Get Updates
Get notified of breaking news, exclusive insights, and must-see stories!

China-Bhutan Talk: ಚೀನಾಗೆ ಹತ್ತಿರವಾಗುತ್ತಿರುವ ಭೂತಾನ್‌- ಭಾರತಕ್ಕೆ ಹೊಸ ಅಪಾಯ, ಅಲರ್ಟ್‌ ಆದ ಮೋದಿ ಸರ್ಕಾರ

ನವದೆಹಲಿ, ಅಕ್ಟೋಬರ್‌ 25: ಚೀನಾದೊಂದಿಗಿನ ಗಡಿ ವಿವಾದವನ್ನು ಇತ್ಯರ್ಥಪಡಿಸುವ ಒಪ್ಪಂದಕ್ಕೆ ಭೂತಾನ್‌ ಮುಂದಾಗಿದೆ. ಕಮ್ಯುನಿಸ್ಟ್ ದೇಶವಾದ ಚೀನಾದೊಂದಿದೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಭೂತಾನ್‌ ಬಯಸುತ್ತಿದೆ. ಇದು ಭಾರತಕ್ಕೆ ಹೊಸ ಅಪಾಯವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ. ಎರಡೂ ದೇಶಗಳು ಹತ್ತಿರವಾಗುತ್ತಿರುವುದನ್ನು ಗಮನಿಸುತ್ತಿರುವ ಭಾರತ ಸರ್ಕಾರ ಹೈ ಅಲರ್ಟ್‌ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಭೂತಾನ್ ವಿದೇಶಾಂಗ ಸಚಿವ ಥಂಡಿ ಡೋರ್ಜಿ ಅವರು ಮಂಗಳವಾರ ಬೀಜಿಂಗ್‌ನಲ್ಲಿ ಚೀನಾದ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನು ಭೇಟಿ ಮಾಡಿದ್ದಾರೆ. ಅವರು ಸೋಮವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಚರ್ಚಿಸಿದ್ದಾರೆ.

ಭೂತಾನ್ ಮತ್ತು ಚೀನಾ ನಡುವಿನ ಗಡಿ ವಿವಾದ ಕುರಿತು ಚರ್ಚೆ ನಡೆಸಿದ್ದಾರೆ. ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸುವುದರ ಬಗ್ಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

india-monitors-on-bhutan-china-border

ಬೆಳವಣಿಗೆ ಮೇಲೆ ನಿಗಾ ಇರಿಸಿದ ಮೋದಿ ಸರ್ಕಾರ

ಭೂತಾನ್-ಚೀನಾ ನಡುವಿನ ಮಾತುಕತೆಗಳ ಮೇಲೆ ಭಾರತ ನಿಗಾ ಇರಿಸಿದೆ. ಬೀಜಿಂಗ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭೂತಾನ್‌ ಪ್ರಯತ್ನಿಸುತ್ತಿದೆ. ಇಷ್ಟು ವರ್ಷಗಳ ಕಾಲ ಶತ್ರಗಳಾಗಿದ್ದ ಎರಡೂ ದೇಶಗಳು ಈಗ ಉತ್ತಮ ಸಂಬಂಧ ಹೊಂದುತ್ತಿರುವುದು ಭಾರತಕ್ಕೆ ಅಪಾಯವನ್ನು ತಂದೊಡ್ಡಲಿದೆ ಎನ್ನುವುದು ಭಾರತ ಸರ್ಕಾರದ ಅಭಿಪ್ರಾಯವಾಗಿದೆ.

ಚೀನಾದೊಂದಿಗೆ ನಡೆದ ಮಾತುಕತೆ ಕುರಿತು ಪ್ರತಿಕ್ರಿಯಿಸಿರುವ ಭೂತಾನ್‌ ವಿದೇಶಾಂಗ ಸಚಿವ ದೋರ್ಜಿ, 'ಎರಡೂ ಕಡೆಯವರು ಗಡಿ ವಿವಾದ ಇತ್ಯಾರ್ಥಪಡಿಸಿಕೊಳ್ಳಲು ಬಯಸಿದ್ದೇವೆ. ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ನಾವು ದೃಢವಾದ ನಿರ್ಣಯವನ್ನು ಕೈಗೊಳ್ಳಲಿದ್ದೇವೆ' ಎಂದು ಹೇಳಿದ್ದಾರೆ.

ಚೀನಾ ದೇಶವು ಯಾವಾಗಲೂ ಭೂತಾನ್‌ನ ಸ್ವಾತಂತ್ರ್ಯ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತದೆ ಎಂದು ಹಾನ್ ಡೋರ್ಜಿ ಹೇಳಿಕೆ ನೀಡಿದ್ದಾರೆ.

india-monitors-on-bhutan-china-border

ಈ ಕುರಿತು ಪ್ರತಿಕ್ರಿಯಿಸಿರುವ ಚೀನಾ, 'ಭೂತಾನ್‌ನೊಂದಿಗೆ ಸ್ನೇಹಪರವಾಗಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ. ಇದೊಂದು ಐತಿಹಾಸಿಕ ಬೆಳವಣಿಗೆಯಾಗಿದೆ. ಈ ಮಹತ್ವದ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ನಾವು ಯತ್ನಿಸುತ್ತೇವೆ. ಕಾನೂನು ರೂಪದಲ್ಲಿ ಚೀನಾ-ಭೂತಾನ್ ಸೌಹಾರ್ದ ಸಂಬಂಧವನ್ನು ಸರಿಪಡಿಸಲಿದ್ದೇವೆ. ಭೂತಾನ್‌ ಅಭಿವೃದ್ಧಿಗೆ ಸಹಾಯ ಮಾಡಲು ಚೀನಾ ಸಿದ್ಧವಾಗಿದೆ' ಎಂದು ಹೇಳಿದೆ.

ಭೂತಾನ್‌ ಗಡಿಯಲ್ಲಿ ಚೀನಾ ಅತಿಕ್ರಮಣ

ಭೂತಾನ್ ಮತ್ತು ಚೀನಾ ನಡುವಿನ ಗಡಿ ರೇಖೆಯು ಸುಮಾರು 764 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. 2020 ರಲ್ಲಿ ಚೀನಾ ಪೂರ್ವ ಭೂತಾನ್‌ನಲ್ಲಿರುವ ಸಕ್ತೆಂಗ್ ವನ್ಯಜೀವಿ ಅಭಯಾರಣ್ಯದ ಮೇಲೆ ಹಕ್ಕು ಸಾಧಿಸಿದೆ. ಭೂತಾನ್ ಈ ಹಕ್ಕನ್ನು ತಿರಸ್ಕರಿಸಿದೆ.

ಭೂತಾನ್‌ ಮತ್ತು ಚೀನಾ ದೇಶಗಳು ಆಗಸ್ಟ್ 2016 ರಲ್ಲಿ 24 ಸುತ್ತಿನ ಗಡಿ ಮಾತುಕತೆಗಳನ್ನು ನಡೆಸಿದ್ದವು. ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದಿದ್ದರಿಂದ ಮಾತುಕತೆಗಳು ಸ್ಥಗಿತಗೊಂಡವು.

india-monitors-on-bhutan-china-border

ಭಾರತದ ಆತಂಕವೇನು?

ಪಶ್ಚಿಮ ಭೂತಾನ್‌ನಲ್ಲಿರುವ ಡೋಕ್ಲಾಮ್‌ನ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಭೂತಾನ್ ತನ್ನ ಹಕ್ಕನ್ನು ಬಿಟ್ಟುಕೊಡುವ ಸಾಧ್ಯತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಚೀನಾ ಡೋಕ್ಲಾಮ್ ಪ್ರಸ್ಥಭೂಮಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ, ಅದು ಭಾರತದ ಆಯಕಟ್ಟಿನ ಜಾಗಗಳ ಮೇಲೆ ಪ್ರವೇಶವನ್ನು ಪಡೆದಂತಾಗುತ್ತದೆ. ಭಾರತದ ಈಶಾನ್ಯ ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಕಿರಿದಾದ ಭೂಪ್ರದೇಶವಾದ ಸಿಲಿಗುರಿ ಕಾರಿಡಾರ್ ಅನ್ನು ನಿರ್ಬಂಧಿಸಲು ಚೀನಾಗೆ ಸುಲಭವಾಗುತ್ತದೆ.

ಭೂತಾನ್ ಪ್ರಸ್ತುತ ಚೀನಾದೊಂದಿಗೆ ಅಥವಾ ವಿಶ್ವಸಂಸ್ಥೆಯ ಇತರ ನಾಲ್ಕು ಖಾಯಂ ಸದಸ್ಯರೊಂದಿಗೆ ಯಾವುದೇ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ಆದರೂ, ಭೂತಾನ್‌ನೊಂದಿಗೆ ಚೀನಾ ಮಾತುಕತೆಗೆ ಒಪ್ಪಿಕೊಂಡಿರುವ ಹಿಂದೆ ಬೇರೆಯದೇ ತಂತ್ರವಿದೆ ಎಂದು ಹೇಳಲಾಗುತ್ತಿದೆ.

ಚೀನಾದ ಈ ತಂತ್ರವು ಭಾರತದ ಗಡಿಯಲ್ಲಿ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿದೆ ಎಂಬುದು ಭಾರತ ಸರ್ಕಾರದ ಅಭಿಪ್ರಾಯವಾಗಿದೆ.

ಚೀನಾದೊಂದಿಗೆ ಗಡಿ ಮಾತುಕತೆಯನ್ನು ಭೂತಾನ್ ಚುರುಕುಗೊಳಿಸಿದಾಗಿನಿಂದ, ಭಾರತದ ಭದ್ರತಾ ಪಡೆಯು ಅಲರ್ಟ್‌ ಆಗಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಮಟ್ಟದಲ್ಲೂ ಮಹತ್ವದ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

2017 ರಲ್ಲಿ ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ ರಸ್ತೆ ನಿರ್ಮಿಸಲು ಚೀನಾ ನಡೆಸಿದ ಪ್ರಯತ್ನಗಳ ವಿರುದ್ಧ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಇದು ಭಾರತ-ಚೀನಾದ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+