿಯಲ್ಲಿತ್ತು.

ಕನಿಷ್ಟ 100 ರು ನೊಂದಿಗೆ ಬ್ಯಾಂಕ್ ಖಾತೆಗೆ ಚಾಲನೆ
* ಅಂಚೆ ಕಚೇರಿಯಲ್ಲಿ ಲಭ್ಯವಿರುವ ಸರಳ, ಸಫಲ ಹಾಗೂ ಸುಗಮ ಮಾದರಿ ಖಾತೆಗಳನ್ನು ತೆರೆಯಲು ಕನಿಷ್ಟ 10 ವರ್ಷವಾಗಿದ್ದರೆ ಸಾಕು. ಅಂಚೆ ಕಚೇರಿ ಕೆವೈಸಿ ಹಾಗೂ ಆರ್ ಬಿಐ ನಿಯಮಕ್ಕೆ ಅನುಸಾರವಾಗಿ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತದೆ.
* ಕನಿಷ್ಟ 100 ರು ನೊಂದಿಗೆ ಬ್ಯಾಂಕ್ ಖಾತೆಗೆ ಚಾಲನೆ ನೀಡಬಹುದು. ಗರಿಷ್ಠ ಮಿತಿ 1 ಲಕ್ಷ ರು. ಸರಳ ಖಾತೆಗೆ 50,000ರು ಎಂದು ನಿಗದಿ ಪಡಿಸಲಾಗಿದೆ. ಕನಿಷ್ಟ ಬ್ಯಾಲೆನ್ಸ್ ಇಲ್ಲದೆ ಕೂಡಾ ಕಾರ್ಯ ನಿರ್ವಹಿಸಲಿದೆ.












Click it and Unblock the Notifications